ಬ್ರೇಕಿಂಗ್ ನ್ಯೂಸ್
31-08-23 02:33 pm Source: News18 Kannada ಸಿನಿಮಾ
ಶಾರುಖ್ ಖಾನ್ ಜವಾನ್ ಸಿನಿಮಾ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಖಾನ್ ಒಂದೊಂದು ಡೈಲಾಗ್ ಕೂಡ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕರುನಾಡಿನ ಶಾರುಖ್ ಖಾನ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಹಿಂದಿ, ತಮಿಳು, ತೆಲುಗಿನಲ್ಲಿ ಟ್ರೈಲರ್ ರಿಲೀಸ್ ಮಾಡಲಾಗಿದೆ ಆದ್ರೆ ಕನ್ನಡದಲ್ಲಿ ಜವಾನ್ ಸಿನಿಮಾ ಟ್ರೈಲರ್ ರಿಲೀಸ್ ಮಾಡಿಲ್ಲ ಎಂದು ಪ್ರಶ್ನೆ ಕೇಳ್ತಿದ್ದಾರೆ.
ಅನೇಕ ಕನ್ನಡಿಗರು ಕೂಡ ಶಾರುಖ್ ಖಾನ್ ಅಭಿಮಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ ಶಾರುಖ್ ಸಿನಿಮಾ ಕೂಡ ಭರ್ಜರಿಯಾಗಿಯೇ ಕಲೆಕ್ಷನ್ ಮಾಡುತ್ತದೆ. ಆದ್ರೂ ಚಿತ್ರತಂಡ ಜವಾನ್ ಸಿನಿಮಾ ಟ್ರೈಲರ್ ಅನ್ನು ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಲಿಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ಚಾಹಿಯೇ ತೋ ಆಲಿಯಾ ಭಟ್
ಜವಾನ್ ಟ್ರೇಲರ್‌ನಲ್ಲಿ ಶಾರುಖ್ ಖಾನ್ ಪವರ್‌ಫುಲ್ ಡೈಲಾಗ್ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಇಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದು ಎಂಟ್ರಿ ಕೊಟ್ಟ ಶಾರುಖ್ ಟ್ರೈನ್ ಹೈಜಾಕ್ ಮಾಡುತ್ತಾರೆ. ನಿನಗೆ ಏನು ಬೇಕು ಎಂದು ಕೇಳಿದ ಅಧಿಕಾರಿಗೆ ಚಾಹಿಯೇ ತೋ ಆಲಿಯಾ ಭಟ್ ಎಂದು ಡೈಲಾಗ್ ಹೊಡೆಯುತ್ತಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಹೆಸರು ಜವಾನ್ ಖಡಕ್ ಡೈಲಾಗ್ ಭಾಗಿದೆ. ನೀವು ನನ್ನ ಮಗನನ್ನು ಮುಟ್ಟುವ ಮೊದಲು, ಅವನ ತಂದೆಯೊಂದಿಗೆ ಮಾತಾಡು ಎನ್ನುವ ಡೈಲಾಗ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದ್ವಿಪಾತ್ರದಲ್ಲಿ ಶಾರುಖ್
ಜವಾನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಶಾರುಖ್ ಖಾನ್ ಮೋಡಿ ಮಾಡಲಿದ್ದಾರೆ. ದೇಶ ಕಾಯುವ ಸೈನಿಕನಾಗಿ ಕಾಣಿಸಿಕೊಳ್ಳುವ ಕಿಂಗ್ ಖಾನ್, ವಿಲನ್ ಆಗಿ ಟ್ರೈನ್ ಹೈಜಾಕ್ ಕೂಡ ಮಾಡಿದ್ದಾರೆ. ಶಾರುಖ್ ಖಾನ್ ಚಿತ್ರದಲ್ಲಿ ಮಾಜಿ ಸೈನಿಕನಾಗಿ ನಟಿಸಿದ್ದಾರೆ. 6 ಮಹಿಳೆಯರ ತಂಡವನ್ನು ಅವರು ದೇಶಾದ್ಯಂತ ವಿವಿಧ ದರೋಡಗಳಿಗೆ ಬಳಸಿಕೊಳ್ಳುತ್ತಾರೆ. ಮೆಟ್ರೋವನ್ನು ಹೈಜಾಕ್ ಮಾಡುತ್ತಾರೆ. ನಯನತಾರಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಶಾರುಖ್-ನಯನತಾರಾ ರೊಮ್ಯಾನ್ಸ್
ಶಾರುಖ್ ಇದ್ದ ಮೇಲೆ ರೊಮ್ಯಾನ್ಸ್ ಇರಲೇಬೇಕು ಅಲ್ವಾ, ಒಂದೆರಡು ದೃಶ್ಯಗಳಲ್ಲಿ ನಯನತಾರಾ ಜೊತೆ ಶಾರುಖ್ ರೋಮ್ಯಾನ್ಸ್ ಕಾಣಬಹುದಾಗಿದೆ. ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಸ್ತಿ ಪಂದ್ಯದಲ್ಲಿ ಶಾರುಖ್ ಅವರನ್ನು ಸೋಲಿಸಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ 'ವಿಶ್ವದ ನಾಲ್ಕನೇ ಅತಿದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಅಟ್ಲಿ ನಿರ್ದೇಶನದ ಆಕ್ಷನ್ ಪ್ಯಾಕ್ಡ್ ಸಿನಿಮಾ
ಶಾರುಖ್ ಮತ್ತು ನಯನತಾರಾ ಜೊತೆಗೆ, ಜವಾನ್ ವಿಜಯ್ ಸೇತುಪತಿ , ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ತಮಿಳು ಸ್ಟಾರ್ ನಿರ್ದೇಶಕ ಅಟ್ಲೀ ಶಾರುಖ್ಗೆ ಆ್ಯಕ್ಷನ್ ಕಟ್ ಹೇಳಿದ್ದು, ಶಾರುಖ್ ಮತ್ತು ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಜವಾನ್ ಸಿನಿಮಾ ನಿರ್ಮಿಸಿದೆ.
Shah Rukh Khan Ignored Kannada why Jawan Trailer was not Released in Kannada.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm