ಬ್ರೇಕಿಂಗ್ ನ್ಯೂಸ್
23-09-21 06:01 pm Headline Karnataka News Network ಸಿನಿಮಾ
ಮುಂಬೈ, ಸೆ.23: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎನ್ನುವ ವಿಚಾರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಅವಕಾಶಕ್ಕಾಗಿ ಕಾಂಪ್ರಮೈಸ್ ಆಗೋಕೆ ಹೇಳಿದ್ದರು ಎನ್ನುವ ಆರೋಪ ಖ್ಯಾತ ನಿರ್ದೇಶಕರು ಹಾಗೂ ನಟರ ಮೇಲೆ ಬಂದಿದೆ. ಅನೇಕ ನಟಿಯರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಳ್ಳುತ್ತಲೇ ಇದ್ದಾರೆ. ಬಾಲಿವುಡ್ನಲ್ಲಿ ಮಿಂಚಿದ್ದ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ.
ಮಲ್ಲಿಕಾ ಸಾಕಷ್ಟು ಬೋಲ್ಡ್ ಪಾತ್ರಗಳ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಕಿಸ್ಸಿಂಗ್ ಸೀನ್, ಅರೆ ನಗ್ನ ದೃಶ್ಯಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದರು. ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಅಲ್ಲಿ ಒಂದು ಇಂಟಿಮೇಟ್ ದೃಶ್ಯ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ನಿರ್ದೇಶಕರು ಇಡುತ್ತಿದ್ದರು. ಇದನ್ನು ನೋಡಿ ಅನೇಕ ಸ್ಟಾರ್ಗಳು ಮಲ್ಲಿಕಾ ಅವರಿಂದ ಬೆನಿಫಿಟ್ ಪಡೆಯೋಕೆ ಪ್ರಯತ್ನಿಸಿದ್ದರು ಎನ್ನಲಾಗಿತ್ತು.
ನಾನು ನೇರವಾಗಿ ಕಾಸ್ಟಿಂಗ್ ಕೌಚ್ ಎದುರಿಸಿಲ್ಲ. ನನಗೆ ಸ್ಟಾರ್ಡಮ್ ಸುಲಭವಾಗಿ ಸಿಕ್ಕಿತ್ತು. ಮುಂಬೈಗೆ ಬರುತ್ತಿದ್ದಂತೆ ಆಫರ್ಗಳು ಸಿಕ್ಕವು. ಪಾತ್ರಕ್ಕಾಗಿ, ಹೆಚ್ಚು ಸ್ಟ್ರಗಲ್ ಮಾಡುವ ಪರಿಸ್ಥಿತಿ ಎದುರಾಗೇ ಇಲ್ಲ. ‘ಮರ್ಡರ್’ ಸಿನಿಮಾದಲ್ಲಿ ನಾನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಹೀಗಾಗಿ, ಸಾಕಷ್ಟು ನಟರು ನನ್ನ ಬಳಿ ಬೇರೆ ರೀತಿಯಲ್ಲಿ ಮಾತನಾಡೋಕೆ ಆರಂಭಿಸಿದರು. ನೀವು ಸಿನಿಮಾದಲ್ಲಿ ಮಾತ್ರವಲ್ಲ ನಮ್ಮ ಜತೆಯೂ ಆ ರೀತಿ ಮಾಡಬಹುದು ಎಂದು ಆಹ್ವಾನ ನೀಡಿದ್ದರು ಎಂದಿದ್ದಾರೆ ಮಲ್ಲಿಕಾ. ಈ ಮೂಲಕ ತೆರೆ ಹಿಂದೆಯೂ ಬೆತ್ತಲಾಗೋಕೆ ಹೀರೋಗಳು ಆಹ್ವಾನ ನೀಡಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ ಮಲ್ಲಿಕಾ. ಆದರೆ, ಎಲ್ಲಿಯೂ ಅವರು ಹೀರೋಗಳ ಹೆಸರನ್ನು ಬಹಿರಂಗ ಮಾಡಿಲ್ಲ.
‘ನಾನು ಯಾವುದಕ್ಕೂ ಕಾಂಪ್ರಮೈಸ್ ಆಗುವುದಿಲ್ಲ. ನಾನು ಕಾಂಪ್ರಮೈಸ್ ಆಗೋಕೆ ಬಂದಿಲ್ಲ. ನಾನು ಇಲ್ಲಿಗೆ ಬಂದಿದ್ದು ನನ್ನ ಕೆರಿಯರ್ ಬೆಳೆಸಿಕೊಳ್ಳೋಕೆ ಎಂದು ನೇರವಾಗಿ ಹೇಳಿದ್ದೆ. ಇದರಿಂದ ಅನೇಕರು ನನ್ನ ಜತೆ ನಟಿಸೋಕೆ ಹಿಂದೇಟು ಹಾಕಿದ್ದರು ಎಂದು ಮಲ್ಲಿಕಾ ಹೇಳಿದ್ದಾರೆ.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 11:34 am
Mangalore Correspondent
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm