ಬ್ರೇಕಿಂಗ್ ನ್ಯೂಸ್
17-09-21 04:38 pm Filmbeat: Manjunatha C ಸಿನಿಮಾ
ಜಾಗತಿಕ ಮಟ್ಟದಲ್ಲಿ ಗುರುತು ಪಡೆದುಕೊಂಡಿರುವ ಮೆಟ್ ಗಾಲಾ 2021 ಫ್ಯಾಷನ್ ಶೋ ಸೆಪ್ಟೆಂಬರ್ 13 ರಂದು ನ್ಯೂಯಾರ್ಕ್‌ನಲ್ಲಿ ನಡೆದಿದೆ.
1948ರಿಂದಲೂ ಈ ಫ್ಯಾಷನ್ ಶೋ ಪ್ರತಿವರ್ಷ ನಡೆಯುತ್ತಾ ಬಂದಿದ್ದು, ಮೆಟ್ ಗಾಲಾದಲ್ಲಿ ನಟಿಯರು, ಮಾಡೆಲ್‌ಗಳು ತೊಡುವ ಉಡುಗೆ ಬಹಳ ಭಿನ್ನ ಮತ್ತು ಅಪರೂಪದಲ್ಲಿಯೇ ಅಪರೂಪ. ಮೆಟ್ ಗಾಲಾ ಶೋನಲ್ಲಿ ನಡೆಯಲು ಅವಕಾಶ ಸಿಕ್ಕರೆ ಸಾಕು ಎಂದು ಲಕ್ಷಾಂತರ ಮಂದಿ ನಟಿಯರು, ಮಾಡೆಲ್‌ಗಳು ಕಾಯುತ್ತಿರುತ್ತಾರೆ.
ಈ ಬಾರಿ ಸೆಪ್ಟೆಂಬರ್ 13ಕ್ಕೆ ಮೆಟ್ ಗಾಲಾ ಇವೆಂಟ್ ನಡೆದಿದ್ದು, ಕಿಮ್ ಕರ್ದಾಶಿಯನ್ ಧರಿಸಿದ್ದ ಕಪ್ಪು ಬಣ್ಣದ ಉಡುಗೆ ಬಹಳ ಗಮನ ಸೆಳೆದಿದೆ. ಜೊತೆಗೆ ವಿಪರೀತ ಟ್ರೋಲ್ ಸಹ ಆಗಿದೆ. ಈ ಬಾರಿಯ ಮೆಟ್ ಗಾಲಾನಲ್ಲಿ ಭಾರತದಿಂದ ಒಬ್ಬರು ಮಾತ್ರವೇ ಭಾಗವಹಿಸಿದ್ದರು. ಅವರ ಹೆಸರು ಸುಧಾ ರೆಡ್ಡಿ.
ಯಾರು ಈ ಸುಧಾ ರೆಡ್ಡಿ?
ಹೈದರಾಬಾದ್‌ನ ಸುಧಾ ರೆಡ್ಡಿ ಈ ಬಾರಿಯ ಮೆಟ್ ಗಾಲಾದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಬಾರಿ ಮೆಟ್ ಗಾಲಾದಲ್ಲಿ ಭಾಗವಹಿಸಿದ ಏಕೈಕ ಭಾರತೀಯರು ಸುಧಾ ರೆಡ್ಡಿ. ಕೋಟ್ಯಧಿಪತಿ ಉದ್ಯಮಿ ಮೇಘ ಕೃಷ್ಣ ರೆಡ್ಡಿಯ ಪತ್ನಿ ಸುಧಾ ರೆಡ್ಡಿ. ಈಕೆ ಕೂಡ ಉದ್ಯಮಿಯೇ. ಸುಧಾ ರೆಡ್ಡಿ ಪತಿ ಮೇಘ ಕೃಷ್ಣ ರೆಡ್ಡಿ ಭಾರತದ ನಂಬರ್ ಒನ್ ಉದ್ಯಮಿಗಳಲ್ಲಿ ಒಬ್ಬರು.
ಶೇನ್ ಪಿಕಾಕ್ ಬ್ರ್ಯಾಂಡ್‌ನ ಉಡುಗೆ
ಫಲ್ಗುನಿ ಪಿಕಾಕ್ ಮತ್ತು ಶೇನ್ ಪಿಕಾಕ್‌ರವರ ಫಲ್ಗುನಿ ಶೇನ್ ಪಿಕಾಕ್ ಬ್ರ್ಯಾಂಡ್‌ನವರು ನಿರ್ಮಿಸಿದ ಭಿನ್ನವಾದ ಉಡುಗೆಯನ್ನು ಸುಧಾ ರೆಡ್ಡಿ ಮೆಟ್ ಗಾಲಾನಲ್ಲಿ ತೊಟ್ಟಿದ್ದರು. ಅಮೆರಿಕದ ಬಾವುಟದಿಂದ ಸ್ಪೂರ್ತಿ ಪಡೆದ ಈ ಉಡುಗೆಯಲ್ಲಿ ಭಾರತೀಯ ಸಂಸ್ಕೃತಿಯ ಇಣುಕು ಸಹ ಇದೆ. ಉದ್ದನೆಯ ಲೆಹಂಗಾ ಮೇಲೆ ಹಲವು ಬಗೆಯ ಕುಸುರಿ ಕೆಲಸಗಳನ್ನು ಮಾಡಲಾಗಿದೆ. ಈ ಸುಂದರ ಹಾಗೂ ಭಿನ್ನವಾದ ಉಡುಗೆಯನ್ನು ತೊಟ್ಟು ಮೆಟ್ ಗಾಲಾನಲ್ಲಿ ಸುಧಾ ರೆಡ್ಡಿ ಹೆಜ್ಜೆ ಹಾಕುತ್ತಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಉಡುಪು ತಯಾರಿಸಲು 250 ಗಂಟೆ ಹಲವು ಕಾರ್ಮಿಕರು ಕೆಲಸ ಮಾಡಿದ್ದಾರೆ
ಉಡುಪಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫಲ್ಗುನಿ ಶೇನ್ ಪಿಕಾಕ್, ಸುಧಾ ರೆಡ್ಡಿ ಉಟ್ಟಿದ್ದ ಉಡುಗೆ ರೆಡಿ ಮಾಡಲು ಸುಮಾರು 250 ಗಂಟೆಗಳನ್ನು ವ್ಯಯಿಸಲಾಗಿದೆ. ನಮ್ಮ ಬ್ರ್ಯಾಂಡ್‌ನ ಅದ್ಭುತ ಕಲಾವಿದರನ್ನು ಈ ಉಡುಗೆ ತಯಾರು ಮಾಡಲು ನಾವು ನೇಮಿಸಿದ್ದೆವು. ಈ ಬಾರಿಯ ಮೆಟ್ ಗಾಲಾದ ಥೀಮ್‌ಗೆ ಹೊಂದಿಕೆ ಆಗುವಂತೆ ಹಾಗೂ ಸುಧಾ ರೆಡ್ಡಿಯವರು ವ್ಯಕ್ತಿತ್ವಕ್ಕೆ ಹೊಂದಿಕೆ ಆಗುವಂಥಹಾ ಉಡುಗೆಯನ್ನು ತಯಾರಿಸಿದ್ದೇವೆ'' ಎಂದಿದ್ದಾರೆ. ಉಡುಗೆ ಜೊತೆಗೆ ಸುಧಾ ರೆಡ್ಡಿ ಗಣೇಶನ ಮೂರ್ತಿಯ ಪರ್ಸ್ ಅನ್ನು ಸಹ ಹಿಡಿದುಕೊಂಡು ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದಾರೆ. ತಾವು ಮೆಟ್ ಗಾಲಾದಲ್ಲಿ ಭಾಗವಹಿಸಿದ ಹಲವು ಚಿತ್ರಗಳನ್ನು ಸುಧಾರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಮಂದಿ ಸುಧಾ ರೆಡ್ಡಿಯ ಚಿತ್ರಗಳಿಗೆ ಲೈಕ್ ಮಾಡಿದ್ದಾರೆ, ಭಿನ್ನ-ಭಿನ್ನ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ.
ಈ ವರೆಗೆ ನಾಲ್ಕು ಭಾರತೀಯ ಮಹಿಳೆಯರಷ್ಟೆ ಭಾಗವಹಿಸಿದ್ದಾರೆ
ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ, ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ, ಕೋಟ್ಯಧಿಪತಿ ಉದ್ಯಮಿ ಆಧಾರ್ ಪೂನಾವಾಲ ಪತ್ನಿ ನತಾಶಾ ಪೂನಾವಾಲಾ, ನಟಿ ದೀಪಿಕಾ ಪಡುಕೋಣೆ ಅವರುಗಳು ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದರು. ಮೆಟ್ ಗಾಲಾನಲ್ಲಿ ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಉಡುಗೆ ಬಹಳ ಜನಪ್ರಿಯವಾಗಿತ್ತು, ಎರಡು ಭಾರಿಯೂ ಅವರು ಗಮನ ಸೆಳೆಯುವಂಥಹಾ ಉಡುಗೆ ತೊಟ್ಟಿದ್ದರು. ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಉಡುಗೆ ಗಮನ ಸೆಳೆಯುವ ಜೊತೆಗೆ ಬಹಳ ಟ್ರೋಲ್ ಸಹ ಆಗಿತ್ತು. ಮೆಟ್ ಗಾಲಾದಲ್ಲಿ ನಟಿಯರು ತೊಡುವ ಉಡುಗೆ ಬಗ್ಗೆ ಟ್ರೋಲ್ ಮಾಡುವುದು ಸಾಮಾನ್ಯ ಎಂಬಂತಾಗಿದೆ.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm