ಬ್ರೇಕಿಂಗ್ ನ್ಯೂಸ್
16-09-23 04:05 pm Mangalore Correspondent ಕರಾವಳಿ
ಮಂಗಳೂರು, ಸೆ.16: ವಾರದ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿ ಹಾವನ್ನು ನರಳುವಂತೆ ಮಾಡಿದ್ದ ವ್ಯಕ್ತಿಯೊಬ್ಬ ಈಗ ಆ ಹಾವಿನಂತೆಯೇ ಉರಿಯಿಂದ ನರಳತೊಡಗಿದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ಸಮೀಪ ಸೆ.5ರಂದು ನಾಗರ ಹಾವು ಕಂಡುಬಂದಿತ್ತು. ಕಟ್ಟಡದಲ್ಲಿ ವಾಚ್ ಮೇನ್ ಆಗಿದ್ದ ಬೆಳಗಾವಿ ಮೂಲದ ವ್ಯಕ್ತಿ ಹಾವಿಗೆ ಡೀಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು. ಸ್ಥಳೀಯರು ಬಳಿಕ ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿದ್ದರು. ಅವರು ಹಾವನ್ನು ಹಿಡಿದು ಚಿಕಿತ್ಸೆ ನೀಡಿದ್ದಲ್ಲದೆ, ಮೈಗೆ ಶಾಂಪೂ ಹಾಕಿ ತೊಳೆದು ಶುಚಿ ಮಾಡಿದ್ದರು. ಆನಂತರ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದರು.
ಆದರೆ ಹಾವಿಗೆ ಡಿಸೇಲ್ ಎರಚಿದ್ದ ಕಾರ್ಮಿಕ ವ್ಯಕ್ತಿಗೆ ವಾರ ಕಳೆಯುವಷ್ಟರಲ್ಲಿ ಮೈ ಉರಿ ಬರತೊಡಗಿದೆ. ಮೈಯಲ್ಲಿ ಕೆಂಪು ಬೊಕ್ಕ ಕಂಡುಬಂದಿದ್ದು ಉರಿಯಿಂದ ನರಳಲು ಶುರು ಮಾಡಿದ್ದ. ಬಳಿಕ ಆತನ ಕುಟುಂಬಸ್ಥರು ಊರಿಗೆ ಮರಳಲು ತಿಳಿಸಿದಂತೆ, ಕುಟುಂಬ ಸಮೇತ ವಾಚ್ ಮೆನ್ ಕೆಲಸ ಬಿಟ್ಟು ಊರಿಗೆ ತೆರಳಿದ್ದಾರೆ.
ತುಳುನಾಡಿನಲ್ಲಿ ನಾಗರ ಹಾವನ್ನು ದೇವರೆಂದೇ ಪೂಜಿಸುತ್ತಾರೆ. ಹಾವಿಗೆ ಕಲ್ಲು ಹೊಡೆಯುವುದು, ಬಿಸಿ ನೀರು ಎರಚಿದರೂ ದೋಷ ಬರುತ್ತೆ ಎಂಬ ನಂಬಿಕೆಯಿದೆ. ಬೆಳಗಾವಿಯ ವ್ಯಕ್ತಿ ಡೀಸೆಲ್ ಎರಚಿದ್ದರಿಂದ ಹಾವು ಉರಿಯಿಂದ ಸಾಯುವ ಸ್ಥಿತಿ ಬಂದಿತ್ತು. ಇದೇ ಕಾರಣದಿಂದ ಹಾವಿನ ದೋಷ ಆ ವ್ಯಕ್ತಿಗೆ ತಾಗಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿಬಂದಿದೆ.
Mangalore Man suffers with burning sensation after throwing diesel on snake Cobra in Kinnigoli.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am