ಬ್ರೇಕಿಂಗ್ ನ್ಯೂಸ್
02-01-23 08:49 pm Mangalore Correspondent ಕರಾವಳಿ
ಮಂಗಳೂರು, ಜ.2: ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕರಾವಳಿಯಲ್ಲಿ ಯಕ್ಷಗಾನ ನಡೆಯುವಲ್ಲಿಯೂ ಬಿಜೆಪಿ ಪ್ರಚಾರ ಅಭಿಯಾನ ನಡೆಯಬೇಕು. ಆಮೂಲಕ ಯಕ್ಷಗಾನವನ್ನೂ ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂದು ಪರೋಕ್ಷ ಸೂಚನೆ ನೀಡಿದ್ದಾರೆ.
ವೇದಿಕೆಯಲ್ಲಿ ನಳಿನ್ ಕುಮಾರ್ ಈ ಮಾತು ಹೇಳುತ್ತಿದ್ದಂತೆ, ಕೆಳಗೆ ಕುಳಿತಿದ್ದ ಹಿರಿಯ ಯಕ್ಷಗಾನ ಕಲಾವಿದ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸರಪಾಡಿ ಅಶೋಕ್ ಶೆಟ್ಟಿ ನಾವು ಈಗಾಗಲೇ ಆ ಕೆಲಸ ಶುರು ಮಾಡಿದ್ದೇವೆ ಎಂದು ಅನುಮೋದನೆ ನೀಡಿದ್ದಾರೆ. ಇನ್ನು ನೂರು ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ಬರಲಿದ್ದು, ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಬೇಕು. ಬೂತ್ ವಿಜಯದ ಮೂಲಕ ರಾಜ್ಯದ ವಿಜಯದ ಸಂಕಲ್ಪ ಮಾಡಿದ್ದೇವೆ, ಹತ್ತು ದಿನಗಳಲ್ಲಿ ಬೂತ್ ಗೆಲ್ಲುವ ಟಾರ್ಗೆಟನ್ನು ಕಾರ್ಯಕರ್ತರಿಗೆ ಹಾಕಿದ್ದೇವೆ ಎಂದರು.
ಕಾಂಗ್ರೆಸ್ನಲ್ಲಿ ಪುಸ್ತಕ ಮಾಡಲು ಜನ ಸಿಗಲ್ಲ. ಬಿಜೆಪಿಗೆ ಮತದಾರ ಪಟ್ಟಿಯಲ್ಲಿ ಪುಟಕ್ಕೊಬ್ಬರು ಪ್ರಮುಖರು ಸಿಗುತ್ತಾರೆ. ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸಿಗೆ ಬೂತ್ ಗೆ ಒಬ್ಬನೇ ಹಿಂದುವೂ ಸಿಗೋದಿಲ್ಲ. ಇವತ್ತಿನಿಂದ ನಮ್ಮ ಯಾತ್ರೆ ಆರಂಭವಾಗಲಿದ್ದು, ಪ್ರತಿ ಮನೆಯಲ್ಲೂ ಬಿಜೆಪಿ ಧ್ವಜ ಹಾರಾಡಬೇಕು. 50 ಲಕ್ಷ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಟಾರ್ಗೆಟ್ ಇಟ್ಟಿದ್ದೇವೆ. ಮಂಗಳೂರಿನಲ್ಲಿ ಹಲವು ಕಾರ್ಪೊರೇಟರುಗಳು ನಿದ್ದೆ ಮಾಡುತ್ತಾ ಇದ್ದೀರಿ. ನಿದ್ದೆ ಮಾಡಲಿಕ್ಕೆ ಅಲ್ಲ, ನಿಮ್ಮನ್ನು ಗೆಲ್ಲಿಸಿದ್ದು. ಇನ್ನಾದ್ರೂ ಪಕ್ಷದ ಮತ್ತು ಕ್ಷೇತ್ರದ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಏಜಂಟ್ ಆಗಿರುವ ಕೆಂಪಣ್ಣ ಪರ್ಸೆಂಟೇಜ್ ಆರೋಪ ಮಾಡಿ ಗಲಾಟೆ ಎಬ್ಬಿಸಿದ್ರು. ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ, ನಮ್ಮ ಯಾವುದೇ ಶಾಸಕ ಇದ್ರೂ ಕಿತ್ತೆಸೆಯುತ್ತೇವೆ ಎಂದು ಹೇಳಿದ್ದೆ. ಆದರೆ ಕಾಂಗ್ರೆಸಿಗರಾಗಲೀ, ಕೆಂಪಣ್ಣ ಆಗಲೀ ಆರೋಪಕ್ಕೆ ಮಾತ್ರ ಸೀಮಿತರಾಗಿ ಬಿಟ್ಟರು. ಸಿದ್ದರಾಮಯ್ಯ ಮಾಡಿರುವ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ. ಅವರು ಮುಖ್ಯಮಂತ್ರಿಯಾಗೋದಲ್ಲ, ಸದ್ಯದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಮಾನಾಥ ರೈ, ಖಾದರ್, ಲೋಬೊ ಸಚಿವರಾಗಲು ಪೈಪೋಟಿಯಲ್ಲಿದ್ದಾರೆ. ಈಗಾಗಲೇ ಶರ್ಟ್ ಹೊಲಿಸಿ ರೆಡಿ ಮಾಡಿದ್ದಾರೆ. ಒಳಗಿಂದೊಳೆಗೆ ರಮಾನಾಥ ರೈ ಸೋಲಿಸಿ ಅಂತ ಖಾದರ್ ಹೇಳುತ್ತಾರೆ. ಇತ್ತ ಖಾದರ್ ಸೋಲಿಸಿ ಅಂತ ರಮಾನಾಥ ರೈ ಗುಟ್ಟಾಗಿ ಹೇಳುತ್ತಾರೆ. ಅತ್ತ ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿ ಸೀಟಿಗಾಗಿ ಟವೆಲ್ ಹಾಕುತ್ತಿದ್ದಾರೆ. ಆದರೆ ಬಿಜೆಪಿ ಇದ್ಯಾವುದಕ್ಕೂ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ 150 ಸೀಟು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಿದರು.
ಯಾರಿಗೆ ಕೈ ಕೊಡುತ್ತಾರೋ ? ಚರ್ಚೆ ಹುಟ್ಟುಹಾಕಿದ ನಳಿನ್ ಮಾತು
ನಳಿನ್ ಕುಮಾರ್ ಭಾಷಣದ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದ್ರೆ ಅವರನ್ನು ಪ್ರಶಂಸಿಸಿ, ಶಾಸಕ ವೇದವ್ಯಾಸ ಕಾಮತ್ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದು ಬಿಜೆಪಿ ನಾಯಕರಲ್ಲೇ ಕಸಿವಿಸಿ ಮೂಡಿಸಿದೆ. ವೇದವ್ಯಾಸ್ ಕಾಮತ್ ಅವರು ಕೈಕೊಟ್ಟರೂ ಸುದರ್ಶನ ಅವರು ಕೈಕೊಡುವುದಿಲ್ಲ. ವಿಧಾನಸಭೆ ಚುನಾವಣೆಗೆ ಟಿಕೆಟ್ ಬೇಕೋ ಬೇಡವೋ ಹೇಳಿ. ಬೇರೆ ಜನ ರೆಡಿ ಇದ್ದಾರೆ. ನಿಮಗೆ ಕಾರ್ಯಕ್ರಮದ ಹೆಸರೇ ಸರಿಯಾಗಿ ಹೇಳಲು ಬರಲ್ಲ. ಇದು ಬೂತ್ ಸಶಕ್ತೀಕರಣ ಕಾರ್ಯಕ್ರಮವಲ್ಲ, ಬದಲಾಗಿ ಇದು ಬೂತ್ ವಿಜಯ ಅಭಿಯಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವೇದಿಕೆಯಲ್ಲಿ ಮಾತನಾಡುವಾಗಲೇ ಶಾಸಕರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದು ಚರ್ಚೆ ಹುಟ್ಟುಹಾಕಿದೆ.
Congress need not worry as BJP will be in power for the next 15 years slams Nalin Kateel at Booth Vijaya Abhiyana in Mangalore. , “Congress leaders Siddaramaiah, D K Shivakumar and Congress president Mallikarjun Kharge have started stitching shirts assuming that Congress will come to power. Competition has also started in Dakshina Kannada where three leaders namely U T Khader, Ramanath Rai and J R Lobo have started stitching shirts to take oath assuming that they will become ministers. The Congress need not worry as BJP will be in power for the next 15 years. In the coming days, not a single Hindu will work for Congress.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm