ಬ್ರೇಕಿಂಗ್ ನ್ಯೂಸ್
30-10-20 07:43 pm Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್ 30 :ನಗರದ ಫಳ್ನೀರ್ ನಲ್ಲಿ ಹೊಟೇಲಿಗೆ ಬಂದಿದ್ದ ನಾಲ್ವರು ಯುವಕರ ತಂಡ, ತಿಂಡಿ ವಿಚಾರದಲ್ಲಿ ಗಲಾಟೆ ನಡೆಸಿ ಸಿಬಂದಿ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಫಳ್ನೀರ್ ನಲ್ಲಿರುವ ಎಂಎಫ್ ಸಿ ಹೊಟೇಲ್ ನಲ್ಲಿ ಸಂಜೆ 5.30ರ ಸುಮಾರಿಗೆ ಘಟನೆ ನಡೆದಿದೆ. ಇಬ್ಬರು ಸಿಬಂದಿಗೆ ತೀವ್ರ ಹಲ್ಲೆ ನಡೆಸಿದ್ದು ಆಬಳಿಕ ಸ್ಥಳೀಯರು ಜೊತೆ ಸೇರಿ ದಾಂಧಲೆಗೈದ ಯುವಕರನ್ನು ಹಿಡಿಯಲು ಯತ್ನಿಸಿದ್ದಕ್ಕೆ ಗುಂಡು ಹಾರಿಸಿದ್ದಾರೆ. ಈ ವೇಳೆ, ಇಬ್ಬರು ಹೊಟೇಲ್ ಸಿಬಂದಿಗೆ ಗುಂಡೇಟು ತಗಲಿದೆ.

ಸಂಜೆ ಹೊತ್ತಿಗೆ ಫಳ್ನೀರ್ ಬಳಿಯ ಎಂಎಫ್ಸಿ ಹೊಟೇಲಿಗೆ ನಾಲ್ವರು ಯುವಕರು ಬಂದಿದ್ದು ತಿಂಡಿ ಕೇಳಿದ್ದಾರೆ. ಸಮೋಸಾ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಬಳಿಕ ಹೊಟೇಲಿನಲ್ಲಿ ದಾಂಧಲೆ ನಡೆಸಿದ್ದಾರೆ. ಗಾಜು, ಪೀಠೋಪಕರಣಕ್ಕೆ ಹಾನಿಗೈದಿದ್ದಾರೆ. ಸ್ಥಳೀಯರು ಸೇರಿದಾಗ, ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಮತ್ತಿಬ್ಬರು ಆಟೋ ಹತ್ತಿಕೊಂಡು ಪರಾರಿಯಾಗಿದ್ದಾರೆ. ನಾಲ್ವರು ಸಿಬಂದಿಗೆ ಗಾಯಗಳಾಗಿದ್ದು ವೆನ್ಲಾಕ್ ಮತ್ತು ಅಥೆನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಪೂರ್ವ ದ್ವೇಷದಲ್ಲಿ ತಂಡ ಕಟ್ಟಿಕೊಂಡು ಬಂದು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವಕರು ಉಳ್ಳಾಲದವರೆಂದು ಸಿಬಂದಿ ತಿಳಿಸಿದ್ದಾರೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ
In a shocking incident, a group of anonymous attackers on Friday, October 30 fired gunshots at MFC hotel located in Falnir, Mangalore.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm