ಬ್ರೇಕಿಂಗ್ ನ್ಯೂಸ್
15-10-20 04:01 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 15: ಕಂಬಳಕ್ಕಾಗಿ ಕುಟುಂಬದ ಸದಸ್ಯನಂತೆ ಆರೈಕೆ ಮಾಡಿ ಬೆಳೆಸುವ ಕೋಣದ ಬಗ್ಗೆ ಕರಾವಳಿಯಲ್ಲಿ ತುಂಬಾನೇ ಕತೆಗಳಿವೆ. ಮನೆ ಮಾಲೀಕನ ಜೊತೆ ಕೋಣಗಳು ಎಷ್ಟರಮಟ್ಟಿಗೆ ಅವಿನಾಭಾವ ಸಂಬಂಧ ಹೊಂದಿರುತ್ತೆ ಅಂದರೆ ಮನೆಯಲ್ಲೇನಾದ್ರೂ ಅಪಶಕುನಗಳಾದರೆ ಆಹಾರ ಸ್ವೀಕರಿಸದೆ ಉಪವಾಸ ಬೀಳುತ್ತವೆ. ಅಂಥ ಕೋಣಗಳಿಗೂ ಮನುಷ್ಯನ ರೀತಿ ಸಂವೇದನೆಗಳಿರುತ್ತವೆ. ಸಂತಸ, ಸಂಭ್ರಮ, ವೇದನೆಯನ್ನು ಹಂಚಿಕೊಳ್ಳುತ್ತದೆ ಎಂದರೆ ನೀವು ನಂಬುತ್ತೀರಾ...
ಹೌದು.. ನೀವು ನಂಬಲೇಬೇಕು. ಈ ವಿಡಿಯೋ ನೋಡಿದರೆ ಕೋಣಗಳಿಗೆ ಇಂಥ ಸಂವೇದನೆಗಳಿಲ್ಲ ಎನ್ನಲು ಸಾಧ್ಯನೇ ಇಲ್ಲ. ಕಳೆದ ಬಾರಿ ಕಂಬಳದಲ್ಲಿ ಓಡಿದ ಕೋಣವೊಂದು ತನ್ನ ಓಟದ ಸ್ಪರ್ಧೆಯನ್ನು ಮೊಬೈಲಿನಲ್ಲಿ ನೋಡಿ ಅತೀವ ಸಂಭ್ರಮಪಟ್ಟಿದೆ. ಮಂಗಳೂರು ಹೊರವಲಯದ ತಲಪಾಡಿಯ ರವೀಂದ್ರ ಪಕಳ ಎಂಬವರ ಕಂಬಳದ ಕೋಣಕ್ಕೆ ಮನೆಯ ಹುಡುಗನೊಬ್ಬ ಹಳೆಯ ವಿಡಿಯೋ ತೋರಿಸಿದ್ದಾನೆ. ವಿಡಿಯೋ ನೋಡಿದ ಕೋಣ ಅಲ್ಲಿಂದಲೇ ಗುರುಗುಟ್ಟುತ್ತಾ ಮುಂದೆ ಬಂದಿದ್ದಲ್ಲದೆ, ತನ್ನದೇ ಓಟವನ್ನು ನೋಡಿ ಸಂಭ್ರಮಿಸಿದೆ.
ಮನೆಯಲ್ಲಿ ಕುಟ್ಟಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕೋಣ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕಂಬಳದ ದೃಶ್ಯವನ್ನು ನೋಡಿ ಕರಾವಳಿಯಲ್ಲೀಗ ವಿಡಿಯೋ ವೈರಲ್ ಆಗುವಂತಾಗಿದೆ. ಮನುಷ್ಯರಂತೆ ಪ್ರಾಣಿಗಳು ಕೂಡ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
Video:
A video of Buffalo in Talapady enjoying by watching it's own video goes viral on social media. The video was shot while the buffalo was racing in a Kambla sport in Mangaluru.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm