ಬ್ರೇಕಿಂಗ್ ನ್ಯೂಸ್
04-04-23 01:21 pm Mangalore Correspondent ಕರಾವಳಿ
ಮಂಗಳೂರು, ಎ.4 : ಮಾನವೀಯ ಕಾರ್ಯಕ್ಕೆ ಮನಸ್ಸು ಮುಖ್ಯ ಅಂತಾರೆ. ಇಲ್ಲೊಬ್ಬರು ವೃದ್ಧ ಮಹಿಳೆ ತನ್ನ ಮನೆ ಬಳಿಯ ರೈಲು ಹಳಿಯಲ್ಲಿ ಬೃಹತ್ ಮರ ಬಿದ್ದಿರುವುದನ್ನು ಕಂಡು ತಾನೇ ತರಾತುರಿಯಲ್ಲಿ ಕೆಂಪು ವಸ್ತ್ರ ತೋರಿಸಿ ರೈಲು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿಯ ನಿವಾಸಿ, 70 ವರ್ಷದ ಚಂದ್ರಾವತಿ ಸಮಯ ಪ್ರಜ್ಞೆ ಮೆರೆದ ಮಹಿಳೆ. ಮನೆ ಬಳಿಯ ತೋಟಕ್ಕೆ ತೆರಳಿದ್ದ ಮಹಿಳೆ ರೈಲು ಹಳಿಗೆ ಮರ ಬಿದ್ದಿರುವುದನ್ನು ಗಮನಿಸಿದ್ದಾರೆ. ಮನೆಗೆ ತೆರಳಿ ಅಕ್ಕಪಕ್ಕದವರನ್ನು ಫೋನ್ ಮಾಡಿ ಕರೆಯೋಣ ಎಂದು ದಾಪುಗಾಲು ಹಾಕುತ್ತಿದ್ದಾಗಲೇ ಮಹಿಳೆಗೆ ರೈಲಿನ ಹಾರನ್ ಕೇಳಿಸಿತ್ತು.
ಕೂಡಲೇ ಮನೆಗೆ ತೆರಳಿದ ಮಹಿಳೆ, ಕೆಂಪು ಬಟ್ಟೆಯನ್ನು ಹಿಡಿದು ರೈಲು ಹಳಿಯತ್ತ ಓಡಿದ್ದಾರೆ. ರೈಲು ಬರುತ್ತಿದ್ದ ಜಾಗದಿಂದ ಇನ್ನೊಂದು ಬದಿಯ ಹಳಿಯಲ್ಲಿ ನಿಂತು ಕೆಂಪು ಬಟ್ಟೆ ತೋರಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಇದನ್ನು ಗಮನಿಸಿದ ಲೋಕೋ ಪೈಲಟ್ ರೈಲನ್ನು ನಿಧಾನಗೊಳಿಸಿದ್ದು ಹತ್ತಿರ ಬಂದಂತೆ ಮುಂದೆ ಹಳಿಗೆ ಅಡ್ಡಲಾಗಿ ಮರ ಬಿದ್ದಿರುವುದು ಕಂಡುಬಂದಿದೆ. ಆನಂತರ, ರೈಲು ನಿಲ್ಲಿಸಿ ರೈಲ್ವೇ ಸಿಬಂದಿ ಮತ್ತು ಸ್ಥಳೀಯರು ಸೇರಿ ಮರವನ್ನು ಕಡಿದು ತೆರವುಗೊಳಿಸಿದ್ದಾರೆ.
ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಸಂಭಾವ್ಯ ಅನಾಹುತ ತಪ್ಪಿಸಿದ ವೃದ್ಧ ಮಹಿಳೆಯನ್ನು ಸ್ಥಳೀಯರು ಮತ್ತು ರೈಲು ಸಿಬಂದಿ ಪ್ರಶಂಸೆ ಮಾಡಿದ್ದಾರೆ. ಮಂಗಳೂರು- ಮುಂಬೈ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಅದಾಗಿದ್ದು ವೇಗವಾಗಿ ಮರದ ಮೇಲಿನಿಂದ ತೆರಳುತ್ತಿದ್ದರೆ ಹಳಿ ತಪ್ಪುವ ಅಪಾಯ ಇತ್ತು.
Mangalore 70 year old woman averts major train accident at Pachanady betweens Padil Jokatte. Chandravati, who lives in Mandara near Pachanady, noticed a tree had fallen on the train track just as the Matsyagandha train was making its way from Mangaluru to Mumbai.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm