ಬ್ರೇಕಿಂಗ್ ನ್ಯೂಸ್
07-11-22 08:58 pm Udupi Correspondent ಕರಾವಳಿ
ಉಡುಪಿ, ನ.7: ರಾಜ್ಯದ ಬಿಜೆಪಿ ಸರಕಾರ ಕರಾವಳಿಯಲ್ಲಿ ಮೊದಲ ಬಾರಿಗೆ ಜನಸಂಕಲ್ಪ ಸಮಾವೇಶ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಂಟಿಯಾಗಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಸೋಮವಾರ ಜನಸಂಕಲ್ಪ ಸಭೆ ನಡೆದಿದ್ದು, ಕರಾವಳಿಯ ಜನರು ಮೋದಿ ಪರವಾಗಿದ್ದಾರೆ ಅನ್ನುವುದನ್ನು ತಿಳಿದು ಸಿಎಂ ಬೊಮ್ಮಾಯಿ ಅವರು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇರಬೇಕೆಂದು ಪ್ರತಿಪಾದಿಸಿದ್ದಾರೆ.
ಕರಾವಳಿಗೆ 2 ಲಕ್ಷ ಕೋಟಿ ಬಂಡವಾಳ
ಎಂಟು ವರ್ಷದ ಹಿಂದೆ ಭಾರತದ ಆರ್ಥಿಕ ಸ್ಥಿತಿ ದುಸ್ಥಿತಿಯಲ್ಲಿ ಇತ್ತು. ಈಗ ಇಡೀ ಜಗತ್ತು ಭಾರತವನ್ನು ನೋಡುವಂತಾಗಿದೆ. ಪ್ರಧಾನಿ ಮೋದಿ ಕರಾವಳಿ ಅಭಿವೃದ್ಧಿಗೆ ಸಾಗರ ಮಾಲಾ ಕಾರ್ಯಕ್ರಮಕ್ಕೆ ಅನುದಾನ ಕೊಟ್ಟಿದ್ದಾರೆ. ಕಡಲ ತೀರದ ಆರ್ಥಿಕತೆ ಹೆಚ್ಚಲಿದ್ದು ಇದಕ್ಕಾಗಿ ಗತಿಶಕ್ತಿ ಯೋಜನೆ ಮಾಡಿದ್ದಾರೆ. ಬಂದರನ್ನು ಮುಖ್ಯ ನಗರಗಳಿಗೆ ಜೋಡಿಸಬೇಕು ಅಂತ ಯೋಜನೆ ತಂದಿದ್ದಾರೆ. ಸುಮಾರು ಎರಡು ಲಕ್ಷ ಕೋಟಿ ಬಂಡವಾಳ ಮಂಗಳೂರು, ಉಡುಪಿ, ಕಾರವಾರಕ್ಕೆ ಬರಲಿದೆ. ಇದರ ಸಾಕಾರಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಮುಂದುವರಿಯಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಕರಾವಳಿಯಲ್ಲಿ ಎರಡು ಲಕ್ಷ ಮೀನುಗಾರರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದೇವೆ. 20 ಲಕ್ಷ ಹೆಚ್ಚು ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿದ್ದೇವೆ. ಈ ಸೌಲಭ್ಯ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ಮೀನುಗಾರರ 5 ಸಾವಿರ ಮನೆಗಳಿಗೆ ಸಾಲ ಮಂಜೂರು ಮಾಡಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ, ಕರಾವಳಿ ಭಾಗದ ಜನರಿಗೆ ಕುಚ್ಚಲಕ್ಕಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನದ್ದೇ ರೈತರ ಅಕ್ಕಿಯನ್ನು ಖರೀದಿಸಿ ನ್ಯಾಯಬೆಲೆ ಅಂಗಡಿಯಲ್ಲಿ ನೀಡುತ್ತೇವೆ ಎಂದು ಹೇಳಿದರು. ಕರಾವಳಿಯಲ್ಲಿ ಎಂಟು ಮೀನುಗಾರಿಕಾ ಬಂದರು ಅಭಿವೃದ್ಧಿ ಮಾಡಲಾಗುತ್ತದೆ. ನೂರು ಹೈಸ್ಪೀಡ್ ಬೋಟ್ ಮಂಜೂರು ಮಾಡಲಾಗಿದೆ. ಅದರಲ್ಲಿ ನಲ್ವತ್ತು ಪರ್ಸೆಂಟ್ ಸಬ್ಸಿಡಿ ನೀಡಲಾಗಿದೆ ಎಂದರು.
ಅಧಿಕಾರದ ಕನಸು ಬಿಟ್ಟು ಕ್ಷೇತ್ರ ಉಳಿಸಿಕೊಳ್ಳಿ
ಸಿದ್ದರಾಮಯ್ಯ ಅಹಿಂದ, ಸಾಮಾಜಿಕ ನ್ಯಾಯ ಎಂದು ಹೇಳುತ್ತಿದ್ದರು. ಇವರ ಅಹಿಂದ ಈಗ ಎಲ್ಲಿ ಹೋಗಿದೆ, ಅಹಿಂದ ಈಗ ಉಳಿದಿಲ್ಲ, ಒಬ್ಬರೇ ಮುಂದೆ ಹೋಗಿದ್ದಾರೆ. ಕಾಂಗ್ರೆಸ್‌ವರು ನಮ್ಮದೇ ಸರ್ಕಾರ ಬರುತ್ತೆ ಅಂತಾರೆ. ಇವರು ಸರಕಾರದ ಕನಸು ಕಾಣುವುದನ್ನು ಬಿಟ್ಟು ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ನೋಡಿ. ಮುಸ್ಲಿಮರನ್ನು ಮೋಸದಿಂದ ಬಳಸಿಕೊಂಡಿದ್ದೀರಿ. ಈಗ ಅವರೂ ಎಚ್ಚರಗೊಂಡಿದ್ದಾರೆ. ನಿಮ್ಮ ಆಳ್ವಿಕೆಯ 50 ವರ್ಷದಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಇತ್ತೆಂದರೆ, ಮಕ್ಕಳಿಗೆ ಕೊಡುವ ದಿಂಬಿನಲ್ಲೂ ಹಗರಣ ಮಾಡಿದ್ದೀರಿ. ಸೋಲಾರ್ ಹೆಸರಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಬಿಡಿಎನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಸಣ್ಣ ನೀರಾವರಿ ಯೋಜನೆಯಡಿ ಪೂರ್ತಿ ಭ್ರಷ್ಟಾಚಾರ ಮಾಡಿದ್ದೀರಿ ಎಂದು ದೂರಿದರು.
ಈ ಭಾಗದ ಬಿಲ್ಲವ ಮುಖಂಡರು ನಾರಾಯಣ ಗುರು ಹೆಸರಲ್ಲಿ ನಿಗಮದ ಬೇಡಿಕೆ ಇಟ್ಟಿದ್ದಾರೆ. ನಿಗಮ ಸ್ಥಾಪನೆ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಉಡುಪಿ ಜಿಲ್ಲೆಯ ಶಾಸಕರು, ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರದಷ್ಟು ಜನರು ಸೇರಿದ್ದರು.
ಜನಸಂಕಲ್ಪಯಾತ್ರೆ, ಕಾಪು, ಉಡುಪಿ ಜಿಲ್ಲೆ.#JanaSankalpaYatre
— Basavaraj S Bommai (@BSBommai) November 7, 2022
https://t.co/NIV7dMwfmw
ಕರಾವಳಿ ಪ್ರದೇಶದ ಅಭಿವೃದ್ಧಿಗೆ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ. ಕರಾವಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಸಿ.ಆರ್.ಝೆಡ್ ನಿಯಮಗಳಿಗೆ ತಿದ್ದುಪಡಿ ತಂದಿದೆ. ಸಾಗರ್ ಮಾಲಾ ಯೋಜನೆಗೆ ₹1774 ಕೋಟಿ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ.#JanaSankalpaYatre pic.twitter.com/L2DKgT6h8c
— Basavaraj S Bommai (@BSBommai) November 7, 2022
ಕನ್ನಡ ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೀನುಗಾರರಿಗೆ ಅಗತ್ಯವಿರುವ ಹೆಚ್ಚುವರಿ ಸೀಮೆಎಣ್ಣೆ ಒದಗಿಸಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಮೀನುಗಾರರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ.#JanaSankalpaYatre pic.twitter.com/w3icYq23vl
— Basavaraj S Bommai (@BSBommai) November 7, 2022
ಇಂದು ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ. ಕಾಂಗ್ರೆಸ್ ಪಕ್ಷ ಕೆಲವು ಸಮುದಾಯಗಳನ್ನು ಕೇವಲ ಭಾಷಣದಿಂದಲೇ ಹೊಟ್ಟೆ ತುಂಬಿಸುತ್ತಾ ಬಂದಿದೆ. ಸಿದ್ದರಾಮಯ್ಯ ಅವರಂತಹ ನಾಯಕರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ತಾವೇ ಮುಂದುವರಿದಿದ್ದಾರೆಯೇ ಹೊರತು ಯಾರನ್ನೂ ಬೆಳೆಯಲು ಬಿಟ್ಟಿಲ್ಲ.#JanaSankalpaYatre pic.twitter.com/k71WX4t3Vp
— Basavaraj S Bommai (@BSBommai) November 7, 2022
Karnataka Chief Minister Basavaraj Bommai Monday said the state unit of the BJP will conduct two more ‘rath yatras’ after the completion of the ongoing Jana Sankalp Yatra.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
11-07-25 08:55 pm
Mangalore Correspondent
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
11-07-25 10:10 pm
HK News Desk
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm