ಬ್ರೇಕಿಂಗ್ ನ್ಯೂಸ್
24-08-21 04:05 pm Headline Karnataka News Network ಸಿನಿಮಾ
ಮಾಜಿ ನೀಲಿ ತಾರೆ ಆಗಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್‌ನಲ್ಲಿ ನಟಿಯಾಗಿ, ವಿಶೇಷ ಹಾಡುಗಳ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀಲಿ ಚಿತ್ರಗಳಲ್ಲಿ ಸನ್ನಿ ಲಿಯೋನ್ ಈಗ ನಟಿಸುತ್ತಿಲ್ಲ ಆದರೆ ಆಕೆಯ ನೀಲಿ ಚಿತ್ರಗಳಿಂದಾಗಿಯೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಸನ್ನಿ ಲಿಯೋನ್ ಪಡೆದುಕೊಂಡಿದ್ದಾರೆ. ಯಾವ ಮಟ್ಟಿಗೆಂದರೆ ಸನ್ನಿ ಲಿಯೋನ್ ಅಭಿಮಾನಿ ಸಂಘಗಳನ್ನು ತೆರೆಯುವಷ್ಟರ ಮಟ್ಟಿಗೆ ಸನ್ನಿ ಲಿಯೋನ್‌ಗೆ ಅಭಿಮಾನಿಗಳಿದ್ದಾರೆ.
ಕರ್ನಾಟಕದಲ್ಲಿಯೂ ಸನ್ನಿ ಲಿಯೋನ್‌ಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರಗಳು, ಸಾಮೂಹಿಕ ಭೋಜನಗಳು ಸಹ ನಡೆಯುತ್ತವೆ. ಚಿಗುರು ಮೀಸೆ ಹುಡುಗರಂತೂ ಊರ ಜಾತ್ರೆಗೆ ಸಹ ಸನ್ನಿ ಲಿಯೋನ್ ಚಿತ್ರವುಳ್ಳ ಕಟೌಟ್‌ನಲ್ಲಿ ತಮ್ಮ ಚಿತ್ರವನ್ನು ಜೊತೆಯಾಗಿ ಹಾಕಿಸಿಕೊಂಡು ಕಾಲರ್ ಏರಿಸುತ್ತಾರೆ.
ಸನ್ನಿ ಲಿಯೋನ್ ಅಭಿಮಾನಿ ಸಂಘ ಹುಲ್ಲೂರು ಇದೀಗ ಹುಲ್ಲೂರು ಗ್ರಾಮದ ಕೆಲ ಯುವಕರು ತಮ್ಮನ್ನು ಸನ್ನಿ ಲಿಯೋನ್ ಅಭಿಮಾನಿ ಸಂಘದ ಸದಸ್ಯರು ಎಂದು ಹೇಳಿಕೊಂಡಿದ್ದು, ಊರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿಸಿ ಅದರಲ್ಲಿ ಸನ್ನಿ ಲಿಯೋನ್‌ಳ ದೊಡ್ಡ ಚಿತ್ರವನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಶರಭಾರ್ಯ ಸ್ವಾಮಿ ಹಾಗೂ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ ಎಂದು ಸ್ವಾಗತ ಕೋರಿದ್ದಾರೆ ಈ ಯುವಕರು.

ಚಿತ್ರದಲ್ಲಿ ಸನ್ನಿ ಲಿಯೋನ್‌ನ ಸಂಸ್ಕಾರಮಯ ಚಿತ್ರವನ್ನೇ ಮುದ್ರಿಸಲಾಗಿದೆ. ಸನ್ನಿ ಲಿಯೋನ್ ಮೈತುಂಬ ಉಡುಗೆ ತೊಟ್ಟು, ಹಿಂದು ಅಕ್ಷರಗುಳ್ಳ ಶಾಲು ಹೊದ್ದು ಕೈ ಮುಗಿಯುತ್ತಿರುವ ಚಿತ್ರವನ್ನು ಪೋಸ್ಟರ್‌ನಲ್ಲಿ ಮುದ್ರಿಸಲಾಗಿದೆ. ಆದರೆ ಅದು ಸನ್ನಿ ಲಿಯೋನ್‌ರ ನಿಜವಾದ ಚಿತ್ರವಲ್ಲ ಬದಲಿಗೆ ಯಾರದ್ದೊ ಚಿತ್ರಕ್ಕೆ ಸನ್ನಿ ಲಿಯೋನ್ ಮುಖವನ್ನು ಅಂಟಿಸಿ ಮುದ್ರಿಸಲಾಗಿದೆ. ಹುಲ್ಲೂರಿನ ಯುವಕರ ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಈ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಈ ಹಿಂದೆ ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್‌ಳ ದೊಡ್ಡ ಕಟೌಟ್ ಮಾಡಿಸಿ ಊರ ಮಧ್ಯೆ ನಿಲ್ಲಿಸಿದ್ದರು. ಕಟೌಟ್ ಮೇಲೆ 'ಅನಾಥ ಮಕ್ಕಳ ತಾಯಿ ಸನ್ನಿ ಲಿಯೋನ್‌ಗೆ ಹುಟ್ಟುಹಬ್ಬದ ಶುಭಾಶಯ' ಎಂದು ಬರೆಸಿದ್ದರು. ಮಂಡ್ಯದ ಕೊಮ್ಮೇರಹಳ್ಳಿಯ ಯುವಕರ ಪ್ರೀತಿಗೆ ಮನಸೋತ ಸನ್ನಿ ಲಿಯೋನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಟೌಟ್‌ನ ಚಿತ್ರವನ್ನು ಹಂಚಿಕೊಂಡು ಯುವಕರಿಗೆ ಧನ್ಯವಾದ ಹೇಳಿದ್ದರು.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm