ಬ್ರೇಕಿಂಗ್ ನ್ಯೂಸ್
27-10-22 10:53 pm Mangalore Correspondent ಕರಾವಳಿ
ಮಂಗಳೂರು, ಅ.27: ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ವಿರೋಧಿ ಹೋರಾಟ ಸಮಿತಿಯವರು ಸೆ.28ರಿಂದ ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಪೊಲೀಸರು ಟೋಲ್ ಗೇಟ್ ಸುತ್ತಮುತ್ತ 144 ಕಲಂ ಅಡಿ ಸೆಕ್ಷನ್ ಜಾರಿಗೊಳಿಸಿದ್ದು, ಧರಣಿ ನಡೆಸುವುದನ್ನು ಹತ್ತಿಕ್ಕಲು ಮುಂದಾಗಿದ್ದಾರೆ.
ಅ.18ರಂದು ಟೋಲ್ ಗೇಟ್ ಮೇಲೆ ಮುತ್ತಿಗೆ ಹಾಕಿದ್ದ ಸಾವಿರಾರು ಮಂದಿ, ಪೊಲೀಸರ ನಿಯಂತ್ರಣಕ್ಕೆ ಸಿಗದೆ ಸವಾಲಾಗಿ ಪರಿಣಮಿಸಿದ್ದರು. ಆನಂತರ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು. ಆದರೆ ಅಂದು ಮಧ್ಯಾಹ್ನ 12 ಗಂಟೆ ವರೆಗೆ ಟೋಲ್ ಗೇಟ್ ಮತ್ತು ಹೆದ್ದಾರಿ ಬಂದ್ ಆಗಿದ್ದು ಜಿಲ್ಲಾಡಳಿತಕ್ಕೆ ಭಾರೀ ಮುಜುಗರ ಆಗಿತ್ತು. ಈ ಬಾರಿ ಅದೇ ನೆಪವನ್ನು ಮುಂದಿಟ್ಟು ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲಾಗುತ್ತದೆ ಎಂದು ಹೇಳಿ ಸ್ಥಳದಲ್ಲಿ ಸೆಕ್ಷನ್ ಜಾರಿ ಮಾಡಲಾಗಿದೆ.
ಇದಕ್ಕೂ ಮೊದಲೇ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯವರು ಸುರತ್ಕಲ್ ಠಾಣೆ ಪೊಲೀಸರಿಂದ ಪ್ರತಿಭಟನಾ ಧರಣಿಗೆ ಅನುಮತಿ ಪಡೆದುಕೊಂಡಿದ್ದಾರೆ. ಬೆಳಗ್ಗೆ 10ರಿಂದ ರಾತ್ರಿ 10 ಗಂಟೆ ವರೆಗೆ ಧ್ವನಿವರ್ಧಕ ಅಳವಡಿಸುವುದಕ್ಕೂ ಪೊಲೀಸರು ಅವಕಾಶ ನೀಡಿದ್ದರು. ಆದರೆ, ಇದರ ನಡುವಲ್ಲೇ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ 144 ಸೆಕ್ಷನ್ ಅಡಿ ಸುರತ್ಕಲ್ ಠಾಣೆ ವ್ಯಾಪ್ತಿಯ ಟೋಲ್ ಗೇಟ್ ಆಸುಪಾಸಿನ 200 ಮೀಟರ್ ಸುತ್ತಳತೆಯಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ನಿಷೇಧಾಜ್ಞೆ ಹೇರಿದ್ದಾರೆ. ಅ.28ರ ಬೆಳಗ್ಗೆ 6 ಗಂಟೆಯಿಂದ ನ.3ರ ಸಂಜೆ 6 ಗಂಟೆ ವರೆಗೆ ಸೆಕ್ಷನ್ ಜಾರಿ ಇರಲಿದ್ದು, ಇದರ ಪ್ರಕಾರ ಸೆಕ್ಷನ್ ಜಾರಿ ಇರುವ ಪ್ರದೇಶದಲ್ಲಿ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ. ಘೋಷಣೆ ಕೂಗುವಂತಿಲ್ಲ. ಭಿತ್ತಿಪತ್ರ ಹಿಡಿಯುವಂತಿಲ್ಲ. ಆಮೂಲಕ ಟೋಲ್ ಗೇಟ್ ವಿರೋಧಿ ಹೋರಾಟವನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ.
ಈ ನಡುವೆ, ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆದ್ದಾರಿ ಅಧಿಕಾರಿಗಳು ಮತ್ತು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರತಿನಿಧಿಗಳ ಜೊತೆ ಸಭೆ ನಡೆದಿದ್ದು, ಹೆದ್ದಾರಿ ಅಧಿಕಾರಿಗಳು ಮತ್ತೆ ಹತ್ತು ದಿನಗಳ ಅವಕಾಶ ಕೇಳಿದ್ದಾರೆ. ಆದರೆ ಟೋಲ್ ಗೇಟ್ ಹೋರಾಟ ಸಮಿತಿಯವರು ತೆರವಿನ ಬಗ್ಗೆ ನಿಶ್ಚಿತ ದಿನಾಂಕ ಹೇಳದೆ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಅ.28ರಿಂದ ಅನಿರ್ದಿಷ್ಟ ಧರಣಿ ಯಥಾ ಪ್ರಕಾರ ನಡೆಯಲಿದೆ ಎಂದಿದ್ದರು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಪೊಲೀಸರ ಮೂಲಕ ಸೆಕ್ಷನ್ ಜಾರಿಗೊಳಿಸಿದ್ದು ಟೋಲ್ ಗೇಟ್ ಹೆಸರಲ್ಲಿ ಪ್ರತಿಭಟನೆ ನಡೆಯದಂತೆ ಮಾಡಿದ್ದಾರೆ.
Police commissioner N Shashi Kumar, has ordered prohibitory orders under section 144 upto a radius of 200 meters around NITK Toll Plaza from 6 am on October 28 till 6 pm on November 3 in view of the protests planned by the Toll Gate Virodhi Horata Samithi, Surathkal.Gatherings of more than five people, fireworks, hurling stones, carrying arms, guns, expletives against officials, slogans, processions, protests, roadblocks and such other activities are banned when section 144 is in force.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am