ಬ್ರೇಕಿಂಗ್ ನ್ಯೂಸ್
17-09-23 01:29 pm Udupi Correspondent ಕರಾವಳಿ
ಉಡುಪಿ, ಸೆ.17: ಬಿಜೆಪಿ ಟಿಕೆಟ್ ನೀಡುವುದಾಗಿ ಕೋಟಿ ಕೋಟಿ ಪಡೆದು ವಂಚಿಸಿರುವ ಪ್ರಕರಣದಲ್ಲಿ ಚೈತ್ರಾ ಮತ್ತು ಗ್ಯಾಂಗಿನ ಸದಸ್ಯರು ಕೂಡಿಟ್ಟಿರುವ ಹಣದ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಬ್ಯಾಂಕ್ ಖಾತೆಗಳು ಮತ್ತು ಆಸ್ತಿಗಳನ್ನು ಜಾಲಾಡಿದ್ದಾರೆ. ಈ ವೇಳೆ, ಚೈತ್ರಾ ಮತ್ತು ಆಪ್ತ ಶ್ರೀಕಾಂತ್ ತಮ್ಮ ಹೆಸರಲ್ಲಿ ಕೋಟ್ಯಂತರ ಆಸ್ತಿ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನ ಶ್ರೀರಾಮ ಸೊಸೈಟಿಯಲ್ಲಿ ಆರೋಪಿ ಶ್ರೀಕಾಂತ್ ಹೆಸರಲ್ಲಿ ಇಟ್ಟಿರುವ ಒಂದು ಕೋಟಿ ರೂ. ಮೌಲ್ಯದ ಬಾಂಡ್ ಮತ್ತು 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂ. ನಗದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಇದನ್ನು ಆರೋಪಿ ಚೈತ್ರಾಳೇ ತನ್ನ ಆಪ್ತ ಶ್ರೀಕಾಂತ್ ಹೆಸರಲ್ಲಿ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸಿಸಿಬಿ ವಿಚಾರಣೆಯಲ್ಲಿ ಬಂಧಿತ ಶ್ರೀಕಾಂತ್ ಹಣ, ಆಭರಣಗಳನ್ನು ಶ್ರೀರಾಮ್ ಸೊಸೈಟಿಯಲ್ಲಿ ಇಟ್ಟಿರುವುದಾಗಿ ಹೇಳಿದ್ದ. ಇದರಂತೆ, ಆತನನ್ನು ಉಪ್ಪೂರಿಗೆ ಕರೆತಂದು ಶ್ರೀರಾಮ ಸೊಸೈಟಿಯ ಲಾಕರ್ ತೆರೆಸಿದಾಗ ಒಂದು ಕೋಟಿ ರೂ. ಮೌಲ್ಯದ ಬಾಂಡ್ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಕಾನೂನು ಪ್ರಕಾರ, ಈ ಆಸ್ತಿಯನ್ನು ಜಪ್ತಿ ಮಾಡಲಾಗುವುದು. ಆರೋಪಿಗಳು ವಂಚನೆಯ ಹಣದಲ್ಲಿಯೇ ಇವುಗಳನ್ನು ಕೂಡಿಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಚೈತ್ರಾ ಬ್ಯಾಂಕ್ ಖಾತೆಗಳು ಜಪ್ತಿ
ಇದೇ ವೇಳೆ, ಆರೋಪಿ ಚೈತ್ರಾಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಆಕೆಯ ಹೆಸರಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ. ಇದಲ್ಲದೆ, ಚೈತ್ರಾ ತನ್ನ ಸ್ವಂತ ಊರಿನಲ್ಲಿ ಎರಡಂತಸ್ತಿನ ಮನೆಯನ್ನು ಕಟ್ಟುತ್ತಿರುವುದು ಪತ್ತೆಯಾಗಿದ್ದು, ಅದನ್ನು ಪೂರ್ತಿಯಾಗಿ ಶ್ರೀಕಾಂತನೇ ನೋಡಿಕೊಳ್ಳುತ್ತಿದ್ದ. ಆತನ ಉಸ್ತುವಾರಿಯಲ್ಲೇ ಮನೆಯನ್ನು ಕಟ್ಟಲಾಗುತ್ತಿತ್ತು ಅನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಸ್ವಾಮೀಜಿ ಪರ ನಿರೀಕ್ಷಣಾ ಜಾಮೀನು
ಇದೇ ವೇಳೆ, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಅವರ ಪರವಾಗಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆಯನ್ನು ಕೋರ್ಟ್ ಸೆ.19ಕ್ಕೆ ಮುಂದೂಡಿದೆ. ಸ್ವಾಮೀಜಿ ಪರವಾಗಿ ಪುತ್ತೂರಿನ ವಕೀಲ ಅರುಣ್ ಶ್ಯಾಮ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸ್ವಾಮೀಜಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದು, ಅವರ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
The CCB police in Bengaluru have searched bank accounts and properties in connection with the money stashed away by Chaitra and her gang members in a case of cheating them of crores of rupees by promising them BJP tickets. During the investigation, it was found that Chaitra and her close friend Srikanth had amassed assets worth crores of rupees in their name.
21-08-25 12:58 pm
Bangalore Correspondent
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 11:57 am
Mangalore Correspondent
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm