ಬ್ರೇಕಿಂಗ್ ನ್ಯೂಸ್
30-03-21 12:17 pm Source: FILMIBEAT ಸಿನಿಮಾ
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಭಾನುವಾರ ಬೆಳಗ್ಗೆ ಬೆಂಗಳೂರಿನ ದೇವಸ್ಥಾನದಲ್ಲಿ ಮಂಡ್ಯ ಮೂಲದ ಸಿವಿಲ್ ಇಂಜಿನಿಯರ್ ನಾಗಾರ್ಜುನ್ ಜೊತೆ ಸರಳವಾಗಿ ಮದುವೆಯಾಗಿದ್ದರು. ಬೆಳಗ್ಗೆ ಮದುವೆ ಆಗಿ ಸಂಜೆ ವೇಳೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಮೂಲಕ ಮದುವೆ ವಿವಾದ ಸ್ವರೂಪ ಪಡೆದುಕೊಂಡಿತು.
ಮದುವೆಯಾದ ಕೆಲವೇ ಗಂಟೆಗಳಲ್ಲಿ ನಾಗಾರ್ಜುನ್ ಮನೆಯವರು ಗಲಾಟೆ ಮಾಡಿ, ಬಲವಂತವಾಗಿ ತಾಳಿಕಟ್ಟಿಸಿಕೊಂಡಿದ್ದಾರೆ ಎಂದು ಚೈತ್ರಾ ವಿರುದ್ಧ ಆರೋಪಿಸಿದ್ದಾರೆ. ಪ್ರೀತಿಸಿ, ಒಪ್ಪಿಗೆ ಇದ್ದೇ ಮದುವೆ ಆಗಿದ್ದು ಎಂದು ಚೈತ್ರಾ ಹೇಳುತ್ತಿದ್ದಾರೆ. ನಾಗಾರ್ಜುನ್ ಮತ್ತು ಚೈತ್ರಾ ಇಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.

ಕೋಲಾರ ಮಹಿಳಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಇಬ್ಬರಿಗೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬುಧವಾರದ ವರೆಗೂ ಸಮಯ ನೀಡಲಾಗಿದೆ. ಈ ನಡುವೆ ಈಗ ಚೈತ್ರಾ ಮತ್ತು ನಾಗಾರ್ಜುನ್ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ. ಮುಂದೆ ಓದಿ..
6ತಿಂಗಳಿಂದ ಚೈತ್ರಾ ನಂಬರ್ ಬ್ಲಾಕ್ ಮಾಡಿದ್ದೆ
ನಾಗಾರ್ಜುನ್, ಚೈತ್ರಾ ಅವರನ್ನು ಕೆಲವೇ ಕೆಲವು ಬಾರಿ ಮಾತ್ರ ಭೇಟಿ ಮಾಡಿರುವುದು. ಆರು ತಿಂಗಳಿಂದ ಅವರ ಫೋನ್ ನಂಬರ್ ಬ್ಲಾಕ್ ಮಾಡಿರುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ ಚೈತ್ರಾ, ಇಬ್ಬರ ನಡುವೆ ಹೆಚ್ಚು ಆಪ್ತತೆ ಇತ್ತು, ಪ್ರೀತಿಸುತ್ತಿದ್ದೆವು, ಒಪ್ಪಿಗೆ ಇದ್ದೇ ಮದುವೆ ಆಗಿದ್ದು ಎಂದು ವಾದಿಸುತ್ತಿದ್ದಾರೆ.
ವೈರಲ್ ಆಗಿವೆ ಫೋಟೋಗಳು
ಇದೀಗ ಇಬ್ಬರ ಆಪ್ತತೆ ಮತ್ತು ಭೇಟಿಯಾಗಿರುವ ಬಗ್ಗೆ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸಾಕ್ಷಿ ಹೇಳುತ್ತಿವೆ. ಚೈತ್ರಾ, ನಾಗಾರ್ಜುನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ಗಿಫ್ಟ್ ನೀಡಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಬ್ರೇಸ್ಲೇಟ್ ಕೊಟ್ಟಿರುವುದಾಗಿ ಚೈತ್ರಾ ಹೇಳುತ್ತಿದ್ದಾರೆ. ಇಷ್ಟೆಲ್ಲ ಆಪ್ತತೆ ಇದ್ದರೂ ನಾಗಾರ್ಜುನ್ ಪ್ರೀತಿಸಿಲ್ಲ, ಬಲವಂತದ ಮದುವೆ ಎಂದು ಹೇಗೆ ಹೇಳುತ್ತಿದ್ದಾರೆ ಎಂದು ಚೈತ್ರಾ ಪ್ರಶ್ನಿಸುತ್ತಿದ್ದಾರೆ.
ಮಾತುಕತೆ ಮೂಲಕ ಬಗೆಹರಿಯುತ್ತಾ ವಿವಾದ?
ನಾಗಾರ್ಜುನ್ ಮನೆಯವರು ಕೊಲೆ ಬೆದರಿಕೆ ಹಾಕಿದ್ದಾರೆ, ನಡತೆಗೆಟ್ಟವಳು ಎಂದಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಸದ್ಯ ಈ ವಿವಾದವನ್ನು ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬುಧವಾರದ ವರೆಗೂ ಸಮಯ ನೀಡಲಾಗಿದೆ. ಮಾತುಕತೆ ಮೂಲಕ ಬಗೆಹರಿಸಕೊಳ್ಳುತ್ತಾರಾ ಎಂದು ಕಾದುನೋಡಬೇಕು.

ಚೈತ್ರಾ ಮುಂದಿನ ನಿರ್ಧಾರವೇನು?
ಒಂದು ವೇಳೆ ಮಾತುಕತೆಗೆ ಬಂದಿಲ್ಲವಾದರೆ ಮುಂದಿನ ಕ್ರಮದ ಕುರಿತು ಯೋಚಿಸಬೇಕಾಗುತ್ತೆ ಎಂದು ಚೈತ್ರಾ ಹೇಳಿದ್ದಾರೆ. ಹಾಗಾಗಿ ಚೈತ್ರಾ ಮುಂದಿನ ನಿರ್ಧಾರವೇನು, ಯಾವ ಹೆಜ್ಜೆ ಇಡಲಿದ್ದಾರೆ ಎಂದು ಕಾದುನೋಡಬೇಕು.
This News Article Is A Copy Of FILMIBEAT
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
30-10-25 11:28 am
Udupi Correspondent
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm