ಬ್ರೇಕಿಂಗ್ ನ್ಯೂಸ್
06-12-22 10:58 pm Mangalore Correspondent ಕರಾವಳಿ
ಮಂಗಳೂರು, ಡಿ.6 : ಲವ್ ಜಿಹಾದ್ ಆರೋಪದಲ್ಲಿ ಬಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ ಘಟನೆ ಮಂಗಳೂರಿನ ಕಂಕನಾಡಿ ಬಳಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದಿದೆ.
ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರು ಬೈಕ್ ನಲ್ಲಿ ಸುತ್ತಾಡಿದ್ದನ್ನ ಕಂಡಿದ್ದ ಸಂಘಟನೆಯ ಯುವಕರು ಈ ಬಗ್ಗೆ ಯುವತಿಯ ಪೋಷಕರ ಗಮನಕ್ಕೆ ತಂದಿದ್ದರು. ಅಲ್ಲದೆ, ಪೋಷಕರು ಎಚ್ಚರಿಕೆ ನೀಡಿದರೂ, ಆಕೆ ಕ್ಯಾರ್ ಮಾಡಿರಲಿಲ್ಲ.
ಮಂಗಳವಾರ ಸಂಜೆ ಬಜರಂಗದಳದ ಕಾರ್ಯಕರ್ತರು ಕದ್ರಿ ಪೊಲೀಸರ ಜೊತೆಗೆ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದಾರೆ. ಈ ವೇಳೆ, ಯುವತಿಯ ಪೋಷಕರು ಕೂಡ ಆಗಮಿಸಿದ್ದರು. ಸಂಘಟನೆಯ ಯುವಕರು ಪೊಲೀಸರ ಎದುರಲ್ಲೇ ರಂಪಾಟ ನಡೆಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು ಯುವತಿಗೆ ಆಕೆಯ ಪೋಷಕರು ಥಳಿಸಿದ್ದಾರೆ.
ಈ ವೇಳೆ ಕದ್ರಿ ಪೊಲೀಸರು ಸ್ಥಳದಲ್ಲಿದ್ದು ಉದ್ರಿಕ್ತರನ್ನು ಚದುರಿಸಿದ್ದಾರೆ. ಬಳಿಕ ಯುವತಿ, ಯುವಕ ಮತ್ತು ಪೋಷಕರನ್ನ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಯುವತಿ ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಬಟ್ಟೆ ಮಳಿಗೆ, ಜುವೆಲ್ಲರಿಯಲ್ಲಿ ಕೆಲಸಕ್ಕಿದ್ದಳು. ಜುವೆಲ್ಲರಿ ಕೆಲಸ ಸಿಕ್ಕ ಬಳಿಕ ಅಲ್ಲಿ ಮುಸ್ಲಿಂ ಯುವಕನ ಸ್ನೇಹ ಆಗಿತ್ತು ಎನ್ನಲಾಗುತ್ತಿದ್ದು ಇದಕ್ಕೆ ಬಜರಂಗದಳ ಸಂಘಟನೆಯ ಆಕ್ಷೇಪ ಎತ್ತಿದ್ದಾರೆ. ಈಗಾಗಲೇ ಲವ್ ಜಿಹಾದ್ ಕೃತ್ಯದಿಂದ ಏನೆಲ್ಲ ಬೆಳವಣಿಗೆ ಆಗುತ್ತಿರುವುದು ನಿಮಗೆ ಕಣ್ಣು ಕಾಣಲ್ಲವೇ ಎಂದು ಪೋಷಕರನ್ನು ತರಾಟೆಗೆ ಎತ್ತಿದ್ದಾರೆ.
A #Hindutva group members who came to know that a #Hindu girl was found in the company of a #Muslim boy have severely assaulted the boy after barging into a Jewellery shop near #Kankanady, #Mangaluru.
— Hate Detector 🔍 (@HateDetectors) December 6, 2022
It is said that the boy & girl are colleagues in the same Jewellery shop. pic.twitter.com/KQv6FovNPR
Moral policing has raised its ugly head once again in Mangaluru. A right wing organization workers who came to know that a girl was found in the company of a boy belonging to another faith have severely assaulted the boy after barging into a jewellery shop near Kankanady. It is said that the boy and girl are colleagues in the same jewellery shop.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm