ಬ್ರೇಕಿಂಗ್ ನ್ಯೂಸ್
10-01-23 01:58 pm Mangalore Correspondent ಕರಾವಳಿ
ಸುಳ್ಯ, ಜ.10: ಎರಡು ತಿಂಗಳ ಹಿಂದೆ ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಪಂ ಸದಸ್ಯೆ ಭಾರತಿ ಮೂಕಮಲೆ ಅವರು ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿದ್ದಾರೆ.
ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ಮತ್ತು ಅವರ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿದ್ದು ಸ್ವ ಇಚ್ಚೆಯ ಹೇಳಿಕೆ ನೀಡಿದ್ದಾರೆ. ನಂದನ್ ಜೊತೆಗೆ ಜೀವನ ಮುಂದುವರೆಸುವ ನಿರ್ಧಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಭಾರತಿ ಅವರು ಸುಬ್ರಹ್ಮಣ್ಯ ಠಾಣೆಯಲ್ಲಿ ಲಿಖಿತ ರೂಪದಲ್ಲಿ ಈ ಬಗ್ಗೆ ಬರೆದು ಕೊಟ್ಟು ನಂದನ್ ಜೊತೆಗೆ ತೆರಳಿದ್ದಾರೆ.
ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳು ಹಾಗೂ ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಭಾರತಿ ಅವರ ಬಗ್ಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈ ನಡುವೆ, ವೀಡಿಯೋ ಮಾಡಿ ಹರಿಯಬಿಟ್ಟಿದ್ದ ಭಾರತಿ, ತಾನು ಪ್ರಿಯಕರನೊಂದಿಗೆ ಇರುವುದಾಗಿ ತಿಳಿಸಿದ್ದರು. ಅಲ್ಲದೆ, ತನ್ನನ್ನು ಹುಡುಕುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು.
ಭಾರತಿ ಅವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದು ದಿಢೀರ್ ನಾಪತ್ತೆ ಭಾರೀ ಶಂಕೆಗೆ ಕಾರಣವಾಗಿತ್ತು. ಕುಟುಂಬದ ಸದಸ್ಯರು, ಪೊಲೀಸ್ ದೂರು ನೀಡಿ ಹುಡುಕಾಟ ನಡೆಸಿದರೂ ಎಲ್ಲಿದ್ದಾರೆಂದು ಪತ್ತೆಯಾಗಿರಲಿಲ್ಲ.
Bharathi Mookamale, gram panchayat (GP) member of Subramanya, who went missing two months ago, appeared at the police station on January 5, along with her paramour and went along with him.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm