ಬ್ರೇಕಿಂಗ್ ನ್ಯೂಸ್
27-10-21 10:49 pm Bengaluru Correspondent ಸಿನಿಮಾ
ಬೆಂಗಳೂರು, ಅ.27: ಕರೋನಾ ಆತಂಕ ದೂರವಾಗುತ್ತಿದ್ದಂತೆ ಚಿತ್ರ ರಸಿಕರಿಗೆ ಒಂದಾದ ಮೇಲೊಂದು ಸಿಹಿ ಸುದ್ದಿಗಳು ಸಿಗುತ್ತಿವೆ. ಕಾಮಿಡಿ ಕಿಂಗ್ ಶರಣ್ ಅಭಿನಯದ ಅವತಾರ್ ಪುರುಷ ಚಿತ್ರ ತಂಡ ದೀಪಾವಳಿಗೂ ಮೊದಲೇ ಸಿನಿ ರಸಿಕರಿಗೆ ಸರ್ಪ್ರೈಜ್ ಕೊಡುತ್ತಿದೆ.
ಕೆಜಿಎಫ್ ಚಿತ್ರದಂತೆಯೇ ಅವತಾರ ಪುರುಷ ಚಿತ್ರ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಅದೇನಾದರು ನಿಜವಾದರೆ ಶರಣ್ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ನ ಚಿತ್ರ ಇದಾಗಲಿದೆ. ದೀಪಾವಳಿಗೂ ಮೊದಲೇ ಚಿತ್ರತಂಡ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲ್ಲಿದ್ದು, ಸಿನಿಮಾ ಪ್ರಚಾರದ ಕಾವನ್ನ ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ.
ಶರಣ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ನ ಅವತಾರ್ ಪುರುಷ ಚಿತ್ರ ಹಾರರ್ ಕಾಮಿಡಿ ಸಬ್ಜೆಕ್ಟ್ ಹೊಂದಿದ್ದು ಪ್ರೇಕ್ಷಕರಲ್ಲಿ ಭಯ ಮತ್ತು ಕಾಮಿಡಿಯನ್ನ ಏಕಕಾಲಕ್ಕೆ ಹೊಮ್ಮಿಸಲಿದೆ. ಶರಣ್ ಮತ್ತು ಸುನಿ ಶೈಲಿಯ ಜೊತೆಗೆ ಆಪ್ತಮಿತ್ರ ಥರಹದ ಕಾಮಿಡಿಯನ್ನ ಈ ಚಿತ್ರದಲ್ಲಿ ನೋಡಬಹುದಾಗಿದೆ.
ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತಹ ಸಕ್ಸಸ್ ಚಿತ್ರಗಳನ್ನ ಕನ್ನಡಿಗರಿಗೆ ಕೊಟ್ಟ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಪುಷ್ಕರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತೆರೆಕಾಣಲಿದೆ.
ಶರಣ್ ಗೆ ನಾಯಕಿಯಾಗಿ ಚಂದನ ವನದ ಚಿಟ್ಟೆ
ಅವತಾರ ಪುರುಷನಿಗೆ ನಾಯಕಿಯಾಗಿ ಈ ಹಿಂದೆ ಚುಟು ಚುಟು ಅಂತ ಹೆಜ್ಜೆ ಹಾಕಿದ್ದ ಅಶಿಕಾ ರಂಗನಾಥ್ ಈ ಚಿತ್ರದಲ್ಲೂ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪಕ್ಕಾ ಮಾರ್ಡನ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಬಹುದಿನಗಳಿಂದ ಕಾಣದಂತೆ ಮಾಯವಾಗಿದ್ದ ಶ್ರೀನಗರ ಕಿಟ್ಟಿ ಅವತಾರ್ ಪುರುಷ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬ್ಲಾಕ್ ಮ್ಯಾಜಿಷಿಯನ್ ಆಗಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದರ ಜೊತೆಗೆ ಶರಣ್ ಅವರ ಮಗಳು ‘ಪುಣ್ಯ’ ಕೂಡ ನಟಿಸುತ್ತಿದ್ದಾರೆ. ಈ ಮೂಲಕ ಅಪ್ಪನ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನೂ ದೊಡ್ಡ ದೊಡ್ಡ ನಟರ ದಂಡೇ ಈ ಚಿತ್ರದಲ್ಲಿದೆ. ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಕಲಾವಿದರು ಅವತಾರ ಪುರುಷನಿಗೆ ಸಾಥ್ ಕೊಡಲಿದ್ದಾರೆ.
Sharan’s Avatar Purusha, which was scheduled to release on May 28 is all set to release this Deepavali 2021. The romantic comedy thriller will be released in two parts, each lasting two hours and twenty minutes. The first is titled Ashta Digbandana Madalaka, and it will feature a mix of intense characterisation and humour.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am