ಬ್ರೇಕಿಂಗ್ ನ್ಯೂಸ್
25-05-22 10:23 am Mangalore Correspondent ಕರಾವಳಿ
ಮಂಗಳೂರು, ಮೇ 25: ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿ ಹಿಂದಿನ ಕಾಲದಲ್ಲಿ ದೇವಸ್ಥಾನ ಆಗಿತ್ತೇ ಎನ್ನುವ ಬಗ್ಗೆ ಹಿಂದು ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸುತ್ತಿದ್ದು, ಕೇರಳದ ಖ್ಯಾತ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಜ್ಯೋತಿಷ್ಯ ಚಿಂತನೆ ಆರಂಭಗೊಂಡಿದೆ.
ಸ್ಥಳೀಯ ಉಳಿಪ್ಪಾಡಿ ಗುತ್ತಿನ ಉದಯ ಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿಕೊಂಡಿದ್ದು ಜ್ಯೋತಿಷಿಗಳಿಗೆ 9 ವೀಳ್ಯದೆಲೆಗಳನ್ನು ನೀಡಿ ತಾಂಬೂಲ ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜ್ಯೋತಿಷಿ, ಈ ತಾಂಬೂಲಕ್ಕೆ ಗುರುಬಲ ಇದೆ. ಮೂರು ಆರೂಢದಲ್ಲಿ ಗುರುಬಲ ಇಲ್ಲ. ಸದ್ರಿ ಜಾಗ ಮೇಲ್ನೋಟಕ್ಕೆ ದೇವಸ್ಥಾನ ಇದ್ದ ಭೂಮಿ ಎನ್ನುವುದು ತಿಳಿದುಬರುತ್ತಿದೆ. ಯಾವ ದೇವ ಸಾನ್ನಿಧ್ಯ ಎಂದು ತಿಳಿಯಬೇಕಿದೆ ಎಂದು ಕವಡೆ ಕಾಯಿ ಉರುಳಿಸಿದರು.
ಆನಂತರ ಎರಡು ಬಾರಿ ಕವಡೆ ಕಾಯಿ ಹಾಕಿದ ಜ್ಯೋತಿಷಿಗಳು, ಸಾಮಾನ್ಯ ತಾಂಬೂಲ ಪ್ರಶ್ನೆ ಮೂಲಕ ಯಾವ ದೈವ ಸಾನ್ನಿಧ್ಯ ಅಂತ ಹೇಳಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಇತ್ತೇ ಅಥವಾ ದೈವಸ್ಥಾನ ಇತ್ತೇ ಎನ್ನುವ ಬಗ್ಗೆ ಮುಂದೆ ಚಿಂತನೆ ನಡೆಸಬೇಕಿದೆ. ಈ ಜಾಗದಲ್ಲಿ ಹಿಂದೆ ಮಠ, ಆರಾಧನೆ ಇದ್ದಿರುವ ಬಗ್ಗೆ ಕಂಡುಬರುತ್ತಿದೆ. ಅದು ದೈವಸಾನ್ನಿಧ್ಯ ಇದ್ದ ಭೂಮಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನ್ನಿಧ್ಯ ಸಂಪೂರ್ಣವಾಗಿ ನಾಶ ಆಗಿಲ್ಲ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಆಗಿತ್ತು. ಮಠ ನಾಶ ಆಗಲು ಜೀವ ಹಾನಿಯಾಗಿರೋದು ಕಾರಣವಾಗಿರಬಹುದು. ದೋಷಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜ್ಯೋತಿಷ್ಯ ಚಿಂತನೆ ನಡೆಸಿದ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದರು.
ಯಾವುದೋ ಒಂದು ಕಾಲದಲ್ಲಿ ನಾಶವಾದ ಭೂಮಿಗೆ ಈಗ ಅಭಿವೃದ್ಧಿಯಾಗುವ ಸಮಯ ಬಂದಿದೆ. ಯಾವುದೋ ವಿವಾದದಿಂದ ಭೂಮಿ ನಾಶವಾಗಿದೆ. ಸ್ಥಳ ಸಾನ್ನಿಧ್ಯದ ವಿವಾದದ ಸಂದರ್ಭದಲ್ಲಿ ಕೆಲ ಶಕ್ತಿಗಳು ಬಿಟ್ಟು ಹೋಗಿದ್ದರೂ, ಸದ್ರಿ ಜಾಗದಲ್ಲಿ ಇನ್ನೂ ಶಕ್ತಿಗಳು ನೆಲೆಸಿವೆ. ಅಲ್ಲಿ ಅಭಿವೃದ್ಧಿ ಆಗದಿದ್ದರೆ ಊರಿಗೇ ಸಮಸ್ಯೆಗಳು ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರಿಸಬೇಕಿದೆ ಎಂದು ಜ್ಯೋತಿಷ್ಯ ಚಿಂತನೆಯಲ್ಲಿ ಪಣಿಕ್ಕರ್ ಹೇಳಿದರು.
ತಾಂಬೂಲ ಪ್ರಶ್ನೆ ಇಡುವುದಕ್ಕೂ ಮೊದಲು ಹಿಂದು ಸಂಘಟನೆಯ ನಾಯಕರು ಪೊಳಲಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆನಂತರ, 9 ಗಂಟೆ ವೇಳೆಗೆ ತಾಂಬೂಲ ಪ್ರಶ್ನೆ ಕೇಳಲು ಗುರುಪುರ ಬಳಿಯ ರಾಮಾಂಜನೇಯ ಭಜನಾ ಮಂದಿರಕ್ಕೆ ಆಗಮಿಸಿದ್ದರು. ಸ್ಥಳೀಯ ಪ್ರಮುಖರು, ಹಿಂದು ಸಂಘಟನೆಗಳ ಪ್ರಮುಖರಾ ಶರಣ್ ಪಂಪ್ವೆಲ್, ಸುನಿಲ್ ಕೆ.ಆರ್ ಮತ್ತಿತರರು ಇದ್ದರು. ಮಳಲಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಮಸೀದಿ ಆಸುಪಾಸಿನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಲಿಂಗಾಯತ ಮಠಕ್ಕೆ ಸೇರಿದ ಜಾಗ ?
ಇದೇ ಸಾನಿಧ್ಯಕ್ಕೆ ಸಂಬಂಧಪಟ್ಟ ಇನ್ನೊಂದು ಜಾಗ ಎತ್ತರದ ಪ್ರದೇಶದಲ್ಲಿ ಇದೆ. ಅಲ್ಲಿ ಹುಡುಕಿದರೆ ಸಾಕಷ್ಟು ಅವಶೇಷಗಳು ಸಿಗುವ ಸಾಧ್ಯತೆ ಇದೆ. ಹಿಂದೆ ಇದ್ದ ಕ್ಷೇತ್ರದ ಪೂರ್ಣ ಚೈತನ್ಯ ಅಲ್ಲಿಯೇ ಉಳಿದುಕೊಂಡಿದೆ. ಇದು ಹತ್ತಕ್ಕೂ ಅಧಿಕ ದೈವ- ದೇವರ ಸಮೂಹ ಆರಾಧನೆ ನಡೆಯುತ್ತಿದ್ದ ಜಾಗವಾಗಿತ್ತು. ಇದು ಒಂದು ಮಠಕ್ಕೆ ಸಂಬಂಧಿಸಿದ ಕ್ಷೇತ್ರವಾಗಿತ್ತು. ಯಾವುದೋ ಒಂದು ಕಾಲದಲ್ಲಿ ನಾಶವಾಗಿ ಇರಬಹುದು. ಆದರೆ ಈಗ ಅದರ ಪುನಶ್ಚೇತನಕ್ಕೆ ಕಾಲ ಕೂಡಿಬಂದಿದೆ. ಇದು ಲಿಂಗಾಯತ ಮಠಕ್ಕೆ ಸೇರಿರುವ ಜಾಗವಾಗಿರುವ ಸಾಧ್ಯತೆಯಿದೆ ಎಂದು ಗೋಪಾಲಕೃಷ್ಣ ಪಣಿಕ್ಕರ್ ಹೇಳಿದರು.
ಗುರುಪುರ ಬಳಿ ಈಗಾಗಲೇ ಜಂಗಮ ಮಠವಿದ್ದು ಅದಕ್ಕೆ ಸೇರಿದ ಜಾಗ ಎನ್ನುವ ಅಂಶ ಜ್ಯೋತಿಷ್ಯ ಚಿಂತನೆಯಲ್ಲಿ ತಿಳಿದುಬಂದಿದೆ.
Tambula Prashne held at Malali temple, astrologer says no doubt there was temple. Tambula Prashne’ refers to the query from a person who approaches an astrologer with a small gift called tambula, consisting of betel leaves, betel nuts, flowers, sandal perfume/incense sticks, turmeric, kumkum (vermilion), dakshina (coins), coconut, bananas and other such items.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm