ಬ್ರೇಕಿಂಗ್ ನ್ಯೂಸ್
16-10-20 02:24 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 16: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17 ರಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವ ಕೊರೊನಾ ನಿರ್ಬಂಧಗಳ ನಡುವೆ, ‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ. ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.




'ಮಲೆನಾಡ ಇಂದಿರಾ' ಡಾ.ಆರತಿ ಕೃಷ್ಣ
ಡಾ. ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರು. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ. ರಾಮಯ್ಯ. ತಂದೆ ಶೃಂಗೇರಿ ಎನ್.ಆರ್. ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವರಾಗಿದ್ದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾದರೂ ಕೂಡಲೇ ಸ್ಪಂದಿಸಿ ಪರಿಹಾರ ಒದಗಿಸಿದವರು ಡಾ.ಆರತಿ ಕೃಷ್ಣ. ಆರು ತಿಂಗಳಿಂದೀಚೆಗೆ 40 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಶ್ರಮಿಸಿದ್ದಾರೆ. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಶ್ರಮಿಸಿದ್ದರು.
ಜಗತ್ತಿನಾದ್ಯಂತ ಇರುವ ಹಲವಾರು ದೇಶಗಳ ರಾಯಭಾರಿಗಳ ನಿರಂತರ ಸಂಪರ್ಕದಿಂದ ಚೀನಾ, ಇಟಲಿ, ಆಸ್ಟ್ರೇಲಿಯಾ, ಅಮೇರಿಕ. ಫಿಲಿಪೈನ್ಸ್, ಸ್ಪೇನ್, ಫಿನ್ಲ್ಯಾಂಡ್, ಮಲೇಷಿಯಾ, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್, ಪೋಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳು ಮೊದಲಾದೆಡೆ ನೆಲೆಸಿರುವ ಭಾರತೀಯರು ಅಥವಾ ಇತರೇ ಮಂದಿ ಸಹಾಯ ಕೇಳಿ ಬಂದವರಿಗೆ ವ್ಯವಸ್ಥೆ ಮಾಡಿ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ.
ಇವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಹ್ಯಾದ್ರಿ ಸಂಘದ ಗೌರವ ಪ್ರಶಸ್ತಿ, ಮಹಾತ್ಮಗಾಂಧಿ ಸಮ್ಮಾನ ಅವಾರ್ಡ್ ಬ್ಯಾಂಕಾಕ್‌ನಲ್ಲಿ, ದುಬೈ ಕನ್ನಡ ಕಾಯಕ ರತ್ನ, ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಗವರ್ನರ್‌ನಿಂದ ಇಂಡಿಯನ್ ಕಮ್ಯೂನಿಟಿ ಎಡ್ವಕೇಟ್ ಪ್ರಶಸ್ತಿ ಅರಸಿ ಬಂದಿವೆ.
Covid warrior and former vice president of NRI forum, Dr Arathi Krishna will inaugurate the Mangaluru Dasara 2020, which is going to begin on October 17 at Kudroli Sri Gokarnanatheshwara temple in the city.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm