ಬ್ರೇಕಿಂಗ್ ನ್ಯೂಸ್
07-07-22 04:30 pm Mangalore Correspondent ಕರಾವಳಿ
ಪುತ್ತೂರು, ಜುಲೈ 7 : ಹಿರಿಯ ಯಕ್ಷಗಾನ ಕಲಾವಿದ, ಕನ್ನಡ- ತುಳು ಪ್ರಸಂಗಗಳಲ್ಲಿ ತಮ್ಮ ಮನೋಜ್ಞ ಪಾತ್ರಗಳಿಂದಲೇ ಜೀವ ತುಂಬಿದ್ದ "ಕಾಡಮಲ್ಲಿಗೆ" ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ (73) ಇಂದು ಬೆಳಗ್ಗೆ ನಿಧನರಾದರು.
ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಕಲಾವಿದರ ಒಡನಾಡಿಯಾಗಿದ್ದ ವಿಶ್ವನಾಥ ರೈ ಹಳೆ ಪೀಳಿಗೆಯ ಕೊನೆಯ ಕೊಂಡಿಗಳಲ್ಲಿ ಒಬ್ಬರು. ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿರುವುದಲ್ಲದೆ ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.
ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ಒಬ್ಬರಾದ ವಿಶ್ವನಾಥ ರೈ 28-2-1949 ರಲ್ಲಿ ಜನಿಸಿದ್ದರು. ಇವರಿಗೆ ಇಬ್ಬರು ಅಕ್ಕಂದಿರು, ಒಬ್ಬಾಕೆ ತಂಗಿ ಇದ್ದರು. ಇವರು ಏಕೈಕ ಪುತ್ರನಾಗಿದ್ದು ಬಡತನದ ಕಾರಣ ಅಂದಿನ ಕಾಲದಲ್ಲಿ ಕೇವಲ 2ನೇ ತರಗತಿಯಷ್ಟೇ ಓದಿದ್ದರು.
ಆಗೆಲ್ಲ ಯಕ್ಷಗಾನ ಕಲಿಯುವುದು, ಕುಣಿಯುವುದು ಎಂದರೆ ಪ್ರತಿಷ್ಠೆಯಾಗಿತ್ತು. ಕಾಸರಗೋಡು ಗಡಿಭಾಗದ ಅಚ್ಚುತ ಮಣಿಯಾಣಿ ಅವರಿಂದ ಸಣ್ಣ ವಯಸ್ಸಿನಲ್ಲೇ ಯಕ್ಷಗಾನ ನಾಟ್ಯ ತರಬೇತಿ ಪಡೆದು ತಮ್ಮ 9ನೇ ವರ್ಷದಲ್ಲಿ ಮೊದಲ ಬಾರಿಗೆ ರಂಗದಲ್ಲಿ ಅಭಿನಯಿಸಿದ್ದರು. ಇದೇ ಸಂದರ್ಭದಲ್ಲಿ ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ಮನೋಜ್ಞ ಅಭಿನಯಕ್ಕಾಗಿ ಮಾಸ್ಟರ್ ಹಿರಣ್ಣಯ್ಯ ಅವರಿಂದ ಚಿನ್ನದ ಉಂಗುರವನ್ನು ಸನ್ಮಾನ ರೂಪದಲ್ಲಿ ಸ್ವೀಕರಿಸಿದ್ದರು.
80ರ ದಶಕದಲ್ಲಿ ಕರ್ನಾಟಕ ಮೇಳ ಒಂದರಲ್ಲೇ 35 ವರ್ಷಗಳ ತಿರುಗಾಟ ಮಾಡಿದ್ದಾರೆ. ಕಾಡ ಮಲ್ಲಿಗೆ ಪ್ರಸಂಗ ಕರ್ನಾಟಕ ಮೇಳದಲ್ಲಿದ್ದಾಗ ವಿಶ್ವನಾಥ ರೈಯವರಿಗೆ ಹೆಸರು ತಂದುಕೊಟ್ಟಿತ್ತು. ಕಾಡಮಲ್ಲಿಗೆ ಹೆಸರಿನ ಸ್ತ್ರೀ ಪಾತ್ರವನ್ನು ವಿಶ್ವನಾಥ ರೈ ಅದರಲ್ಲಿ ನಿರ್ವಹಿಸಿದ್ದರು. ಸ್ತ್ರೀವೇಷ, ಪುಂಡು ವೇಷಗಳನ್ನು ನಿರ್ವಹಿಸುತ್ತಿದ್ದರು. ಉಳಿದಂತೆ ಮಧೂರು ಮೇಳ 1 ವರ್ಷ, ಸುರತ್ಕಲ್ ಮೇಳ 5 ವರ್ಷ, ಕದ್ರಿ ಮೇಳ 2 ವರ್ಷ, ಬಪ್ಪನಾಡು 1 ವರ್ಷ, ಕುಂಟಾರು ಮೇಳ, 2 ವರ್ಷ, ಎಡನೀರು 1 ವರ್ಷ, ಕಟೀಲು ಮೇಳದಲ್ಲಿ 3 ವರ್ಷ ಯಕ್ಷಗಾನ ಸೇವೆಗಾಗಿ ತಿರುಗಾಟ ಮಾಡಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವನಾಥ ರೈ, ಜುಲೈ 6ರ ಬುಧವಾರ ರಾತ್ರಿ ಬೆಳ್ಳಾರೆಯ ಸ್ವಗ್ರಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.
Senior Yakshagana artiste, veteran of Kannada and Tulu Prasangas, Bellare Vishwanatha Rai passed away on the morning of Thursday, July 7. Rai was a contemporary of Mandeccha, Alike, Bolara, Samaga, Mizaru and Pulincha's well known artistes from Karnataka Mela.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm