ಬ್ರೇಕಿಂಗ್ ನ್ಯೂಸ್
19-09-23 08:15 pm Mangalore Correspondent ಕರಾವಳಿ
ಉಳ್ಳಾಲ, ಸೆ.19: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ವಿರೋಧ, ವಿಘ್ನಗಳು ಎದುರಾದರೂ ಇಂದು ಅದೇ ಸಭಾಂಗಣದಲ್ಲೇ ಉಪ ಕುಲಪತಿಗಳ ಸಮಕ್ಷಮದಲ್ಲಿ ವಿಘ್ನ ವಿನಾಶಕನ ವಿಗ್ರಹ ಪ್ರತಿಷ್ಠಾಪಿಸಿ ಉತ್ಸವ ಆಚರಿಸಲಾಯಿತು.
ಮುಂಜಾನೆಯೇ ಪರಿಸರ ಸ್ನೇಹಿ ಬಣ್ಣ ಲೇಪನವಿಲ್ಲದ ಸಣ್ಣ ಗಾತ್ರದ ಮಣ್ಣಿನ ಗಣೇಶನ ವಿಗ್ರಹವನ್ನು ಮಂಗಳಾ ಸಭಾಂಗಣದ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ವಿ.ವಿ ಸಭಾಂಗಣದಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿ.ವಿ. ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿ ಉಪ ಕುಲಪತಿ ಜಯರಾಜ್ ಅಮೀನ್ ಅವರೇ ಖುದ್ದು ಪುರೋಹಿತರ ಜತೆ ವೈದಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.


ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ವಿ.ವಿ ಆಡಳಿತದ ಸೂಚನೆಯಂತೆ ಶಾಲನ್ನ ತೆಗೆದು ಗಣೇಶೋತ್ಸವದಲ್ಲಿ ಪಾಲ್ಗೊಂಡರು.
ವಿ.ವಿ.ಯಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ ಎಂದು ಚಾಲೆಂಜ್ ಮಾಡಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.


ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಗಣೇಶೋತ್ಸವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗಣಪತಿಯ ಮೇಲೆ ನಂಬಿಕೆ ಇಟ್ಟವರು ಅಂತಹ ಕೆಲಸ ಮಾಡಲ್ಲ. ಯಾವುದೇ ಸರಕಾರವಾಗಲಿ ಇಂತಹ ದೃಷ್ಟಿಕೋನ ಇಟ್ಟುಕೊಂಡಿರಬೇಕು. ವಿ.ವಿಯಲ್ಲಿ ನಡೆದ ಗೊಂದಲವನ್ನು ಉಪಕುಲಪತಿಗಳು ಬಗೆಹರಿಸಿ ಗಣೇಶೋತ್ಸವವನ್ನ ಸಾಂಗವಾಗಿ ನಡೆಸಿದ್ದು ಶ್ಲಾಘನೀಯ. ಹಿಂದೂ ರಾಷ್ಟ್ರವಾಸಿಗಳು ಇಲ್ಲಿನ ಧರ್ಮ, ಸಂಸ್ಕೃತಿಯ ಮೂಲ ಆಚರಣೆ, ಆರಾಧನೆಗಳಿಗೆ ತೊಂದರೆಯಾಗದಂತೆ ಬಾಳಬೇಕಿದೆ. ಹಿಂದೂಗಳು ಅನ್ಯ ಧರ್ಮೀಯರ ಉತ್ಸವಗಳಿಗೆ ಕಲ್ಲೆಸೆದ ನಿದರ್ಶನಗಳೇ ಇಲ್ಲ. ಸಾಮರಸ್ಯ, ಸಮನ್ವಯದಿಂದ ಬದುಕುವುದೇ ಹಿಂದೂಗಳ ಆಶಯ ಎಂದರು.
ಮಂಗಳೂರು ವಿ.ವಿ. ಕುಲಸಚಿವ ಕೆ.ರಾಜು ಮಾತನಾಡಿ ಕ್ಯಾಂಪಸ್ಸಿನಲ್ಲಿ ಗಣೇಶೋತ್ಸವ ನಡೆಸುವ ಕುರಿತು ಗೊಂದಲಗಳು ಉಂಟಾದಾಗ ಸರಕಾರದ ಗಮನಕ್ಕೆ ತರಲಾಗಿತ್ತು. ಸರಕಾರದ ಆದೇಶದಂತೆ ಸರಳವಾಗಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಹಣ ಹೊಂದಿಸಿ ಸಿಬ್ಬಂದಿ ವರ್ಗ ಸೇರಿಕೊಂಡು ಗಣೇಶೋತ್ಸವ ಆಚರಿಸಿದ್ದೇವೆ ಎಂದರು.
Mangalore University Ganeshotsava celebrated in campus amid opposition with Kalladka Prabhakar Bhat. Ganeshotsava was celebrated in Mangala Auditorium of the Mangaluru University on Tuesday in the presence of vice-chancellor by keeping a small colourless idol of Ganesha despite opposition amidst police security.
08-04-26 08:44 pm
HK News Staffer
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm