ಬ್ರೇಕಿಂಗ್ ನ್ಯೂಸ್
13-03-21 02:48 pm source: FILMIBEAT ಸಿನಿಮಾ
ನಾಟಕಗಳನ್ನು ನೋಡಬೇಕು ಅಂದ್ರೆ ರಂಗಮಂದಿರಕ್ಕೆ ಹೋಗಬೇಕಿತ್ತು. ಸಿನಿಮಾಗಳನ್ನು ನೋಡಬೇಕಂದ್ರೆ ಚಿತ್ರಮಂದಿರಕ್ಕೆ ಹೋಗಬೇಕಿತ್ತು. ಟೆಲಿವಿಷನ್ ಯುಗ ಆರಂಭವಾದ ಮೇಲೆ ಸಿನಿಮಾಗಳನ್ನು ಟಿವಿಯಲ್ಲಿ ನೋಡಲು ಜನ ಆರಂಭಿಸಿದರು. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಬಹಳ ದಿನಗಳ ನಂತರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರಣ ಪೈರಸಿ ಎಂಬ ಸಂಪ್ರದಾಯ ಇರಲೇ ಇಲ್ಲ. ಈಗ ಕಾಲ ಬದಲಾಗಿದೆ. ಚಿತ್ರಮಂದಿರಕ್ಕೂ ಮೊದಲೇ ಮೊಬೈಲ್‌ನಲ್ಲಿ ಸಿನಿಮಾ ನೋಡುವಂತಾಗಿದೆ. ತಾಂತ್ರಿಕತೆ ಬೆಳೆಯುತ್ತಿದ್ದಂತೆ ಅದರಿಂದ ದುಷ್ಪರಿಣಾಮಗಳು ಹೆಚ್ಚಾಗುತ್ತಲೇ ಹೋಗುತ್ತಿದೆ.
ಒಳ್ಳೆಯದನ್ನು ಸ್ವೀಕರಿಸುವುದಕ್ಕಿಂತ ಕೆಟ್ಟದನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾರಂಗಕ್ಕೆ ಪೈರಸಿ ಎನ್ನುವುದು ಬಹಳ ಗಂಭೀರವಾಗಿ ಕಾಡುತ್ತಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುವ ನಿರ್ಮಾಪಕರು ಪೈರಸಿಯಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ. ಈ ದುಸ್ಥಿತಿಗೆ ಪರೋಕ್ಷವಾಗಿ ಟೆಲಿಕಾಂ ಕಂಪನಿಗಳು ಕಾರಣ ಎಂದು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಗುಡುಗಿದ್ದಾರೆ.. ಮುಂದೆ ಓದಿ...
ಹೆಚ್ಚು ಡೇಟಾ ಕೊಟ್ಟಿದ್ದೇ ತಪ್ಪು
ಕಡಿಮೆ ಬೆಲೆಗೆ ಮೊಬೈಲ್, ಕಡಿಮೆ ಬೆಲೆ ಜಿಬಿ ಗಟ್ಟಲೇ ಇಂಟರ್‌ನೆಟ್ ಆಫರ್‌ಗಳನ್ನು ಟೆಲಿಕಾಂ ಕಂಪನಿ ಕೊಡ್ತಿದೆ. ಇದರಿಂದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕ ಉಮಾಪತಿ ಗೌಡ ಟೀಕಿಸಿದ್ದಾರೆ. ಟೆಲಿಕಾಂ ಕಂಪನಿಗಳು ಅಗ್ಗದ ಬೆಲೆಯಲ್ಲಿ ಇಂಟರ್‌ನೆಟ್ ಸೌಲಭ್ಯ ಕೊಡುತ್ತಿರುವ ಪರಿಣಾಮ ಪೈರಸಿ ಮಾಡುವುದು ಹಾಗೂ ಪೈರಸಿ ಕಾಪಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಗ್ ಬ್ರದರ್ಸ್ ಕಾರಣ?
ಉಚಿತ ಡೇಟಾ ಯಾವ ಕಂಪನಿಯೂ ಕೊಡ್ತಿಲ್ಲ. ಮೊದಲಿಗೆ ಹೋಲಿಸಿಕೊಂಡರೆ ಕಡಿಮೆ ಬೆಲೆಗೆ ಹೆಚ್ಚು ಜಿಬಿ ಡೇಟಾ ಸಿಗುತ್ತಿದೆ ಎನ್ನುವುದು ಉಮಾಪತಿ ಅವರ ವಾದ. ಜನರು ತಮ್ಮ ಕೆಲಸಗಳನ್ನು ಬಿಟ್ಟು ಮೊಬೈಲ್ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇಂದಿನ ಯುವಕರು ಹೆಚ್ಚು ಡೇಟಾ ಸಿಗುತ್ತಿರುವ ಕಾರಣ ಅದನ್ನು ಒಳ್ಳೆಯದಕ್ಕೂ ಬಳಸಿಕೊಳ್ಳುತ್ತಿಲ್ಲ. ಇದಕ್ಕೆಲ್ಲಾ ಟಲಿಕಾಂ ಕಂಪನಿಗಳು, ''ಸೋ ಕಾಲ್ಡ್ ಬಿಗ್ ಬ್ರದರ್ಸ್'' ಕಾರಣ ಎಂದು ಉಮಾಪತಿ ಖಂಡಿಸಿದ್ದಾರೆ. ಉಮಾಪತಿ ಅವರು ಹೇಳಿದ ಸೋ ಕಾಲ್ಡ್ ಬಿಗ್ ಬ್ರದರ್ಸ್ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಎನ್ನುವುದು ಸಾಮಾನ್ಯರಿಗೂ ತಿಳಿಯುತ್ತದೆ.

ಪೈರಸಿಯಿಂದ ನಮಗೆ ತೊಂದರೆಯಾಗಿಲ್ಲ
ರಾಬರ್ಟ್ ಸಿನಿಮಾ ಪೈರಸಿಯಾಗಿದೆ. ಅನಧಿಕೃತ ವೆಬ್‌ಸೈಟ್‌ಗಳಲ್ಲಿ ರಾಬರ್ಟ್ ಸಿನಿಮಾ ಎನ್ನಲಾದ ಲಿಂಕ್‌ಗಳು ಹರಿದಾಡುತ್ತಿವೆ. ಈ ಸಂಬಂಧ ಚಿತ್ರತಂಡ ಈಗಾಗಲೇ ಕ್ರಮ ತೆಗೆದುಕೊಂಡಿದೆ. ವಿಶೇಷ ತಂಡವೊಂದನ್ನು ರಚಿಸಿ, ಆ ಲಿಂಕ್‌ಗಳನ್ನು ಡಿಲೀಟ್ ಮಾಡುವ ಕೆಲಸ ಮಾಡುತ್ತಿದೆ. ''ಪೈರಸಿಯಿಂದ ನಮ್ಮ ಚಿತ್ರಕ್ಕೆ ಯಾವುದೇ ತೊಂದರೆಯಾಗಿಲ್ಲ. ನಮ್ಮ ಸಿನಿಮಾ ಚೆನ್ನಾಗಿದೆ. ಜನರು ಥಿಯೇಟರ್‌ನಲ್ಲೇ ನೋಡ್ತಿದ್ದಾರೆ' ಎಂದು ನಿರ್ಮಾಪಕ ತಿಳಿಸಿದ್ದಾರೆ.
This News Article Is A Copy Of FILMIBEAT
30-10-25 07:25 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
30-10-25 08:06 pm
Mangalore Correspondent
ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm