ಬ್ರೇಕಿಂಗ್ ನ್ಯೂಸ್
13-10-20 10:04 am Headline Karnataka News Network ಕರಾವಳಿ
ಮಂಗಳೂರು, ಅಕ್ಟೋಬರ್ 13: ಹಾಲಿನ ಟೆಂಪೋದಲ್ಲಿ ಗೋಮಾಂಸ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿ ಹಿಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಹಾಲಿನ ವಾಹನವನ್ನು ಪಂಪ್ವೆಲ್ ಸರ್ಕಲ್ ಬಳಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಟೆಂಪೋ ನಿಲ್ಲಿಸದೆ ಕಂಕನಾಡಿ ಕಡೆಗೆ ನುಗ್ಗಿದ್ದು ಕಾರ್ಯಕರ್ತರು ತಮ್ಮ ವಾಹನಗಳಲ್ಲಿ ಬೆನ್ನಟ್ಟಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಹಂಪನಕಟ್ಟೆಯ ವೃತ್ತದ ಬಳಿ ಪೊಲೀಸರು ಮತ್ತು ಬಜರಂಗದಳ ಕಾರ್ಯಕರ್ತರು ವಾಹನವನ್ನು ಅಡ್ಡಹಾಕಿದ್ದು ಟೆಂಪೋದಲ್ಲಿದ್ದ ಇಬ್ಬರು ಹೊರಗೆ ಓಡಿ ಪರಾರಿಯಾಗಿದ್ದಾರೆ. ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಲು ಸಾಗಿಸುವ ಟೆಂಪೋದಲ್ಲಿ ಪರಿಶೀಲನೆ ನಡೆಸಿದಾಗ, ಒಳಭಾಗದಲ್ಲಿ ಗೋಣಿ ಚೀಲದಲ್ಲಿ ಅಡಗಿಸಿಟ್ಟ ಗೋವುಗಳ ಮಾಂಸ ಪತ್ತೆಯಾಗಿದೆ.
ಮೂರ್ನಾಲ್ಕು ಗೋಣಿಗಳಲ್ಲಿ ಮಾಂಸವನ್ನು ತುಂಬಿಸಿಟ್ಟು ಎದುರಿಗೆ ಕಾಣುವಂತೆ ಹಾಲಿನ ಟ್ರೇಗಳನ್ನು ಇಡಲಾಗಿತ್ತು. ಬಜರಂಗದಳ ಕಾರ್ಯಕರ್ತರ ಮಾಹಿತಿ ಪ್ರಕಾರ, ಐನೂರು ಕೆಜಿ ಮಾಂಸ ಇರಬಹುದು ಎನ್ನಲಾಗುತ್ತಿದೆ. ಪೊಲೀಸರು ಮಾಂಸದ ಮೌಲ್ಯ, ಪ್ರಮಾಣದ ಬಗ್ಗೆ ತಪಾಸಣೆ ಆಗ್ತಾ ಇದೆ ಎಂದು ತಿಳಿಸಿದ್ದಾರೆ.
'ಆರೋಕ್ಯಾ' ಹೆಸರಿನ ಚಿಕ್ಕಮಗಳೂರು ಮೂಲದ ಹಾಲು ಆಗಿದ್ದು ಆರೋಕ್ಯಾ ನೇಮ್ ಪ್ಲೇಟ್ ಇರುವ ಟೆಂಪೋದಲ್ಲಿ ಗೋಮಾಂಸ ಪತ್ತೆಯಾಗಿದ್ದು ಇದೇ ಮೊದಲು. ಪೊಲೀಸರು ಮತ್ತು ಬಜರಂಗದಳ ಎಲರ್ಟ್ ಆದಬಳಿಕ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಣೆ ಆಗುತ್ತಿರುವ ಗುಮಾನಿ ಕೇಳಿಬಂದಿತ್ತು. ಹಾಲಿನ ವಾಹನವಾದ್ರೆ ಪೊಲೀಸರು ಕೂಡ ಚೆಕ್ ಮಾಡಲ್ಲ. ಸಂಶಯವೂ ಬರಲ್ಲ ಎಂಬ ನೆಲೆಯಲ್ಲಿ ಅಕ್ರಮ ಸಾಗಾಟಕ್ಕೆ ಹೊಸ ತಂತ್ರ ಹೂಡಿದ್ದರು.
In the early morning hours on Tuesday, October 13, Bajrang Dal activists conducted an action After coming to know that beef was being illegally transported in a milk van.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm