ಬ್ರೇಕಿಂಗ್ ನ್ಯೂಸ್
16-09-23 08:26 pm Mangalore Correspondent ಕರಾವಳಿ
ಮಂಗಳೂರು, ಸೆ.16: ರಾಜ್ಯ ಗುಪ್ತಚರ ಇಲಾಖೆಯ ಮಂಗಳೂರಿನ ಕೊಟ್ಟಾರದ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ರಾಜೇಶ್ ಬಿ.ಯು. (53) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಕೊಟ್ಟಾರದಲ್ಲಿರುವ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ರಾಜೇಶ್ ಇಂದು ಮಧ್ಯಾಹ್ನ ಎದೆನೋವೆಂದು ಹೇಳಿ ಮಲಗಿದ್ದರು. ಕೂಡಲೇ ಇತರ ಸಿಬಂದಿ ನಿರ್ಲಕ್ಷ್ಯ ಮಾಡಬೇಡಿ ಅಂತ ಹೇಳಿ, ಅವರನ್ನು ಆಟೋದಲ್ಲಿ ಎಜೆಗೆ ಕರೆದೊಯ್ದಿದ್ದಾರೆ. ಈ ವೇಳೆ, ಸಹಜವಾಗಿದ್ದ ಅವರು ಮೊದಲ ಮಹಡಿಯಿಂದ ಕೆಳಗೆ ಇಳಿದು ಬಂದಿದ್ದಾರೆ. ಆಟೋದಲ್ಲಿದ್ದಾಗ ಆಸ್ಪತ್ರೆಗೆ ತೆರಳಿದ್ದ ತಾಯಿ ಜೊತೆಗೂ ಫೋನಲ್ಲಿ ಮಾತನಾಡಿದ್ದಾರೆ. ಎಜೆ ಆಸ್ಪತ್ರೆಯ ಹೊರಭಾಗದಲ್ಲಿ ಇಳಿಯುವ ವರೆಗೂ ಸಹಜ ಉಸಿರಾಟದಲ್ಲೇ ಇದ್ದರು. ಒಳಗೆ ಹೋದ ಕೆಲಹೊತ್ತಿನಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಮೂಲತಃ ವಾಮಂಜೂರು ನಿವಾಸಿಯಾಗಿದ್ದು ನಗರದ ಉರ್ವ ಮಾರಿಗುಡಿ ಬಳಿಯ ವೇಲ್ಸ್ ಪೇಟೆಯಲ್ಲಿ ಮನೆ ಹೊಂದಿದ್ದ ರಾಜೇಶ್ ಅವರ ಪತ್ನಿ ಪ್ರೇಮಾ ಮಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದಾರೆ. ಏಕೈಕ ಮಗ ಎಂಸಿಎ ಕಲಿಯುತ್ತಿದ್ದಾರೆ.
1993ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ರಾಜೇಶ್, ಸುರತ್ಕಲ್, ಪಣಂಬೂರು ಸೇರಿ ಹಲವು ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ಗುಪ್ತಚರ ಇಲಾಖೆಯಲ್ಲಿ ಮೂರು ವರ್ಷಗಳಿಂದ ಎಎಸ್ಐ ಆಗಿದ್ದು ಇದೇ ತಿಂಗಳಲ್ಲಿ ಎಸ್ಐ ಆಗಿ ಭಡ್ತಿ ಪಡೆಯಲಿದ್ದರು. ಪ್ರಮೋಷನ್ ಲಿಸ್ಟ್ ನಲ್ಲಿ ಅವರ ಹೆಸರಿತ್ತು ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ.
Police Intellegence departmemt ASI Rajesh dies of heart attack while on duty in Mangalore. He was a native of Vamamjoor in Mangalore.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 02:05 pm
Mangalore Correspondent
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm