ಬ್ರೇಕಿಂಗ್ ನ್ಯೂಸ್
18-10-20 03:15 pm Mangaluru Reporter ಕರಾವಳಿ
ಉಳ್ಳಾಲ, ಅಕ್ಟೋಬರ್ .18: ಇತ್ತೀಚೆಗೆ ಮೃತಪಟ್ಟ ಯುವಸೇನೆ ಮುಖಂಡ ಎಕ್ಕೂರು ಶುಭಕರ ಶೆಟ್ಟಿ (ಎಕ್ಕೂರು ಬಾಬ) ಅವರ ಸ್ಮರಣಾರ್ಥ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ಹಿಂದು ಯುವಸೇನೆ ಪಾಂಚಜನ್ಯ ಶಾಖೆ ತೊಕ್ಕೊಟ್ಟು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಹಿಂದು ಸಮಾಜದ ಹುಲಿಯಂತಿದ್ದ ಬಾಬ ಅವರು ಸಂಘಟನಾತ್ಮಕವಾಗಿ ಅನೇಕ ಯುವಕರ ಮನಸ್ಸನ್ನು ಗೆದ್ದಿದ್ದರು. ಸಾಮಾನ್ಯ ಮನೆತನದ ಹುಡುಗ ಈ ಮಟ್ಟದಲ್ಲಿ ಹೆಸರು ಗಳಿಸಿದ್ದು ನೋಡಿದರೆ ಅಚ್ಚರಿಯಾಗುತ್ತದೆ. ಆಧ್ಯಾತ್ಮದ ಮುಂದೆ ವಿಜ್ಞಾನ ಬೆಳೆಯಲಿಲ್ಲ ಎಂಬ ವಿಚಾರ ಕೊರೊನಾ ಕಾಲಘಟ್ಟದಲ್ಲಿ ಜನರಿಗೆ ಮನದಟ್ಟಾಗಿದೆ. ವಿಜ್ಞಾನವನ್ನು ನಂಬಿ ಕೂತವರು, ನಾಸ್ತಿಕರು ಕೂಡ ಇವತ್ತು ರೋಗ ನಿರ್ಮೂಲನೆಗೆ ದೇವರ ಮೊರೆ ಹೋಗಿದ್ದಾರೆ. ಇಂತಹ ಅರ್ಥಪೂರ್ಣ ಶಿಬಿರಗಳು, ಸೇವೆಗಳ ಮೂಲಕ ಎಕ್ಕೂರು ಬಾಬರ ಹೆಸರನ್ನು ಅಜರಾಮರವನ್ನಾಗಿಸುವ ಕಾರ್ಯ ಯುವಸೇನೆ ಮಾಡಿದೆ ಎಂದರು.
ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಮಾತನಾಡಿ ಅಂದಿನ ಕಾಲದಲ್ಲಿ ಹಿಂದೂ ಸಂಘಟನೆಗಳನ್ನು ಹುಟ್ಟು ಹಾಕುವುದು ಆಗಲಿ, ಮುನ್ನಡೆಸುವುದಾಗಲಿ ಸುಲಭದ ಮಾತಾಗಿರಲಿಲ್ಲ. ಹಿಂದುತ್ವಕ್ಕೆ ಪ್ರತಿಕೂಲ ವಾತಾವರಣ ಇದ್ದ ಸಂಧರ್ಭದಲ್ಲಿ ಯುವಸೇನೆಯನ್ನು ಮುನ್ನಡೆಸಿದ ಕೀರ್ತಿ ಎಕ್ಕೂರು ಬಾಬಾರಿಗೆ ಸಲ್ಲಬೇಕು ಎಂದರು.
ಶಿಬಿರದಲ್ಲಿ ನೂರಾರು ಮಂದಿ ರಕ್ತದಾನಗೈದು ಮಾದರಿಯಾದರು. ರಕ್ತದಾನಿಗಳಿಗೆ ಟೀ ಶರ್ಟ್ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಈ ವೇಳೆ ಪ್ರಧಾನ ಮಂತ್ರಿ ಜನ್ ಧನ್ ಖಾತೆ ತೆರೆಯಲು ಉಚಿತ ನೋಂದಣಿ ಪ್ರಕ್ರಿಯೆ ನಡೆಯಿತು.
ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಜಿಲ್ಲಾ ಸಮಿತಿ ಅಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಉಪಾಧ್ಯಕ್ಷ ಯಾದವ್ ಕುಂದರ್ ವಾಮಂಜೂರು ,ಕಾರ್ಯದರ್ಶಿ ರವಿಚಂದ್ರ ಎಕ್ಕೂರು,ಮಾತೃ ಮಂಡಳಿ ಪ್ರಮುಖರು ಹೇಮ ಪ್ರಕಾಶ್ ಹೆಗ್ಡೆ , ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್,ಬಿಜೆಪಿ ಯುವಮೋರ್ಚದ ಕ್ಷೇತ್ರ ಅಧ್ಯಕ್ಷ ಸಚಿನ್ ಮೋರೆ, ಉದ್ಯಮಿಗಳಾದ ಸತೀಶ್ ಕರ್ಕೇರ, ಜಯಂತ್ ಕಾಪಿಕಾಡ್, ಜಗದೀಶ್ ಆಚಾರ್ಯ,ಗಣೇಶ್ ಅಂಚನ್ , ಮುಖಂಡರಾದ ದಯಾನಂದ್ ತೊಕ್ಕೊಟ್ಟು, ಲೋಕೇಶ್ ಶೆಟ್ಟಿ, ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ಅಧ್ಯಕ್ಷ ದೀಕ್ಷಿತ್ ತೊಕ್ಕೊಟ್ಟು, ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಆಶಿಕ್ ಗೋಪಾಲಕೃಷ್ಣ ಮೊದಲಾದವರು ಇದ್ದರು.
In memory of late Yekkur Baba the Hindu Yuva Sena, Thokottu organised a blood donation camp here on Sunday 18 October, 2020.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 07:35 pm
Mangalore Correspondent
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm