ಬ್ರೇಕಿಂಗ್ ನ್ಯೂಸ್
15-10-20 08:10 pm Udupi Reporter ಕರಾವಳಿ
ಉಡುಪಿ, ಅಕ್ಟೋಬರ್ 15: ಕೋವಿಡ್ ಸಂಕಷ್ಟದ ಸಮಯದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲೆಂದು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆಗೊಳಿಸಿದ್ದ 45 ಲಕ್ಷ ರೂಪಾಯಿ ಮೌಲ್ಯದ ಐದು ಸಾವಿರ ಆಹಾರ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸದೆ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಪುರಸಭೆ ಸದಸ್ಯೆ ಶುಭದಾ ರಾವ್, ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು ಬೆಂಗಳೂರಿಗೆ ತೆರಳಿ ತನಿಖೆ ನಡೆಸುವಂತೆ ಕೋರಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡಲು ಇಲಾಖೆಯಿಂದ ಹಣ ಮಂಜೂರು ಆಗಿತ್ತು. ಆದರೆ, ಆಹಾರ ಕಿಟ್ ಫಲಾನುಭವಿಗಳಿಗೆ ತಲುಪಿಲ್ಲ ಎನ್ನಲಾಗುತ್ತಿದೆ. ಇಲಾಖೆಯಿಂದ ಯಾರೊಬ್ಬರೂ ಆಹಾರ ಕಿಟ್ ಪಡೆದಿರುವ ಬಗ್ಗೆ ದಾಖಲೆಗಳಿಲ್ಲ. ಹೀಗಿದ್ದರೂ ಕಾರ್ಕಳ ಶಾಸಕರು ಬೋಗಸ್ ಪಟ್ಟಿ ತಯಾರಿಸಿ, ಸರಕಾರಕ್ಕೆ ನೀಡಿದ್ದಾರೆ. ಇದಕ್ಕಾಗಿ ಆಹಾರ ಕಿಟ್ ನೀಡಲು ಏಜನ್ಸಿ ಪಡೆದಿದ್ದ ಕಂಪೆನಿಯಿಂದ ಬೃಹತ್ ಮೊತ್ತದ ಹಣ ಕಾರ್ಕಳ ಶಾಸಕರ ಆಪ್ತರಿಗೆ ಸಂದಾಯವಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಶುಭದಾ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
In connection to Fraud in Distribution of government food kits, a case has been filed against Karkala MLA Sunil Kumar to Lokayukta.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm