ಬ್ರೇಕಿಂಗ್ ನ್ಯೂಸ್
06-05-21 12:01 pm Source: FILMIBEAT Shruthi Gk ಸಿನಿಮಾ
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಾಯಿ ಸದ್ಯ ತೆಲುಗಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗೂ ಸಯಿ ಪಲ್ಲವಿ ಆಯ್ಕೆಯಾಗಿದ್ದರು.
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟನೆಯ ಮಲಯಾಳಂನ ಸೂಪರ್ ಹಿಟ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರಿಮೇಕ್ ನಲ್ಲಿ ಸಾಯಿ ಪಲ್ಲವಿ ನಟಿಸಬೇಕಿತ್ತು. ಆದರೆ ಸಾಯಿ ಚಿತ್ರದಿಂದ ದಿಢೀರ್ ಹೊರಬಂದಿದ್ದಾರೆ. ಸಾಯಿ ಪಲ್ಲವಿಯನ್ನು ಚಿತ್ರತಂಡ ಕೈ ಬಿಟ್ಟಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಸಾಯಿ ಪಲ್ಲವಿ ಹೊರಬಂದಿರುವ ಬಗ್ಗೆ ಸಾಕಷ್ಟು ಚರ್ಚೆ ಕೂಡ ಪ್ರಾರಂಭವಾಗಿತ್ತು.

ಪವನ್ ಕಲ್ಯಾಣ್ ಪತ್ನಿ ಪಾತ್ರದಲ್ಲಿ ನಟಿಸಬೇಕಿತ್ತು ಸಾಯಿ
ಚಿತ್ರದಲ್ಲಿ ಸಾಯಿ ಪಲ್ಲವಿ ಪವರ್ ಸ್ಟಾರ್ ಪತ್ನಿಯ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಸಾಯಿ ಪಲ್ಲವಿ, ಪವನ್ ಕಲ್ಯಾಣ್ ಜೊತೆ ನಟಿಸಲು ಹಿಂದೇಟು ಹಾಕಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹಾರಿದಾಡುತ್ತಿವೆ. ಚಿತ್ರದಿಂದ ಸಾಯಿ ಪಲ್ಲವಿ ಹೊರಬಂದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ಚಿತ್ರದಿಂದ ಹೊರಬಂದ ಕಾರಣವೇನು ಎನ್ನುವುದು ಸಹ ಪವನ್ ಕಲ್ಯಾಣ್ ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿತ್ತು.
ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ನಟಿ
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ಚಿತ್ರದಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದರಂತೆ. ಮೂಲಗಳ ಪ್ರಕಾರ ಪ್ರೇಮಂ ಸುಂದರಿ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರಂತೆ. ಹಾಗಾಗಿ ಚಿತ್ರತಂಡ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ಹಿಂದೇಟು ಹಾಕಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಸಾಯಿ ಪಲ್ಲವಿ ಜಾಗಕ್ಕೆ ನಿತ್ಯಾ ಮೆನನ್ ಎಂಟ್ರಿ
ಅಂದಹಾಗೆ ಸಾಯಿ ಪಲ್ಲವಿ ಜಾಗಕ್ಕೆ ಈಗ ಮತ್ತೋರ್ವ ಖ್ಯಾತ ನಟಿ ನಿತ್ಯಾ ಮೆನನ್ ಎಂಟ್ರಿಯಾಗಿದ್ದಾರೆ. ನಿತ್ಯಾ, ಪವನ್ ಕಲ್ಯಾಣ್ ಪತ್ನಿಯಾಗಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಅಂದಹಾಗೆ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಜು ಪಾತ್ರದಲ್ಲಿ ಪವನ್ ಕಲ್ಯಾಣ್ ಬಣ್ಣಹಚ್ಚುತ್ತಿದ್ದಾರೆ.
This News Article Is A Copy Of FILMIBEAT
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm