ಬ್ರೇಕಿಂಗ್ ನ್ಯೂಸ್
15-04-21 07:01 pm Source: FILMIBEAT ಸಿನಿಮಾ
ಕೆಜಿಎಫ್' ಸಿನಿಮಾದಲ್ಲಿ ಅಮ್ಮನ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಅರ್ಚನಾ ಜೋಯಿಸ್, ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ತಯಾರಾಗಿದ್ದಾರೆ. 'ಮುಂಗಾರುಮಳೆ' ಹಾಗೂ 'ಮೊಗ್ಗಿನ ಮನಸು' ಸಿನಿಮಾಗಳಲ್ಲಿ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದ ಜಿ.ಗಂಗಾಧರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇ.ಕೆ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.
'ಮುಂಗಾರುಮಳೆ 2' ಚಿತ್ರದಲ್ಲಿ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಅವರು ಸಿನಿಮಾವನ್ನು ನಿರ್ದೇಶನ ಮಾಡಿದ್ದು ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಕೂಡ ಪೂರ್ಣಗೊಳಿಸಿದೆ. ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾದ ಶೀರ್ಷಿಕೆಯನ್ನು ನಟ ರಿಷಿ ಬುಧವಾರ ಬಿಡುಗಡೆಗೊಳಿಸಿದ್ದಾರೆ.
ಶೀರ್ಷಿಕೆಯ ಕುರಿತ 40 ಸೆಕೆಂಡ್ ವಿಡಿಯೊವೊಂದನ್ನು ಚಿತ್ರತಂಡ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ನಟಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಆಗಿರುವುದರಿಂದ ಪಾತ್ರಗಳ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. "ನಿರ್ದೇಶಕನಾಗಿ ಇದು ನನಗೆ ಚೊಚ್ಚಲ ಚಿತ್ರ.
ಸಿನಿಮಾದ ಕಥೆ ವಿಭಿನ್ನವಾಗಿದೆ. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಸಾಕಷ್ಟು ತಿರುವುಗಳು ನೋಡಲು ಸಿಗಲಿವೆ. ಚಿತ್ರದ ಒಂದೊಂದು ದೃಶ್ಯವನ್ನೂ ಬಹಳ ಕಾಳಜಿ ಹಾಗೂ ಸಂಯಮದಿಂದ ಚಿತ್ರೀಕರಿಸಲಾಗಿದೆ. ಆದ್ದರಿಂದ ಶೂಟಿಂಗ್ ಮುಗಿಯುವವರೆಗೂ ನಾವು ಸಿನಿಮಾ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಥ್ರಿಲ್ಲರ್ ಚಿತ್ರಗಳ ಸಾಲಿನಲ್ಲಿ ನಮ್ಮ ಸಿನಿಮಾ ಉದಾಹರಣೆಯಾಗಿ ನಿಲ್ಲುವ ನಂಬಿಕೆ ನಮ್ಮ ತಂಡಕ್ಕಿದೆ' ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳಿದ್ದಾರೆ.
'''#ಮ್ಯೂಟ್' ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಇದರಲ್ಲಿ ಅದ್ಬುತ ನಟರು ಅಭಿನಯಿಸಿದ್ದಾರೆ. ಪ್ರತಿಭಾವಂತ ಪ್ರಶಾಂತ್ ಚಂದ್ರ ಅವರ ನಿರ್ದೇಶನದ ಈ ಸಿನಿಮಾಗೆ ಯಶಸ್ಸು ಸಿಗಲಿ'' ಎಂದು ನಟ ರಿಷಿ ತಂಡಕ್ಕೆ ಹಾರೈಸಿದ್ದಾರೆ.
This News Article Is A Copy Of FILMIBEAT
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm