ಬ್ರೇಕಿಂಗ್ ನ್ಯೂಸ್
27-10-20 06:33 pm Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್ 27 : ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊನೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಮೇಲಿನಿಂದ ಕಂಟೇನರ್ ಲಾರಿ ಹರಿದು ಬೈಕಿನಲ್ಲಿದ್ದ ದಂಪತಿ ದುರಂತ ಸಾವು ಕಂಡಿದ್ದಾರೆ. ಹಿಂಬದಿ ಸವಾರೆಯಾಗಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಸವಾರಿ ಮಾಡುತ್ತಿದ್ದ ಯುವಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ರಾಯನ್ ಫೆರ್ನಾಂಡಿಸ್ (35) ಮತ್ತು ಅವರ ಪತ್ನಿ ಪ್ರಿಯಾ ಫೆರ್ನಾಂಡಿಸ್ (32) ಮೃತರು ಎಂದು ತಿಳಿದು ಬಂದಿದೆ. ಪ್ರಿಯಾ ಅವರನ್ನು ರಾಯನ್ ತಮ್ಮ ಕೆಟಿಎಂ ಬೈಕಿನಲ್ಲಿ ಪಿಕ್ ಮಾಡಿ ಮನೆಗೆ ಬರುತ್ತಿದ್ದರು. ತೊಕ್ಕೊಟ್ಟು ಮೇಲ್ಸೇತುವೆ ಕೊನೆಯಲ್ಲಿ ಉಳ್ಳಾಲಕ್ಕೆ ತಿರುವು ಪಡೆಯಲು ನಿಂತಿದ್ದ ವೇಳೆ ಬಲಭಾಗದಿಂದ ಬಂದ ಕಂಟೇನರ್ ಲಾರಿ ಬೈಕ್ ಮೇಲಿನಿಂದ ಹರಿದುಕೊಂಡು ಹೋಗಿದೆ. ನೋಡ ನೋಡುತ್ತಲೇ ಭೀಕರ ಅಪಘಾತ ನಡೆದಿದ್ದು ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ರಾಯನ್ ಮತ್ತು ಪ್ರಿಯಾ ಮಂಗಳೂರಿನ ಬಜಾಲ್ ನಿವಾಸಿಗಳಾಗಿದ್ದು ವಾರದ ಹಿಂದಷ್ಟೇ ಉಳ್ಳಾಲಕ್ಕೆ ನಿವಾಸ ಬದಲಾಯಿಸಿದ್ದರು. ರಾಯನ್ ಮತ್ತು ಪ್ರಿಯಾ ಇಬ್ಬರೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು.



ಮೇಲ್ಸೇತುವೆ ಕೊನೆಯಲ್ಲಿ ಉಳ್ಳಾಲಕ್ಕೆ ಟರ್ನ್ ಆಗುವ ಪಾಯಿಂಟ್ ಅಪಘಾತಕ್ಕೆ ಕಾರಣವಾಗುತ್ತಿದ್ದು ಕಳೆದ ಒಂದು ತಿಂಗಳಲ್ಲಿ ಹಲವಾರು ಅಪಘಾತಗಳಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Lorry rams on bike couple riders dies on spot near Thokuttu, Mangalore Bridge on Tuesday, October 27, 2020. The Deceased have been identified as Rayan and Priya residents of Bajal.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
09-10-26 11:04 pm
HK staffer
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
10-10-26 05:09 pm
HK News Staffer
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm