ಬ್ರೇಕಿಂಗ್ ನ್ಯೂಸ್
23-03-22 08:05 pm HK Desk news ಸಿನಿಮಾ
ಮುಂಬೈ, ಮಾ.23: ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತ ಕಾಶ್ಮೀರ್ ಫೈಲ್ಸ್ ಚಿತ್ರ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರ ಮನಸೂರೆಗೊಳ್ಳುತ್ತಲೇ, ಬಾಲಿವುಡ್ ನಲ್ಲಿ ಅದೇ ರೀತಿಯ ಮತ್ತೊಂದು ಚಿತ್ರ ತೆರೆಗೆ ತರಲು ಸಿದ್ಧತೆ ನಡೆದಿದೆ. ಹಿಂದು ಹೃದಯ ಸಾಮ್ರಾಟ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಹೆಸರು ಪಡೆದಿರುವ ವೀರ ಸಾವರ್ಕರ್ ಜೀವನ ಸಾಧನೆಯನ್ನು ಆಧರಿಸಿ ಸಿನಿಮಾ ತಯಾರಿಸಲು ಚಿತ್ರತಂಡ ಮುಂದಾಗಿದೆ.
ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ರಾಜಬೀರ್, ಸುಖದೇವ್, ಭಗತ್ ಸಿಂಗ್ ಬಲಿದಾನದ ಮಾರ್ಚ್ 23ರಂದೇ ವೀರ ಸಾವರ್ಕರ್ ಚಿತ್ರ ಮಾಡುವುದಾಗಿ ಚಿತ್ರ ನಿರ್ದೇಶಕ ಮಹೇಶ್ ಮಾಂಜ್ರೇಕರ್ ಹೇಳಿದ್ದಾರೆ. ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ ಕಾಣಿಸಿಕೊಳ್ಳಲಿದ್ದಾರೆ.
ಸಾವರ್ಕರ್ ಜೀವನ ಕತೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರಾದ ಆನಂದ್ ಪಂಡಿತ್ ಹಾಗೂ ಸಂದೀಪ್ ಸಿಂಗ್ ಹೇಳಿದ್ದಾರೆ. ಸಾವರ್ಕರ್ ಪಾತ್ರ ಮಾಡುವುದು ತನಗೆ ದೊರೆತ ಗೌರವ ಎಂದು ನಟ ರಣದೀಪ್ ಹೂಡ ಹೇಳಿದ್ದಾರೆ. ಬಯೋಪಿಕ್ ಸಿನಿಮಾಗಳು ಬಾಲಿವುಡ್ ನಲ್ಲಿ ಹೆಚ್ಚು ಸದ್ದು ಮಾಡಿಲ್ಲವಾದರೂ, ನೈಜ ಕತೆ ಆಧರಿತ ಕಾಶ್ಮೀರ್ ಫೈಲ್ಸ್ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಆಕರ್ಷಣೆಗೆ ಕಾರಣವಾಗಿದ್ದರಿಂದ ಸಾವರ್ಕರ್ ಚಿತ್ರಕ್ಕೂ ಅದೇ ರೀತಿಯ ವೀಕ್ಷಕ ವರ್ಗ ಹುಟ್ಟಿಕೊಳ್ಳಲಿದೆ ಎಂಬ ಲೆಕ್ಕ ಹಾಕಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ ಎನ್ನಲಾಗುತ್ತಿದೆ.
Last year, a biopic on Vinayak Damodar Savarkar aka Veer Savarkar was announced to be helmed by filmmaker and actor Mahesh Manjrekar. Almost a year later, the makers have now announced Randeep Hooda as the lead star.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm