ಬ್ರೇಕಿಂಗ್ ನ್ಯೂಸ್
04-02-22 02:55 pm Source: Vijayakarnataka ಸಿನಿಮಾ
ಬೆಂಗಳೂರು, ಫೆ.4: ಹರೀಶ್ ಬಸವರಾಜ್, ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ಎಲ್ಲಿ ನೋಡಿದರೂ ಆಂಬ್ಯುಲೆನ್ಸ್ ಸೈರನ್ ಸದ್ದು. ಹಲವರ ನಿಧನದ ಸುದ್ದಿ, ಶವಸಂಸ್ಕಾರಕ್ಕೂ ಸ್ಥಳವಿಲ್ಲಎಂಬ ಮಾತುಗಳೇ ಕೇಳಿಬರುತ್ತಿದ್ದವು. ಇದೇ ವಿಚಾರವನ್ನು ಇಟ್ಟುಕೊಂಡು ನಟ ನೀನಾಸಂ ಸತೀಶ್ ಹಾಡೊಂದನ್ನು ಬರೆದು, ವಿಡಿಯೋ ಆಲ್ಬಂ ಮಾಡಿ ಅದಕ್ಕೆ 'ಅಶರೀರವಾಣಿ' ಎಂದು ಹೆಸರಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಸತೀಶ್ ಹಾಡನ್ನು ಬರೆದಿದ್ದು, ಅವರೇ ಸ್ವತಃ ಸಂಗೀತವನ್ನೂ ಸಂಯೋಜನೆ ಮಾಡಿದ್ದಾರೆ. ಸತೀಶ್ ಅವರ ಪುತ್ರಿ ಮನಸ್ವಿತಾ ಈ ಹಾಡಿನಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದಿರುವುದು ಈ ಹಾಡಿನ ವಿಶೇಷತೆ.
ಕೆಲ ದಿನಗಳ ಹಿಂದೆಯಷ್ಟೇ ಸತೀಶ್ ತಮ್ಮ ಪುತ್ರಿಯ ಫೋಟೊವನ್ನು ರಿವೀಲ್ ಮಾಡಿದ್ದರು. ಈಗ ವಿಡಿಯೋ ಆಲ್ಬಂನಲ್ಲಿ ಮನಸ್ವಿತಾರನ್ನು ನಟಿಸುವಂತೆ ಮಾಡಿ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 'ಬೆಂಗಳೂರಿನ ಆರ್‌ಆರ್ ನಗರದಲ್ಲಿರುವ ನನ್ನ ಕಚೇರಿಗೆ ಬಿಜಿಎಸ್ ಆಸ್ಪತ್ರೆ, ಕೆಲ ನರ್ಸಿಂಗ್ ಹೋಂಗಳು ಹತ್ತಿರದಲ್ಲೇ ಇವೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ದಿನವೊಂದಕ್ಕೆ ಹತ್ತಾರು ಬಾರಿ ಆಂಬ್ಯುಲೆನ್ಸ್ ಸೈರನ್ ಶಬ್ದವನ್ನು ಕೇಳುತ್ತಿದ್ದೆ. ಅದರಲ್ಲಿ ಬದುಕಿದವರೆಷ್ಟೋ, ಮೃತಪಟ್ಟವರೆಷ್ಟೊ ಗೊತ್ತಿಲ್ಲ. ಬಹಳ ಆತ್ಮೀಯರು ಸಹ ಕೋವಿಡ್‌ನ ಎರಡನೇ ಅಲೆಯಲ್ಲಿ ಮೃತಪಟ್ಟರು. ಆ ಸಮಯದಲ್ಲಿ ನನಗೆ 'ಈ ಅಶರೀರವಾಣಿ ಎಲ್ಲಿಂದ ಎಲ್ಲಿಗೆ ಹಾರಿತು' ಎಂಬ ಹಾಡು ಹುಟ್ಟಿಕೊಂಡಿತು. ಪ್ರಪಂಚದ ಈ ಪರಿಸ್ಥಿತಿಗೆ ಕಾರಣರಾರು ಎಂಬ ಪ್ರಶ್ನೆ, ಮನುಷ್ಯನ ಸ್ವಾರ್ಥಕ್ಕೆ ಭೂಮಿ ಎಂಬುದು ಸ್ಮಶಾನದ ರೀತಿಯಾಯಿತಲ್ಲಾ ಎಂಬ ಖೇದ-ಇವನ್ನೆಲ್ಲಾಇಟ್ಟುಕೊಂಡು ಈ ಹಾಡು ಬರೆದು, ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದೆ. ನನ್ನ ಸ್ನೇಹಿತರಾದ ರಘು ಕಾರ್ನಾಡ್ ಮತ್ತಿತರರು ಸಹಾಯ ಮಾಡಿದರು' ಎಂದು ಹೇಳುತ್ತಾರೆ ಸತೀಶ್.
ಇದು ನನಗೆ ವಿಭಿನ್ನ ಅನುಭವ
'ನನ್ನ ಮಗಳನ್ನು ನಿರ್ದೇಶನ ಮಾಡಿದ್ದು ಬೇರೆ ರೀತಿಯ ಅನುಭವ ನೀಡಿತು. ಮನಸ್ವಿತಾಗೆ ನಟನೆ, ಡಾನ್ಸ್ ಸೇರಿದಂತೆ ಹಲವು ವಿಷಯಗಳಲ್ಲಿ ತುಂಬಾ ಆಸಕ್ತಿ. ಕ್ಯಾಮೆರಾಗೆ ತಕ್ಕಂತೆ ನಟನೆ ಮಾಡಿದಳು. ಮತ್ತೆ ಈ ಶಾಟ್ ಬೇಕು ಅಂದ್ರೂ ಮಾಡಿದಳು. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕರೆದುಕೊಂಡು ಹೋದಾಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಬಹಳ ಚೆನ್ನಾಗಿ ನಟಿಸಿದ್ದಾಳೆ' ಎಂದು ಪುತ್ರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸತೀಶ್. ಈ ಹಾಡು ಸದ್ಯದಲ್ಲೇ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದ್ದು, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.
Actor Sathish Ninasams Daughter Manaswitha Debut To Sandalwood With Music Video.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm