ಬ್ರೇಕಿಂಗ್ ನ್ಯೂಸ್
25-04-23 11:10 pm Mangalore Correspondent ಕರಾವಳಿ
ಮಂಗಳೂರು, ಎ.25 : ಬೇಸಗೆ ಮಳೆಯಿಲ್ಲದೆ ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ನದಿ ಸಂಪೂರ್ಣ ಬತ್ತಿ ಹೋಗಿದ್ದರೆ, ಈಗ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲೂ ನೀರು ಖಾಲಿಯಾಗಿದ್ಯಾ ಅನ್ನುವ ಅನುಮಾನ ಮೂಡಿದೆ. ಪೈಪ್ ಲೈನ್ ಬದಲಿಸುವ ತಾಂತ್ರಿಕ ಕಾರಣದ ನೆಪವೊಡ್ಡಿ ಎಪ್ರಿಲ್ 27 ಮತ್ತು 28ರಂದು ಮಂಗಳೂರು ನಗರಕ್ಕೆ ನೀರು ಪೂರೈಕೆ ಇಲ್ಲ ಎಂದು ಮಹಾನಗರ ಪಾಲಿಕೆ ಪ್ರಕಟಣೆ ನೀಡಿದೆ.
ಈಗಾಗಲೇ ಬಂಟ್ವಾಳ ತಾಲೂಕಿನ ಶಂಭೂರಿನ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿದೆ. ಇತ್ತೀಚೆಗೆ ಅಲ್ಲಿದ್ದ ನೀರನ್ನು ತುಂಬೆ ಜಲಾಶಯಕ್ಕೆ ಬಿಡಲಾಗಿತ್ತು. ಆಮೂಲಕ ಚುನಾವಣೆ ಹೊತ್ತಲ್ಲಿ ತುಂಬೆ ಅಣೆಕಟ್ಟು ನೀರು ಖಾಲಿಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈಗ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಯುತ್ತಿದ್ದು ನೀರನ್ನು ಶೇಖರ ಮಾಡುವುದು ಪಾಲಿಕೆಗೆ ಸವಾಲಾಗಿದೆ.
ಇದೀಗ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ಎಪ್ರಿಲ್ 27ರ ಬೆಳಗ್ಗೆ 6ರಿಂದ 29ರ ಬೆಳಗ್ಗೆ 6ರ ವರೆಗೆ ನೀರು ಪೂರೈಕೆ ಇಲ್ಲ ಎಂದು ಪಾಲಿಕೆ ಹೇಳಿದ್ದು ನಗರದ ಜನರು ಸಹಕರಿಸುವಂತೆ ಕೇಳಿಕೊಂಡಿದೆ. ಈಗಾಗಲೇ ನಗರದ ಕೆಲವು ಕಡೆ ನೀರಿನ ಲಭ್ಯತೆ ಇಲ್ಲ. ಸರಿಪಲ್ಲ, ಮರೋಳಿ, ಕುಲಶೇಖರ, ಅಶೋಕನಗರ ಸೇರಿದಂತೆ ಎತ್ತರದ ಜಾಗಕ್ಕೆ ನೀರಿನ ಪೂರೈಕೆ ಆಗುತ್ತಿಲ್ಲ. ಈಗ ಎರಡು ದಿನ ನೀರು ಪೂರೈಕೆ ಕಡಿತ ಮಾಡಿ, ಅಣೆಕಟ್ಟಿನಲ್ಲಿ ನೀರು ಹಿಡಿದಿಡುವ ಪ್ರಯತ್ನಕ್ಕೆ ಪಾಲಿಕೆ ಮುಂದಾಗಿದೆ. ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟಗಳನ್ನು ಕಡಿದು ಹಾಕಿರುವುದು, ಅದರಿಂದಾಗಿ ಶೋಲಾ ಕಾಡುಗಳ ನಾಶ ಆಗಿರುವುದು ನೇತ್ರಾವತಿ ನದಿ ಬರಡಾಗಲು ಕಾರಣ. ಕಳೆದೆರಡು ವರ್ಷಗಳಲ್ಲಿ ಬೇಸಗೆ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ ಬೇಸಗೆ ಮಳೆ ಆಗದೇ ಇರುವುದು ಮಂಗಳೂರಿನ ಜನರಿಗೆ ನೇತ್ರಾವತಿ ಶಾಪ ತಟ್ಟುವ ಸಾಧ್ಯತೆಯಿದೆ.
Pipe line repair, No MCC Water Supply in Mangalore for Two Days from April 27 to 29. The Mangalore city corporation will carry out maintenance work, including Header replacement work at LLPS – 1 and 1200 MM pipe repair work at the Thumbay High Lifting Pump Station – 2 -80MLD.
29-05-26 04:30 pm
HK News Staffer
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 03:05 pm
HK News Staffer
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm