ಬ್ರೇಕಿಂಗ್ ನ್ಯೂಸ್
16-11-22 02:17 pm Mangalore Correspondent ಕರಾವಳಿ
ಸುಳ್ಯ, ನ.16 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.21ರಿಂದ ಚಂಪಾ ಷಷ್ಠಿ ಉತ್ಸವ ನಡೆಯಲಿದ್ದು ಉತ್ಸವದ ಅವಧಿಯಲ್ಲಿ ಮಡೆಸ್ನಾನಕ್ಕೆ ಅವಕಾಶ ಇಲ್ಲ. ಎಡೆಸ್ನಾನಕ್ಕೆ ಅವಕಾಶ ಕೊಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಈ ಕುರಿತ ತೀರ್ಮಾನವನ್ನು ಉತ್ಸವದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಉತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇರಲಿಲ್ಲ. ಈ ಸಲ ಅವಕಾಶ ಇರುವ ಕಾರಣ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಭಕ್ತರಿಗೆ ಈ ಸಲ ಎಡೆಸ್ನಾನಕ್ಕೆ ಮೂರು ದಿನಗಳಲ್ಲಿ ಅವಕಾಶ ಸಿಗಲಿದೆ. ಚೌತಿ, ಪಂಚಮಿ ಮತ್ತು ಷಷ್ಠಿಯಂದು ಎಡೆಸ್ನಾನ ಮಾಡಬಹುದಾಗಿದೆ. ಅಂದರೆ, ನ.27, 28 ಮತ್ತು 29ರಂದು ಎಡೆಸ್ನಾನ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರು ಸ್ವಇಚ್ಛೆಯಲ್ಲಿ ಎಡೆಸ್ನಾನದಲ್ಲಿ ಭಾಗವಹಿಸಬಹುದು.
ಎಡೆಸ್ನಾನ ಎಂದರೆ ದೇಗುಲದ ಅಂಗಣದಲ್ಲಿ ಎಲೆಗಳನ್ನ ಹಾಕಿ ಅದ್ರಲ್ಲಿ ದೇವರ ನೈವೇದ್ಯ ಬಡಿಸಲಾಗುತ್ತದೆ. ಅದನ್ನ ಹಸುಗಳು ತಿಂದ ಬಳಿಕ ಹರಕೆ ಹೊತ್ತ ಭಕ್ತರು ಎಲೆಯ ಮೇಲೆ ಉರುಳುವುದು ಎಡೆಸ್ನಾನ. ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರ ಉಪಸ್ಥಿತಿಯಲ್ಲಿ ಈ ಎಡೆಸ್ನಾನ ನಡೆಯಲಿದೆ.
ಬೀದಿ ಉರುಳುಸೇವೆಗೂ ನಿಯಮಗಳ ಚೌಕಟ್ಟಿನಲ್ಲಿ ಅವಕಾಶ ನೀಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿತ್ತು. ಇದರಂತೆ, ಲಕ್ಷದೀಪೋತ್ಸವ ನಡೆಯುವ ದಿನ ರಾತ್ರಿ ರಥೋತ್ಸವದ ಬಳಿಕ ಬೆಳಗ್ಗೆ 6 ಗಂಟೆ ತನಕ ಬೀದಿ ಉರುಳುಸೇವೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜೆ 5 ಗಂಟೆ ಬಳಿಕ ಬೆಳಗ್ಗೆ 6 ಗಂಟೆ ಒಳಗೆ ಉರುಳುಸೇವೆ ಅವಕಾಶ ಇರಲಿದೆ. ಬೀದಿ ಉರುಳು ಸೇವೆಗಾಗಿ ಹಿಂದಿನ ವರ್ಷಗಳಲ್ಲಿ ಪ್ರತ್ಯೇಕ ಪಥ ನಿರ್ಮಿಸಲಾಗಿತ್ತು. ಅಲ್ಲದೆ, ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು.
Champashashthi Edesnana service at Kukke Sri Subrahmanya, which was restricted for the last two years due to Corona virus, has been allowed this time. This decision was taken in a preliminary meeting of the Champashashti Jatra Mahotsav (Kukke Subramanya Temple Champa Shashti) to be held from November 21 at Kukke Subramanya Temple. There has been a discussion about giving permission to those who perform street paving services from 5 pm to 6 am after night rathotsav (Kukke Temple Rathotsav) on Lakshadweep Day.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am