ಬ್ರೇಕಿಂಗ್ ನ್ಯೂಸ್
11-09-21 02:42 pm Shreeraksha, Boldsky ಡಾಕ್ಟರ್ಸ್ ನೋಟ್
ಉದ್ದವಾದ, ರೇಷ್ಮೆಯಂತಹ ಕೇಶರಾಶಿ ಬೇಕೆಂಬುದು ಹೆಚ್ಚಿನವರ ಆಸೆ. ಆದರೆ ಹವಾಮಾನ ಬದಲಾವಣೆ, ಮಾಲಿನ್ಯ, ಅನಾರೋಗ್ಯಕರ ಆಹಾರಪದ್ದತಿ ಮೊದಲಾದ ಕಾರಣಗಳಿಂದ ಹೆಚ್ಚಿನವರಿಗೆ ಆರೋಗ್ಯಕರ ಕೂದಲು ಪಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಕೆಲವು ನಾವು ನಂಬಿಕೊಂಡಿರುವ ವಿಚಾರಗಳೂ ಸಹ ಕೂದಲಿನ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.
ಆದ್ದರಿಂದ ನಾವಿಲ್ಲಿ ಕೂದಲಿನ ಬೆಳವಣಿಗೆಗೆ ಸಂಬಂಧಿಸಿದಂತೆ ನಾವು ನಿಜವೆಂದು ನಂಬಿಕೊಂಡು, ಪಾಲಿಸುತ್ತಿರುವ ವಿಚಾರಗಳ ಬಗ್ಗೆ ಹೇಳಲಿದ್ದೇವೆ. ನೆನಪಿಡಿ, ಈ ವಿಷಯಗಳು ಎಂದಿಗೂ ನಮ್ಮ ಕೂದಲನ್ನು ದಟ್ಟವಾಗಿ ಬೆಳೆಯಲು ಕಾರಣವಾಗುವುದಿಲ್ಲ.

ಪ್ರತಿದಿನ ಎಣ್ಣೆಹಚ್ಚುವುದರಿಂದ ಕೂದಲು ಬೆಳವಣಿಗೆಯಾಗುವುದು:
ನಿಮ್ಮ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯಾಗುತ್ತದೆ ಎಂಬುದು ಸಾಮಾನ್ಯ ಪುರಾಣವಾಗಿದೆ. ಇದು ನಿಜವಿಲ್ಲ, ವಾಸ್ತವವಾಗಿ ನೋಡುವುದಾದರೆ, ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹೇಗೆಂದರೆ, ಈ ಎಣ್ಣೆ ನೆತ್ತಿಯಲ್ಲಿ ಹೆಚ್ಚು ಕೊಳೆಯನ್ನು ಸಂಗ್ರಹಿಸಿ, ತಲೆಹೊಟ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೂದಲಿನ ಎಣ್ಣೆಗೆ ಸಾರಭೂತ ತೈಲಗಳನ್ನು ಸೇರಿಸಬೇಕು. ತುರಿಕೆಯನ್ನು ತಪ್ಪಿಸಲು ಮತ್ತು ತಲೆಹೊಟ್ಟು ಇಲ್ಲದಂತೆ ಮಾಡಲು ಕೂದಲು ತೊಳೆದ ನಂತರ, ಈ ಸಾರಭೂತ ತೈಲಗಳನ್ನ ಹಚ್ಚಬೇಕು. ಆದ್ದರಿಂದ ನಿಮ್ಮ ಕೂದಲಿಗೆ ವಾರಕ್ಕೆ 2-3 ಬಾರಿ ಎಣ್ಣೆ ಹಚ್ಚುವುದು ಸೂಕ್ತ.

ಬಿಳಿಕೂದಲನ್ನು ಕೀಳುವುದರಿಂದ ಹೆಚ್ಚಾಗುವುದು:
ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆನುವಂಶಿಕ ಸಮಸ್ಯೆಗಳು, ಒತ್ತಡ ಮತ್ತು ಆತಂಕ, ಸೂರ್ಯನ ಬೆಳಕು ಇತ್ಯಾದಿ ಸೇರಿದಂತೆ ಬಿಳಿಕೂದಲು ಬರಲು ಹಲವು ಕಾರಣಗಳಿರಬಹುದು. ಆದ್ದರಿಂದ ಈ ಸಮಸ್ಯೆ ಅಕಾಲಿಕವಾಗಿ ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸಿ, ಜೊತೆಗೆ ಉತ್ತಮ ನಿದ್ರೆ ಮಾಡಿ.

ತಲೆ ಬೋಳಿಸಿಕೊಳ್ಳುವುದರಿಂದ ಕೂದಲು ದಟ್ಟವಾಗುವುದು:
ಈ ಮಾತನ್ನು ಹೆಚ್ಚಿನ ಜನರು ಕುರುಡಾಗಿ ಅನುಸರಿಸುತ್ತಾರೆ, ಅದೇ ತಲೆ ಬೋಳಿಸುವುರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ ಎಂಬುದು. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಏಕೆಂದರೆ ಕೂದಲು ಕಿರುಚೀಲದಿಂದ ಬೆಳೆಯುತ್ತದೆ, ಇದು ನೆತ್ತಿಯ ಕೆಳಗೆ ಇದೆ. ನಾವು ಶೇವಿಂಗ್ ಮಾಡುವುದರಿಂದ ಈ ಕಿರುಚೀಲಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಕೂದಲು ಬೆಳೆಯಲು ಸಹಾಯವೂ ಆಗುವುದಿಲ್ಲ.

ಶಾಂಪೂ ಮತ್ತು ಕಂಡೀಷನರ್ ಒಂದೇ ಬ್ರಾಂಡ್ ಆಗಿರಬೇಕು:
ಒಂದೇ ಬ್ರಾಂಡ್‌ನ ಶಾಂಪೂ ಮತ್ತು ಕಂಡಿಷನರ್ ಬಳಸುವುದು, ಕೂದಲಿನ ಬೆಳವಣಿಗೆಗೆ ಸಹಾಯವಾಗುವುದಿಲ್ಲ. ನಿಮ್ಮ ದೇಹಕ್ಕೆ ಸೂಕ್ತವಾದ ಪದಾರ್ಥಗಳನ್ನು ಹೊಂದಿರುವ ಉತ್ಪನ್ನಗಳನ್ನು ಯಾವಾಗಲೂ ಆಯ್ಕೆ ಮಾಡಿ. ಒಂದೇ ಉದ್ದೇಶಕ್ಕಾಗಿ ವಿವಿಧ ಬ್ರಾಂಡ್‌ಗಳನ್ನು ಬಳಸುವುದರಿಂದ ನಿಮ್ಮ ಕೂದಲು ಮತ್ತು ನೆತ್ತಿಯ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು.

ನಿಯಮಿತ ಹೇರ್ ಕಟ್ ಕೂದಲಿನ ಬೆಳವಣಿಗೆಯನ್ನು ಸುಧಾರಿಸುವುದು:
ಹೇರ್ ಕಟ್ಟಿಂಗ್ ದಪ್ಪ ಅಥವಾ ಕೂದಲಿನ ಬೆಳವಣಿಗೆಯನ್ನು ಸುಧಾರಿಸುವ ಕೆಲಸ ಮಾಡುವುದಿಲ್ಲ. ಕೂದಲಿನ ವಿನ್ಯಾಸವನ್ನು ಹಾಳು ಮಾಡುವ ಮತ್ತು ಉದುರುವಿಕೆಗೆ ಕಾರಣವಾಗುವ ಸೀಳು ತುದಿಗಳನ್ನು ತೆಗೆಯಲು ಕೂದಲನ್ನು ಕತ್ತರಿಸುವುದು ಸೂಕ್ತ.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm