ಬ್ರೇಕಿಂಗ್ ನ್ಯೂಸ್
02-04-21 02:53 pm Source: FILMIBEAT ಸಿನಿಮಾ
ಕನ್ನಡ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೂ ಬ್ಯುಸಿಯಾಗುವ ಸೂಚನೆ ಸಿಕ್ಕಿದೆ. ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಎರಡನೇ ಹಿಂದಿ ಚಿತ್ರ ಕೈಗೆತ್ತಿಕೊಂಡಿದ್ದ ನಟಿ ಈಗ ಶೂಟಿಂಗ್ ಆರಂಭಿಸಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಗುಡ್ ಬೈ' ಚಿತ್ರದ ಮುಹೂರ್ತ ಇಂದು ಮುಂಬೈನಲ್ಲಿ ನಡೆದಿದೆ. 'ಗುಡ್ ಬೈ' ಸಿನಿಮಾದ ಪೂಜೆ ಕಾರ್ಯಕ್ರಮದ ಪೋಟೋಗಳನ್ನು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಕಾಸ್ ಭಾಲ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ರಿಲಾಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಬಾಲಾಜಿ ಟೆಲಿಫಿಲಂಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಇದಕ್ಕೂ ಮುಂಚೆ ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ 'ಮಿಷನ್ ಮಜ್ನು' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಶ್ಮಿಕಾಗೆ ಮೊದಲ ಹಿಂದಿ ಸಿನಿಮಾ. ಈ ಚಿತ್ರದ ಚಿತ್ರೀಕರಣ ಅದಾಗಲೇ ಆರಂಭವಾಗಿದ್ದು, ಮೊದಲ ಹಂತದ ಶೂಟಿಂಗ್‌ನಲ್ಲಿ ನಟಿ ಭಾಗವಹಿಸಿದ್ದರು. ಕನ್ನಡ, ತೆಲುಗಿನಲ್ಲಿ ಸಕ್ಸಸ್ ಕಂಡಿದ್ದ ನಟಿ ರಶ್ಮಿಕಾ ಈಗ ತಮಿಳು ಹಾಗೂ ಹಿಂದಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ರಶ್ಮಿಕಾ ನಟಿಸಿರುವ ಮೊದಲ ತಮಿಳು ಸಿನಿಮಾ ಏಪ್ರಿಲ್ 2 ರಂದು ಬಿಡುಗಡೆಯಾಗಿದೆ. ಕಾರ್ತಿ ನಟನೆಯ 'ಸುಲ್ತಾನ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಇಂದು ತೆರೆಕಂಡಿದೆ. ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಶರ್ವಾನಂದ್ ನಟಿಸುತ್ತಿರುವ ಹೊಸ ಪ್ರಾಜೆಕ್ಟ್‌ನಲ್ಲೂ ರಶ್ಮಿಕಾ ನಾಯಕಿಯಾಗಿದ್ದಾರೆ.
This News Article Is A Copy Of FILMIBEAT
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
03-09-26 07:27 pm
HK News Staffer
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
03-09-26 10:19 pm
HK News Staffer
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
04-09-26 10:55 am
HK News Staffer
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm
ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ...
03-09-26 05:21 pm