ಬ್ರೇಕಿಂಗ್ ನ್ಯೂಸ್
24-04-23 11:25 am Udupi Correspondent ಕರಾವಳಿ
ಉಡುಪಿ, ಎ.24: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ಯುವಕರು ಬೋಟ್ ಮಗುಚಿ ನೀರುಪಾಲಾದ ಘಟನೆ ಬ್ರಹ್ಮಾವರ ತಾಲೂಕಿನ ಹೂಡೆಯ ಕುಕ್ಕುಡ ಎಂಬಲ್ಲಿ ನಡೆದಿದೆ. ರಂಜಾನ್ ರಜೆ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಶೃಂಗೇರಿ ಮೂಲದ ಇಬ್ಬರು ಯುವಕರು ಮತ್ತು ಬ್ರಹ್ಮಾವರ ಹೂಡೆಯ ಇಬ್ಬರು ಯುವಕರು ಮೃತಪಟ್ಟವರು.
ಬ್ರಹ್ಮಾವರ ಹೂಡೆಯ ಫೈಜಾನ್, ಇಬಾದ್, ಇವರ ಸಂಬಂಧಿಕರಾದ ಶೃಂಗೇರಿ ಮೂಲದ ಸುಫಾನ್ ಮತ್ತು ಫರಾನ್ ಮೃತರು. ಇವರ ಜೊತೆಗಿದ್ದ ಇತರ ಮೂವರು ಯುವಕರು ಈಜಿ ದಡ ಸೇರಿದ್ದಾರೆ. ರಂಜಾನ್ ರಜೆ ಹಿನ್ನೆಲೆಯಲ್ಲಿ ಒಟ್ಟು ಏಳು ಯುವಕರು ಸೇರಿಕೊಂಡು ಸೋಮವಾರ ಸಂಜೆ ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡ ಕುದ್ರುವಿಗೆ ಬೋಟ್ ನಲ್ಲಿ ತೆರಳಿದ್ದರು. ಬೋಟ್ ನಲ್ಲಿ ಏಳು ಮಂದಿ ಇದ್ದ ಕಾರಣ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ ಎನ್ನಲಾಗುತ್ತಿದ್ದು ಏಳು ಮಂದಿಯೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ, ನಾಲ್ವರು ನೀರಿನಲ್ಲಿ ಈಜಲಾಗದೆ ಮುಳುಗಿದ್ದಾರೆ.


ಹುಡುಕಾಟದ ಬಳಿಕ ರಾತ್ರಿ ವೇಳೆ ಮೂವರ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬ ಯುವಕ ಕಣ್ಮರೆಯಾಗಿದ್ದ. ಮೂವರು ಯುವಕರು ಒಂದೇ ಕುಟುಂಬದ ಸೋದರ, ಸೋದರಿಯರ ಮಕ್ಕಳಾಗಿದ್ದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
Three youths drowned and one went missing after being swept away by river current here on Sunday, April 23. The incident occurred in the Honnala river in Brahmavar. Ibaz, Fazan, Sufan, and Farhan had come to their relative's house in Hoode to celebrate Ramzan. On Sunday evening, they went fishing in a boat when they were washed away.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm