ಬ್ರೇಕಿಂಗ್ ನ್ಯೂಸ್
01-12-22 01:55 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ.1: ಮೆಹಂದಿ ಪಾರ್ಟಿಗೆಂದು ತೆರಳಿದ್ದ ಆಟೋ ಚಾಲಕ ಮನೆಗೆ ಮರಳದೆ, ಮರುದಿನ ಕುವೆಟ್ಟು ಗ್ರಾಮದ ಗುರುವಾಯನ ಕೆರೆಯ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದು ಕುಟುಂಬಸ್ಥರು ಕೊಲೆಯೆಂದು ಆರೋಪ ಮಾಡಿದ್ದಾರೆ.
ಕುವೆಟ್ಟು ಗ್ರಾಮದ ಶಿವಾಜಿನಗರ ನಿವಾಸಿ ಪ್ರವೀಣ್ ಪಿಂಟೋ(37) ಮೃತ ಆಟೋ ಚಾಲಕ. ಪ್ರವೀಣ್ ನ.29ರಂದು ರಾತ್ರಿ ಓಡಿನಾಳ ಎಂಬಲ್ಲಿ ಗೆಳೆಯನ ಮನೆಯಲ್ಲಿ ನಡೆದಿದ್ದ ಮೆಹಂದಿ ಪಾರ್ಟಿಗೆ ತೆರಳಿದ್ದ. ತಡರಾತ್ರಿ ಪತ್ನಿ ಫೋನ್ ಮಾಡಿದಾಗ, ಮನೆಗೆ ಬರುತ್ತಿದ್ದೇನೆ. ಕೆಲವೇ ಕ್ಷಣಗಳಲ್ಲಿ ಮುಟ್ಟುತ್ತೇನೆ ಎಂದಿದ್ದ. ಆದರೆ ಬೆಳಗ್ಗಿನ ವರೆಗೂ ಪ್ರವೀಣ್ ಮನೆಗೆ ಬಂದಿರಲಿಲ್ಲ. ಗುರುವಾಯನ ಕೆರೆಯ ಹಳ್ಳದ ಬಳಿ ಪ್ರವೀಣ್ ಅವರ ಐಡಿ ಕಾರ್ಡ್, ಆಟೋದ ದಾಖಲೆ ಪತ್ರಗಳು ಸಿಕ್ಕಿದ್ದರಿಂದ ಆತ ನೀರಿಗೆ ಬಿದ್ದಿರುವ ಶಂಕೆಯಲ್ಲಿ ಹುಡುಕಾಟ ನಡೆಸಿದ್ದರು. ಅಗ್ನಿಶಾಮಕ ದಳ, ಮುಳುಗು ತಜ್ಞರ ಹುಡುಕಾಟದ ಬಳಿಕ ಬುಧವಾರ ಮಧ್ಯಾಹ್ನ ಕೆರೆಯಲ್ಲಿ ಪ್ರವೀಣ್ ಪಿಂಟೋ ಶವ ಪತ್ತೆಯಾಗಿತ್ತು.
ಪ್ರವೀಣ್ ಪಿಂಟೋ ಕೊಲೆಯಾಗಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಪತ್ನಿ ರೇಶ್ಮಾ ಲೋಬೊ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರು ವರ್ಷದ ಮಗನನ್ನು ಹೊಂದಿದ್ದಾರೆ. ಪ್ರವೀಣ್ ಶವವನ್ನು ಮಂಗಳೂರಿನಲ್ಲಿ ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಮೆಹಂದಿ ಪಾರ್ಟಿಯಲ್ಲಿ ಪ್ರದೀಪ್ ಶೆಟ್ಟಿ ಮತ್ತು ಪ್ರವೀಣ್ ಪಿಂಟೋ ನಡುವೆ ಮಾತಿನ ಚಕಮತಿ ನಡೆದಿತ್ತು ಎಂಬ ಬಗ್ಗೆ ಕೆಲವರಿಂದ ಮಾಹಿತಿ ಲಭಿಸಿದೆ. ಅಲ್ಲದೆ, ತಮ್ಮ ಮನೆಯ ಆವರಣಕ್ಕೆ ನಸುಕಿನ ಜಾವ ಕಾರಿನಲ್ಲಿ ಯಾರೋ ಬಂದಿದ್ದರು. ಅಲ್ಲದೆ, ಪ್ರವೀಣ್ ಅವರು ಧರಿಸಿದ್ದ ಕೆಂಪು ಟೀ ಶರ್ಟ್ ಶವದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಸಾವಿನ ಬಗ್ಗೆ ಶಂಕೆಯಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಪತ್ನಿ ರೇಶ್ಮಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರವೀಣ್ ಸಾಯುವುದಕ್ಕೂ ಮೊದಲು ತನ್ನ ಕ್ಲೋಸ್ ಫ್ರೆಂಡ್ ಒಬ್ಬನಿಗೆ ಕರೆ ಮಾಡಿದ್ದಾನಂತೆ. ತಾನು ಸಾಯುತ್ತಿರುವುದಾಗಿ ಹೇಳಿದ್ದಾನೆ. ಆ ಬಗ್ಗೆ ಮಾಹಿತಿ ಲಭಿಸಿದ್ದು, ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A man, who went to attend a Mehendi programme did not return home and his mortal remains were mysteriously found in Guruvayanakere pond of Kuvettu village on November 30. The deceased is identified as Praveen Pinto (37), a resident of Shivajinagara Mane of Kuvettu village, who was an auto driver by profession.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm