ಬ್ರೇಕಿಂಗ್ ನ್ಯೂಸ್
18-10-20 09:23 am Mangaluru Correspondant ಕರಾವಳಿ
ಮಂಗಳೂರು, ಅಕ್ಟೋಬರ್ 18: ಬಜರಂಗದಳ ಕಾರ್ಯಕರ್ತರು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಮೀನಿನ ಟೆಂಪೋದಲ್ಲಿ ಮಂಗಳೂರಿಗೆ ತರಲಾಗುತ್ತಿದ್ದ ಭಾರೀ ಪ್ರಮಾಣದ ಗೋಮಾಂಸವನ್ನು ಪತ್ತೆ ಮಾಡಿದ್ದಾರೆ.
ಹಾಸನ ಕಡೆಯಿಂದ ಗೋಮಾಂಸ ತರಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು, ಅಡ್ಯಾರ್- ಕಣ್ಣೂರು ಹೆದ್ದಾರಿಯಲ್ಲಿ ಅಡ್ಡಗಟ್ಟಲು ಪ್ರಯತ್ನಿಸಿದ್ದಾರೆ. ಟೆಂಪೋ ನಿಲ್ಲಿಸದೆ ಮುಂದೆ ಬಂದಿದ್ದರಿಂದ ಕಂಕನಾಡಿ ನಗರ ಠಾಣೆಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ ಟೆಂಪೋವನ್ನು ಕಾರ್ಯಕರ್ತರು ಬೆನ್ನಟ್ಟಿ ಬಂದಿದ್ದರು. ಪಡೀಲ್ ನಲ್ಲಿ ಪೊಲೀಸರು ಅಡ್ಡ ಹಾಕಿದ್ದು ಟೆಂಪೋ ವಶಕ್ಕೆ ಪಡೆದಿದ್ದಾರೆ.



ಟೆಂಪೋದಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಪಾಸಣೆ ನಡೆಸಿದಾಗ, ಎದುರು ಭಾಗದಲ್ಲಿ ಇಟ್ಟಿದ್ದ ಟ್ರೇಗಳಲ್ಲಿ ಮಾತ್ರ ಮೀನು ಇತ್ತು. ಒಳಭಾಗದ ಅಷ್ಟೂ ಜಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಗೋಮಾಂಸ ಪತ್ತೆಯಾಗಿದೆ. ಸುಮಾರು ಎರಡು ಸಾವಿರ ಕೇಜಿಗೂ ಹೆಚ್ಚು ಗೋಮಾಂಸ ಇರಬಹುದೆಂದು ಅಂದಾಜಿಸಲಾಗಿದೆ.
ಆರೋಪಿಗಳು ಮಾಂಸವನ್ನು ಹುಬ್ಬಳ್ಳಿಯಿಂದ ತರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಂಕನಾಡಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ಹಾಲಿನ ಟೆಂಪೋದಲ್ಲಿ ಗೋಮಾಂಸ ತರುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಹಿಡಿದಿದ್ದರು. ಅದರಲ್ಲಿ ಒಂದು ಸಾವಿರ ಕೇಜಿಯಷ್ಟು ಮಾಂಸ ಪತ್ತೆಯಾಗಿತ್ತು.
The Bajrang Dal Activisits in Mangalore have held a Fish Tempo van that was transporting beef meet about two thousand kilos. A case has been registered at kankanady police station. Two of them are attested.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm