ಇಂತಹ ಹಣ್ಣುಗಳಿಗೆ ಕ್ಯಾನ್ಸರ್ ಕಾಯಿಲೆಯನ್ನು ತಡೆಯುವ ಪವರ್ ಇದೆ!

31-01-23 06:50 pm       Source: Vijayakarnataka   ಡಾಕ್ಟರ್ಸ್ ನೋಟ್

ಆಧುನಿಕ ಜೀವನ ಶೈಲಿ ಹಾಗೂ ಇತರ ಕೆಲವೊಂದು ಕಾರಣಗಳಿಂದ ಕಾಡುವಂತಹ ಮಾರಕ ಕಾಯಿಲೆ ಎಂದರೆ ಅದು ಕ್ಯಾನ್ಸರ್. ಹೀಗಾಗಿ ಆರೋಗ್ಯ ಕಾರಿ ಜೀವನಶೈಲಿಯ ಜೊತೆಗೆ ಕೆಲವೊಂದು.

ನಿಸರ್ಗದತ್ತವಾಗಿ ಸಿಗುವ ಪ್ರತಿಯೊಂದು ಹಣ್ಣುಗಳು ಕೂಡ ಅಷ್ಟೇ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ತಮ್ಮಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಾಂಶ ಗಳನ್ನು ಹೊಂದಿರುವ ಇಂತಹ ಹಣ್ಣುಗಳು, ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ.

ಇದಕ್ಕೆಲ್ಲಾ ಮುಖ್ಯ ಕಾರಣ, ಇಂತಹ ಹಣ್ಣುಗಳಲ್ಲಿ ಸಿಗುವ ನೈಸರ್ಗಿಕ ಸಕ್ಕರೆಯಾಂಶ, ವಿವಿಧ ಬಗೆಯ ವಿಟಮಿನ್ಸ್‌ಗಳು, ಖನಿಜಾಂಶಗಳು, ದೀರ್ಘ ಕಾಲದ ಕಾಯಿಲೆಗಳ ವಿರುದ್ಧ ಹೋರಾಡಿ, ನಮ್ಮ ಆರೋಗ್ಯಕ್ಕೆ ಏನೂ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿರುವ ಹಣ್ಣುಗಳ ಬಗ್ಗೆ ನೋಡೋಣ...

ಮೂಸಂಬಿ, ಕಿತ್ತಳೆ ಹಣ್ಣುಗಳು

Feeling the squeeze: Florida faces worst orange harvest crisis in a century  | Florida | The Guardian

  • ಸಿಟ್ರಸ್ ಹಣ್ಣುಗಳಾಗಿರುವಂತಹ ಮೂಸಂಬಿ, ಕಿತ್ತಳೆ ಹಣ್ಣುಗಳ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ. ಇವುಗಳಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಕಂಡು ಬರುವುದರ ಜೊತೆಗೆ ಆಂಟಿಆಕ್ಸಿಡೆಂಟ್ ಪ್ರಮಾಣ ಕೂಡ ಹೇರಳವಾಗಿ ಸಿಗುವುದ ರಿಂದ, ಕ್ಯಾನ್ಸರ್ ಕಾಯಿಲೆಯ ಅಪಾಯವನ್ನು ತಡೆಯಬಲ್ಲದು.
  • ಹೀಗಾಗಿ ವಾರದಲ್ಲಿ ಎರಡು-ಮೂರು ಬಾರಿಯಾದರೂ, ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ಅಥವಾ ಈ ಹಣ್ಣುಗಳನ್ನು ಬಳಸಿ ಮಾಡಿದಂತಹ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್ ಅಪಾಯವು ತುಂಬಾ ಕಡಿಮೆ ಎಂದು ಜಪಾನ್‌ನಲ್ಲಿ ನಡೆಸಿರುವಂತಹ ಅಧ್ಯಯನಗಳು ಹೇಳಿವೆ.​

ಸೇಬು ಹಣ್ಣುಗಳು

Apple News: Apples aren't what they used to be. Commercialisation has made  the fruit almost tasteless - The Economic Times

  • ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರ ಬಹುದು ಎನ್ನುವ ನಾಣ್ಣುಡಿ ನಮಗೆಲ್ಲಾ ಗೊತ್ತೇ ಇದೆ. ಅದು ನಿಜ ಕೂಡ. ಪ್ರಮುಖವಾಗಿ ಸೇಬಿನಲ್ಲಿ ಹಲವಾರು ಬಗೆಯ ಪೌಷ್ಟಿಕ ಸತ್ವಗ ಜೊತೆಗೆ ಪೋಷಕಾಂಶಗಳು ಕೂಡ ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ, ಮನುಷ್ಯ ನನ್ನು ಅನಾರೋಗ್ಯದಿಂದ ದೂರವಿಡಲು ನೆರವಾಗುವುದು.
  • ಹೀಗಾಗಿ, ಇದರ ಸಂಪೂರ್ಣ ಆರೋಗ್ಯ ಪ್ರಯೋಜನ ಗಳನ್ನು ಪಡೆಯಲು, ದಿನಕ್ಕೊಂದು ಸೇಬು ತಿನ್ನುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು. ಇದರಿಂದ ಹಲವಾರು ಕಾಯಿಲೆ ಗಳು ನಮ್ಮಿಂದ ದೂರವಾಗುವುದರ ಜೊತೆಗೆ, ಕ್ಯಾನ್ಸರ್‌ನ ಅಪಾಯ ಕೂಡ ಕಡಿಮೆ ಅಗು ವುದು. ಪ್ರಮುಖವಾಗಿ ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಹಾಗೂ ಶ್ವಾಸಕೋಶದ ಕ್ಯಾನ್ಸರ್‌‌ ನಂತಹ ಭಯಾನಕ ಕಾಯಿಲೆಯನ್ನುತಡೆಯುವುದು.

ಟೊಮೆಟೊ ಹಣ್ಣುಗಳು

10 Science-based Health Benefits of Tomatoes | Organic Facts

  • ಕೆಲವು ಬಗೆಯ ಖತರ್ನಾಕ್ ಕ್ಯಾನ್ಸರ್ ಕಾಯಿಲೆಗಳಿಗೆ, ಟೊಮೆಟೊ ಹಣ್ಣು ಪರಿಹಾರವಾಗಿ ಕೆಲಸ ಮಾಡುತ್ತದೆ.
  • ಉದಾಹರಣೆಗೆ ನೋಡುವುದಾದರೆ, ಲಿವರ್ ಕ್ಯಾನ್ಸರ್ ಶ್ವಾಸ ಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಇಂತಹ ಭಯಾನಕ ಕ್ಯಾನ್ಸರ್ ಕಾಯಿಲೆಗಳಿಗೆ ಟೊಮೆಟೊ ಹಣ್ಣುಗಳು ರಾಮಬಾಣವಾಗಿ ಕೆಲಸ ಮಾಡುತ್ತದೆ.
  • ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ಆಂಟಿ ಆಕ್ಸಿ ಡೆಂಟ್ ಅಂಶಗಳು ಅಗಾಧ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಲೈಕೋಪಿನ್ ಅನ್ನುವ ಸಂಯುಕ್ತ ಅಂಶ, ಈ ಹಣ್ಣಿನಲ್ಲಿರುವು ದರಿಂದ ಕ್ಯಾನ್ಸರ್ ವಿರುದ್ ಹೋರಾಡುವ ಎಲ್ಲಾ ಗುಣಲಕ್ಷಣ ಗಳು ಕೂಡ ಈ ಹಣ್ಣಿ ನಲ್ಲಿ ಕಂಡು ಬರುತ್ತದೆ. ​

ಡ್ರೈಫ್ರೂಟ್ಸ್‌‌ಗಳು

Golden Dry Fruits, Packaging Size: 500gm at Rs 200/kg in Patna | ID:  22529672748

  • ಡ್ರೈಫ್ರೂಟ್ಸ್‌ಗಳ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಪ್ರತಿದಿನ ನಿಯಮಿತವಾಗಿ ಒಣಫಲಗಳಾದ ನೆನೆಸಿಟ್ಟ ಬಾದಾಮಿ, ಗೋಡಂಬಿ, ಒಣ ಖರ್ಜೂರ ತಿನ್ನುವುದರಿಂದ ಒಳ್ಳೆಯ ಆರೋಗ್ಯ ಪ್ರಯೋಜನ ಗಳನ್ನು ಪಡೆಯ ಬಹುದು.
  • ಅದರಲ್ಲೂ ಮಿತವಾಗಿ ಒಣದ್ರಾಕ್ಷಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕಾಯಿಲೆ ತೀವ್ರ ರೂಪಕ್ಕೆ ತಿರುಗ ದಂತೆ ತಡೆಯುವುದು ಎಂದು ಹೇಳ ಲಾಗಿದೆ. ಪ್ರಮುಖ ವಾಗಿ ದೊಡ್ಡ ಕರುಳಿನಲ್ಲಿ ಬೆಳೆಯುವ ಕ್ಯಾನ್ಸರ್‌ನ್ನು ಇದು ತಡೆಯುವುದು.​

The Best Cancer Fighting Fruits That You Must Add In Your Diet.