ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಕುಪ್ಪೆಪದವು ; 25ಕ್ಕೂ ಹೆಚ್ಚು ಮನೆಗಳಲ್ಲಿ ತೀವ್ರ ಜ್ವರ ಬಾಧೆ, ಕಾಡಿದೆ ಕೊರೊನಾ, ಡೆಂಗ್ಯು ಭಯ !! 

05-08-20 01:44 pm       Mangalore Reporter   ಕರಾವಳಿ

ಮಂಗಳೂರು ತಾಲೂಕಿನಲ್ಲಿಯೇ ದಿನವೂ 150ರಷ್ಟು ಮಂದಿಗೆ ಸೋಂಕು ತಗಲುತ್ತಿದೆ. ಇದೇ ವೇಳೆ, ಕೆಲವು ಗ್ರಾಮಗಳಲ್ಲಿ ಜ್ವರ ಬಾಧೆ ತೀವ್ರಗೊಂಡಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಜ್ವರದಿಂದ ಮಲಗುವಂತಾಗಿದೆ. 

ಮಂಗಳೂರು, ಆಗಸ್ಟ್ 5: ಮಂಗಳೂರಿನಲ್ಲಿ ಕೊರೊನಾ ಸೋಂಕು ಒಂದೆಡೆ ಎರ್ರಾಬಿರ್ರಿ ಎನ್ನುವಂತೆ ಹರಡುತ್ತಿದ್ದರೆ, ಮತ್ತೊಂದೆಡೆ ಜ್ವರ ಬಾಧೆ ಗ್ರಾಮ ಗ್ರಾಮಕ್ಕೂ ದಾಳಿ ಇಟ್ಟಿದೆ. ಮಂಗಳೂರು ತಾಲೂಕಿನಲ್ಲಿಯೇ ದಿನವೂ 150ರಷ್ಟು ಮಂದಿಗೆ ಸೋಂಕು ತಗಲುತ್ತಿದೆ. ಇದೇ ವೇಳೆ, ಕೆಲವು ಗ್ರಾಮಗಳಲ್ಲಿ ಜ್ವರ ಬಾಧೆ ತೀವ್ರಗೊಂಡಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಜ್ವರದಿಂದ ಮಲಗುವಂತಾಗಿದೆ. 

ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿಯ ಆಚಾರಿ ಜೋರ ಎಂಬ 5 ಸೆನ್ಸ್ ಕಾಲನಿಯಲ್ಲಿ ಜ್ವರ ವ್ಯಾಪಕವಾಗಿ ಹಬ್ಬಿದ್ದು 25 ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಜ್ವರದಿಂದ ಬಳಲುತ್ತಿದ್ದಾರೆ. ಜನರ ಸ್ಥಿತಿ ಹೀಗಿದ್ದರೂ ಈ ಭಾಗದಲ್ಲಿ ಯಾರು ಕೂಡ ಆಶಾ ಕಾರ್ಯಕರ್ತರು ಬರುತ್ತಿಲ್ಲ. ಕುಪ್ಪೆಪದವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಅಲ್ಲಿನ ಸಿಬಂದಿ ತಮಗೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಅಲ್ಲಿನ ಜನ ನೋವು ವ್ಯಕ್ತಪಡಿಸಿದ್ದಾರೆ. 

ಒಂದೆಡೆ ಕೊರೊನಾ, ಮತ್ತೊಂದೆಡೆ ಡೆಂಗ್ಯು, ಮಲೇರಿಯಾ ಹಾವಳಿ. ಇನ್ನೊಂದೆಡೆ ಒಂದೇ ಸಮನೆ ಹೊಡೆಯುತ್ತಿರುವ ಮಳೆ ಕರಾವಳಿಯಲ್ಲಿ ಹಳ್ಳಿ ಕಡೆಯ ಜನರನ್ನು ಹೈರಾಣು ಮಾಡಿದೆ. ಎಲ್ಲೆಡೆ ಮಲೇರಿಯಾ, ಡೆಂಗ್ಯು ಭೀತಿ ಎದುರಾಗಿದ್ದರೂ, ಜಿಲ್ಲಾಡಳಿತ ಈ ಬಗ್ಗೆ ಇನ್ನೂ ಎಚ್ಚತ್ತುಕೊಂಡಿಲ್ಲ. ಆಚಾರಿ ಜೋರ ಕಾಲನಿಯಲ್ಲಿ ಒಂದು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಮುಂಬೈನಿಂದ ಬಂದಿದ್ದ ಯುವಕ ಮೃತಪಟ್ಟಿದ್ದ. ಆನಂತರ ಕುಪ್ಪೆಪದವಿನಲ್ಲಿಯೂ ಕೊರೊನಾ ಸೋಂಕಿಗೆ ಮತ್ತೊಬ್ಬ ವೃದ್ಧ ಬಲಿಯಾಗಿದ್ದರು. ಹೀಗಾಗಿ ಈ ಭಾಗದ ಜನರಲ್ಲಿ ಕೊರೊನಾ ಭೀತಿಯೂ ಮಡುಗಟ್ಟಿದೆ. ಕೂಡಲೇ ಈ ಪ್ರದೇಶಕ್ಕೆ ಮಂಗಳೂರು ತಹಸೀಲ್ದಾರ್ ಭೇಟಿಯಾಗಿ ತುರ್ತು ಆರೋಗ್ಯ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.