ಬ್ರೇಕಿಂಗ್ ನ್ಯೂಸ್
03-05-23 10:39 pm Udupi Correspondent ಕರಾವಳಿ
ಉಡುಪಿ, ಮೇ 3 : ಕರಾವಳಿಯಲ್ಲಿ ನೀರಿಗಾಗಿ ಹಾಹಾಕಾರ ಎದ್ದಿರುವಾಗಲೇ ಮಣಿಪಾಲ ಎಂಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕರ ತಂಡವೊಂದು ಅಂತರ್ಜಲದ ಬಗ್ಗೆ ಅಧ್ಯಯನ ಕೈಗೊಂಡಿದ್ದು ಭಾರೀ ಪ್ರಮಾಣದ ಭೂಮಿಯೊಳಗಿನ ಅಂತರ್ಜಲ ಒರತೆಯ ರೂಪದಲ್ಲಿ ಕರಾವಳಿ ಭಾಗದಲ್ಲಿ ಸಮುದ್ರ ಸೇರುತ್ತಿದೆ ಎಂದು ಪತ್ತೆ ಮಾಡಿದ್ದಾರೆ.
ಎಂಐಟಿ ಪ್ರಾಧ್ಯಾಪಕರಾದ ಡಾ.ಕೆ.ಬಾಲಕೃಷ್ಣ, ಡಾ.ಎಚ್.ಎನ್.ಉದಯಶಂಕರ್ ಹಾಗೂ ಸಂಶೋಧನಾ ವಿದ್ಯಾರ್ಥಿ ಲಿನೊ ಯೋವನ್ ನೇತೃತ್ವದ ಸಂಶೋಧನಾ ತಂಡ, ಉಡುಪಿ ಜಿಲ್ಲೆಯ ಬೀಜಾಡಿ, ಕಾಪು, ಮಲ್ಪೆ, ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂತರ್ಜಲವು ಒರತೆಯ ರೂಪದಲ್ಲಿ ಅರಬ್ಬಿ ಸಮುದ್ರ ಸೇರುತ್ತಿರುವುದನ್ನು ವರದಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಂತರ್ಜಲ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಈ ಸಂಶೋಧನೆ ಪ್ರಾಮುಖ್ಯ ಪಡೆದಿದೆ. ಸಮುದ್ರ ತೀರದಲ್ಲಿ ಕಾಣಸಿಗುವ ಈ ಒರತೆಗಳು ತಾಜಾ ಅಂತರ್ಜಲದ ಮೂಲವಾಗಿದ್ದು, ಸಮುದ್ರ ಪಾಲಾಗುತ್ತಿರುವುದನ್ನು ತೋರಿಸಿದೆ. ಸಿಹಿ ನೀರಿನ ಒಂದು ಭಾಗವನ್ನು ಸುಸ್ಥಿರವಾಗಿ ಕುಡಿಯುವ ನೀರಾಗಿ ಬಳಸಲು ಸಾಧ್ಯವಾದಲ್ಲಿ, ನೀರಿನ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನೀಗಿಸಬಹುದು. ನದಿಗಳು ನೀರನ್ನು ಸಾಗರಕ್ಕೆ ಪ್ರವಹಿಸುವಂತೆ ಭೂಮಿಯ ಅಡಿಯಲ್ಲಿ ಹುದುಗಿರುವ ಅಂತರ್ಜಲವು ಶೇ.10 ರಷ್ಟು ಸಿಹಿ ನೀರನ್ನು ಸಾಗರದೆಡೆಗೆ ಪ್ರವಹಿಸುವುದನ್ನು ಇತರೆಡೆ ನಡೆದ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.
ಆದಾಗ್ಯೂ ದೇಶದ ಉದ್ದಕ್ಕೂ ಇರುವ ಕರಾವಳಿಯಲ್ಲಿ ಬೇರಾವುದೇ ಕಡೆ ಇಂತಹ ಯಾವುದೇ ಸಂಶೋಧನೆಗಳು ನಡೆದಿಲ್ಲ. ಅಥವಾ ಅಂತರ್ಜಲ ಸಮುದ್ರ ಸೇರುವುದು ಪತ್ತೆಯಾಗಿಲ್ಲ. ಇದರ ಪ್ರಾಮುಖ್ಯತೆ ಗುರುತಿಸಿ, ಭಾರತ ಸರಕಾರದ ಭೂವಿಜ್ಞಾನ ಸಚಿವಾಲಯವು ತಿರುವನಂತಪುರದ ರಾಷ್ಟ್ರೀಯ ಭೂವಿಜ್ಞಾನ ಅಧ್ಯಯನ ಕೇಂದ್ರಕ್ಕೆ (ಎನ್ಸಿಇಎಸ್ಎಸ್) ಈ ಜವಾಬ್ದಾರಿಯನ್ನು ವಹಿಸಿದೆ. ಎಂಐಟಿ ಮಣಿಪಾಲವು ಈ ಸಂಸ್ಥೆಯ ಪ್ರಮುಖ ಪಾಲುದಾರರಾಗಿದ್ದು ಉಡುಪಿ- ಉತ್ತರ ಕನ್ನಡ ಕರಾವಳಿಯಲ್ಲಿ ಅಂತರ್ಜಲ ನಿಕ್ಷೇಪಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ.
ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಹೊರಸೂಸುತ್ತಿರುವ ಗಮನಾರ್ಹ ಪ್ರಮಾಣದ ಅಂತರ್ಜಲವು ಇಲ್ಲಿ ಬೀಳುತ್ತಿರುವ ಭಾರೀ ಮಳೆ ಹಾಗೂ ಈ ಪ್ರದೇಶದ ಭೂ ಮೇಲ್ಮೈಯಲ್ಲಿ ಹರಡಿರುವ ಸುಮಾರು 40,000 ವರ್ಷ ಹಳೆಯ ಜಲಭರಿತ ಮಡ್ಡಿಯ ನಿಕ್ಷೇಪಗಳಿಂದ ಸಾಧ್ಯವಾಗಿದೆ. ಈ ವಿಶೇಷ ಮಡ್ಡಿಯು ಗಣನೀಯ ಪ್ರಮಾಣದ ಮಳೆನೀರನ್ನು ತನ್ನೊಡಲಲ್ಲಿ ಹುದುಗಿಸಿ, ಸಮುದ್ರದೆಡೆಗೆ ಪ್ರವಹಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಮಾಣದ ಅಂತರ್ಜಲ ಹೊರಸೂಸುವಿಕೆಯಿಂದ ಈ ಪ್ರದೇಶಗಳನ್ನು ಸಂಭಾವ್ಯ ಉಪ್ಪು ನೀರು ಒಳನುಗ್ಗುವಿಕೆಯಿಂದ ರಕ್ಷಿಸುತ್ತದೆ ಎಂದು ಸಂಶೋಧನಾ ವರದಿಯ ಲೇಖಕ ಲಿನೊ ಯೋವನ್ ಹೇಳಿದ್ದಾರೆ.
Greater volumes of groundwater into the ocean a concern now in Karavali region. They found that dry, arid regions have very little groundwater discharge, opening the limited groundwater supplies.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
08-02-26 10:18 pm
HK News Desk
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm