ಬ್ರೇಕಿಂಗ್ ನ್ಯೂಸ್
17-09-21 12:20 pm Source: One India kannada ಡಾಕ್ಟರ್ಸ್ ನೋಟ್
ನವದೆಹಲಿ, ಸೆ.17: ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ಅವರಲ್ಲಿ ಮಧ್ಯಮದಿಂದ ತೀವ್ರತರ ಸೋಂಕಿನ ಪರಿಣಾಮ ಕಂಡುಬರಬಹುದು ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಗರ್ಭಿಣಿಯರಿಗೆ ವೈದ್ಯಕೀಯ ಆರೈಕೆ ಹೆಚ್ಚು ಅವಶ್ಯಕವಾಗಿರುವುದಾಗಿ ತಿಳಿಸಿದೆ.
'ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್'ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಗರ್ಭಿಣಿಯರಲ್ಲಿ ಕೊರೊನಾ ಸೋಂಕು ತೀವ್ರತರವಾಗಿ ಪರಿಣಾಮ ಬೀರಿದರೆ ಅವಧಿಗೆ ಮುನ್ನವೇ ಹೆರಿಗೆ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ.
ರಕ್ತಹೀನತೆ, ಕ್ಷಯ ಹಾಗೂ ಮಧುಮೇಹದಂಥ ಸಮಸ್ಯೆಗಳು ಇದ್ದ ಗರ್ಭಿಣಿ ಹಾಗೂ ಪ್ರಸವಾನಂತರ ಮಹಿಳೆಯರಲ್ಲಿ ಕೊರೊನಾ ಸೋಂಕು ತೀವ್ರತರ ಸ್ವರೂಪ ಪಡೆಯಲಿದೆ ಎಂಬುದನ್ನು ಅಧ್ಯಯನ ಹೇಳಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದ ಮಹಿಳೆಯರಲ್ಲಿ ಸೋಂಕಿನ ಗುಣಲಕ್ಷಣಗಳು ಹಾಗೂ ಗರ್ಭಧಾರಣೆಯ ಫಲಿತಾಂಶಗಳನ್ನು ಅಧ್ಯಯನ ವಿಶ್ಲೇಷಿಸಿದೆ. ಈ ವಿಶ್ಲೇಷಣೆಯು PregCovid ರಿಜಿಸ್ಟ್ರಿ ದತ್ತಾಂಶವನ್ನು ಆಧರಿಸಿದೆ. ಗರ್ಭಿಣಿಯರು ಹಾಗೂ ಹೆರಿಗೆ ನಂತರದ ಅವಧಿಯಲ್ಲಿ ಮಹಿಳೆಯರಲ್ಲಿ ಕೊರೊನಾ ರೋಗನಿರ್ಣಯಗಳನ್ನು ವಿಶ್ಲೇಷಣೆ ಮಾಡಲಾಗಿದೆ.
ಮಹಾರಾಷ್ಟ್ರದ 19 ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯದಿಂದ ದೃಢಪಟ್ಟ ಗರ್ಭಿಣಿಯರಲ್ಲಿನ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗಿದೆ. ಕೊರೊನಾ ಮೊದಲ ಅಲೆಯಲ್ಲಿ (ಮಾರ್ಚ್ 2020-ಜನವರಿ 2021)ವರೆಗೆ 4203 ಗರ್ಭಿಣಿಯರ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.
'3213 ಜನನ, 77 ಗರ್ಭಪಾತಗಳು, 834 ವಿಫಲ ಗರ್ಭಧಾರಣೆಗಳು ಆಗಿರುವುದು ಪತ್ತೆಯಾಗಿದೆ. 534ರಲ್ಲಿ 13% ಮಹಿಳೆಯರು ರೋಗಲಕ್ಷಣ ಹೊಂದಿದ್ದರು. ಅದರಲ್ಲಿ 382 (72%) ಮಹಿಳೆಯರಿಗೆ ಸೌಮ್ಯ ಲಕ್ಷಣ, 112 (21%) ಮಧ್ಯಮ ಹಾಗೂ 40 (7.5%) ತೀವ್ರ ರೋಗ ಲಕ್ಷಣಗಳನ್ನು ಹೊಂದಿದ್ದರು. ಇವರಲ್ಲಿ ಅತ್ಯಂತ ಸಾಮಾನ್ಯವಾದ ಸಮಸ್ಯೆ ಎಂದರೆ ಅವಧಿಗೆ ಮುನ್ನ ಹೆರಿಗೆ (528- 16.3%) ಹಾಗೂ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ (328- 10.1%). ಒಟ್ಟು 158 (3.8%) ಗರ್ಭಿಣಿ ಹಾಗೂ ಪ್ರಸವಾನಂತರದ ಮಹಿಳೆಯರಿಗೆ ತೀವ್ರ ನಿಗಾ ಅಗತ್ಯ ಕಂಡುಬಂದಿದ್ದು, ಇದರಲ್ಲಿ 152 (96%) ಮಹಿಳೆಯರಲ್ಲಿ ಕೊರೊನಾ ಸೋಂಕು ಕಾರಣವಾಗಿದ್ದಾಗಿ ಅಧ್ಯಯನ ತಿಳಿಸಿದೆ.
ಒಟ್ಟಾರೆ ಪ್ರಕರಣದಲ್ಲಿ ಗರ್ಭಿಣಿಯರಲ್ಲಿ ಮರಣ ಪ್ರಮಾಣ (CFR) 0.8% ಇರುವುದಾಗಿ ತಿಳಿದುಬಂದಿದೆ. ಹೀಗಾಗಿ ನಮ್ಮ ವಿಶ್ಲೇಷಣೆಯು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ ಹಾಗೂ ಮಧ್ಯಮದಿಂದ ತೀವ್ರತರ ಸೋಂಕು ಕಂಡುಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಗರ್ಭಿಣಿಯರಿಗೆ ಹೆಚ್ಚಿನ ವೈದ್ಯಕೀಯ ನೆರವು ನೀಡಲು ಆರೋಗ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿ ಅಧ್ಯಯನ ಸೂಚಿಸಿದೆ. ಗರ್ಭಿಣಿಯರಿಗೆ ಸೋಂಕು ತಗುಲುವ ಅಪಾಯದ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಲಾಗುತ್ತಿದೆ. ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರತಿಯೊಬ್ಬ ಗರ್ಭಿಣಿಯೂ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ದಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಬೋರ್ಡ್ (ಸಿಡಿಸಿ) ಸೂಚನೆ ನೀಡಿದೆ. ''ಗರ್ಭಿಣಿಯರು ಲಸಿಕೆ ಪಡೆದುಕೊಂಡರೆ, ಸೋಂಕು ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ'' ಎಂದು ವೈದ್ಯರು ಹೇಳಿದ್ದಾರೆ. ಇತರಂತೆಯೇ ಎಲ್ಲಾ ಗರ್ಭಿಣಿಯರಿಗೂ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಸಿಡಿಸಿ ಮಾಹಿತಿ ಪ್ರಕಾರ ಕೇವಲ ಶೇ.23ರಷ್ಟು ಗರ್ಭಿಣಿಯರು ಮಾತ್ರ ಲಸಿಕೆ ಪಡೆದಿದ್ದಾರೆ. ''ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ, ಡೆಲ್ಟಾ ವೇಗವಾಗಿ ಹರಡುತ್ತಿರುವ ಕಾರಣ ಗರ್ಭಿಣಿಯರಿಗೂ ಸೋಂಕು ತಗುಲಬಹುದು'' ಎಂದು ಸಿಡಿಸಿ ನಿರ್ದೇಶಕ ಡಾ. ರೋಚಲ್ಲೆ ತಿಳಿಸಿದ್ದಾರೆ.
02-05-25 10:52 am
Bangalore Correspondent
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm