ಬ್ರೇಕಿಂಗ್ ನ್ಯೂಸ್
01-10-20 03:20 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 1: ಕರೊನಾ ವೈರಸ್‌ಗೆ ಇಡೀ ಮಾನವ ಸಂಕುಲವೇ ನಡುಗುತ್ತಿದ್ದರೆ, ಇತ್ತ ಹಳ್ಳಿ ಪ್ರದೇಶಗಳಲ್ಲಿ ನಾಯಿಗಳಿಗೆ ಮಿದುಳು ಜ್ವರ ಕಾಣಿಸಿಕೊಂಡಿದ್ದು ಸಾಮೂಹಿಕವಾಗಿ ಬಲಿಯಾಗುತ್ತಿವೆ.
ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಈ ವೈರಸ್ ಕಾಣಿಸಿಕೊಂಡು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ನಾಯಿಗಳು ಬಲಿಯಾಗುತ್ತಿವೆ. ಪರಿಣಾಮ ಸಾಕು ನಾಯಿಗಳಿಗೂ ಈ ರೋಗ ಆವರಿಸುವ ಸಾಧ್ಯತೆ ಕಂಡುಬಂದಿದ್ದು ಜನರಲ್ಲಿ ಭೀತಿ ಕಾಡಲಾರಂಭಿಸಿದೆ. ಇದೊಂದು ವೈರಸ್ ದಾಳಿಯಾಗಿದ್ದು ಮೂರು ತಿಂಗಳ ಮೊದಲೇ ನಾಯಿಗಳು ರೋಗಕ್ಕೆ ತುತ್ತಾದರೂ ಆರಂಭದಲ್ಲಿ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಕೊನೆಯ ಹತ್ತರಿಂದ ಹದಿನೈದು ದಿನಗಳಲ್ಲಿ ರೋಗ ಉಲ್ಭಣಿಸಿ ನಾಯಿಗಳು ಸಾವನ್ನಪ್ಪುತ್ತವೆ.

ವೈರಸ್‌ಗೆ ತುತ್ತಾದ ನಾಯಿಗಳು ರೇಬಿಸ್ ಪೀಡಿತ ನಾಯಿಯಂತೆ ವರ್ತಿಸುತ್ತಿದ್ದು, ಸಾಕು ನಾಯಿಗಳ ಮೇಲೆ ದಾಳಿ ಮಾಡುತ್ತವೆ. ಆ ಮೂಲಕ ರೋಗ ಒಂದರಿಂದ ಇನ್ನೊಂದಕ್ಕೆ ಹರಡುತ್ತಿದ್ದು, ಸಾಕುನಾಯಿ ಮಾಲೀಕರನ್ನು ಆತಂಕಕ್ಕೀಡು ಮಾಡುತ್ತಿದೆ. ಮೂಗಿನಿಂದ ಕೀವು ಬರಲು ಆರಂಭವಾಗುತ್ತದೆ ಮತ್ತು ಬಾಯಿಯಿಂದಲೂ ಕೀವು ಮಿಶ್ರಿತ ನೀರು ನಾಯಿ ಸಂಚರಿಸಿದ ಉದ್ದಕ್ಕೂ ಬೀಳುವುದರ ಪರಿಣಾಮ ರೋಗ ಹರಡುತ್ತದೆ. ಇಂಥ ಮಿದುಳು ಜ್ವರದ ಹಾವಳಿ ಈಗ ಪುತ್ತೂರು, ಸುಳ್ಯದಲ್ಲಿ ಹೆಚ್ಚಿದ್ದು ಜನರಲ್ಲಿ ಭೀತಿ ಮೂಡಿಸಿದೆ.
ಈ ರೋಗದಿಂದ ಮನುಷ್ಯರಿಗೆ ಅಪಾಯವಿಲ್ಲ. ಬೇಸಿಗೆಯಲ್ಲಿ ರೋಗ ಹೆಚ್ಚಾಗಿ ಉಲ್ಭಣಿಸುತ್ತದೆ. ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸೀನ್ ನೀಡಬೇಕಾಗುತ್ತದೆ. ಬಳಿಕ 90 ದಿನ ಹಾಗೂ ನಂತರ ಪ್ರತಿ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರ ಮೂಲಕ ನಾಯಿಗಳನ್ನು ರೋಗದಿಂದ ರಕ್ಷಿಸಬಹುದು ಪಶು ವೈದ್ಯ ಡಾ.ಧರ್ಮಪಾಲ ಹೇಳುತ್ತಾರೆ.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am