ಬ್ರೇಕಿಂಗ್ ನ್ಯೂಸ್
18-04-21 11:33 am Mangaluru Correspondent ಸಿನಿಮಾ
ಮಂಗಳೂರು, ಎ.18: ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಿರ್ದೇಶಕರಾಗಿ ಹೆಸರು ಮಾಡಿದ್ದ ರಘು ಶೆಟ್ಟಿ (39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ರಘು ಶೆಟ್ಟಿ ಮೂಲತಃ ಮೂಡುಬಿದ್ರೆಯವರು. ಅವರ ತಂದೆ ಹುಬ್ಬಳ್ಳಿಯಲ್ಲಿ ಬಿಸಿನೆಸ್ ಹೊಂದಿದ್ದರಿಂದ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದರು. ಬಳಿಕ ಮೂಡುಬಿದ್ರೆಯ ಮಹಾವೀರ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಯುವಕನಾಗಿದ್ದಾಗಲೇ ಫಿಲ್ಮ್ ಬಗ್ಗೆ ಆಸಕ್ತಿ ಹೊಂದಿದ್ದಲ್ಲದೆ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಸ್ವಂತ ನಿರ್ದೇಶನದಲ್ಲಿ ಮೊದಲಿಗೆ ತುಳು ಚಿತ್ರವನ್ನು ತಯಾರಿಸಿದ್ದರು.
ತಮ್ಮ ಮೊದಲ ಸಿನಿಮಾ ‘ಅರ್ಜುನ್ ವೆಡ್ಸ್ ಅಮೃತಾ’ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಆಸಕ್ತಿ ತೋರಿದ್ದರು. ಫ್ಯಾಮಿಲಿ ಹಿಟ್ ಸಿನಿಮಾವಾಗಿ ಗಮನ ಸೆಳೆದಿದ್ದ ಅರ್ಜುನ್ ವೆಡ್ಸ್ ಅಮೃತಾ ಸಿನಿಮಾದ ನಿರ್ದೇಶನಕ್ಕಾಗಿ ರಘು ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಲಭಿಸಿತ್ತು.

ಈ ಹಿಂದೆ ಉದಯ ಟಿವಿ ಸೇರಿದಂತೆ ಹಲವು ಸುದ್ದಿ ವಾಹಿನಿಗಳಲ್ಲಿ ಉದ್ಯೋಗದಲ್ಲಿದ್ದ ರಘು ಶೆಟ್ಟಿ ಸುದ್ದಿ ವಾಹಿನಿಗಳು ಎರಡು ಮೂರು ವರ್ಷಗಳ ಹಿಂದೆ ತೀವ್ರ ಸಂಚಲನಕ್ಕೀಡಾದ ಬಳಿಕ ತುಳು ಸಿನಿಮಾದತ್ತ ಆಸಕ್ತಿ ಬೆಳೆಸಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ನಡೆಸಿದ್ದರು. ಅರ್ಜುನ್ ವೆಡ್ಸ್ ಚಿತ್ರ ಹಿಟ್ ಆಗಿದ್ದರಿಂದ ಕನ್ನಡ ಸಿನಿಮಾ ನಿರ್ದೇಶನಕ್ಕೂ ಕೈಹಾಕಿದ್ದರು. ನಟ ಕೋಮಲ್ ಜೊತೆ ಕನ್ನಡ ಸಿನಿಮಾ ತಯಾರಿಯಲ್ಲಿದ್ದ ರಘು ಶೆಟ್ಟಿ, ಇನ್ನೇನು ಸಿನಿಮಾ ಚಿತ್ರೀಕರಣ ನಡೆಸುವವರಿದ್ದರು. ಆದರೆ, ಅಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತುಳು ಸಿನಿಮಾ ರಂಗದಲ್ಲಿ ಹೆಜ್ಜೆ ಇಡುತ್ತಿದ್ದಾಗಲೇ ಇನ್ನಿಲ್ಲವಾದ ರಘು ಶೆಟ್ಟಿಯವರ ನಿಧನದ ತುಳು ಸಿನಿಮಾ ರಂಗದ ಕಲಾವಿದರು ಶೋಕ ವ್ಯಕ್ತಪಡಿಸಿದ್ದಾರೆ.
Renowned Tulu cinema director Raghu Shetty succumbed to heart attack on Saturday April 17 evening. He was 42.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm