ಬ್ರೇಕಿಂಗ್ ನ್ಯೂಸ್
21-08-23 01:42 pm Source: News18 Kannada ಸಿನಿಮಾ
ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ (Chandrayaan 3 Launch) ಯಶಸ್ವಿಯಾಗಿ ನಡೆದಿದೆ. ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ISRO) ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರ ಮೊಗದಲ್ಲಿ ಸಂತಸ ಮೂಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 ಎಂದು ಕರೆಯಲ್ಪಟುವ ಲಾಂಚ್ ವೆಹಿಕಲ್ ಮಾರ್ಕ್-3 'ಬಾಹುಬಲಿ ರಾಕೆಟ್' ಆಗಸದತ್ತ ಚಿಮ್ಮಿದೆ.
ಚಂದ್ರಯಾನ - 3 ಬಗ್ಗೆ ದೇಶವೇ ಹೆಮ್ಮೆಪಡುತ್ತಿರುವ ಕೆಜಿಎಫ್ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಚಂದ್ರಯಾನ 3ನ್ನು ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್ ಏನಂದಿದ್ದಾರೆ ಗೊತ್ತೇ? ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್, ವಿಕ್ರಮ್ ಲ್ಯಾಂಡರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ವ್ಯಂಗ್ಯವಾದ ಟ್ವೀಟ್ ನೋಡಿದ ನೆಟ್ಟಿಗರು ನಟನಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋದಿ ಹಾಗೂ ಆರ್ಎಸ್ಎಸ್ನ್ನು ಬಳಸಿಕೊಂಡು ನೀವು ದ್ವೇಷ ಬಿತ್ತುತ್ತೀರಿ. ಆದರೆ ಅವರನ್ನು ಬಳಸಿಕೊಂಡು ದೇಶವನ್ನು ಬೈಯುವುದೇ ನಿಮ್ಮ ಅಸಲಿ ವ್ಯಕ್ತಿತ್ವ ಎಂದಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ನನ್ನ ಕನ್ನಡ ಮತಾನಾಡುವ ಜನರೇ ಅವರಿಗೆ ಕನ್ನಡದಲ್ಲಿಯೇ ಕ್ಲಾಸ್ ತೆಗೆದುಕೊಳ್ಳಿ ಎಂದು ಇಂಗ್ಲಿಷ್ನಲ್ಲಿ ಬರೆದಿದ್ದಾರೆ.
ಮೋದಿ ಕುರಿತ ದ್ವೇಷದಲ್ಲಿ ಈ ವ್ಯಕ್ತಿ ಇನ್ನೇನು ಮಾಡುತ್ತಾರೋ, ದೇಶವನ್ನು, ಸೈಂಟಿಸ್ಟ್ಗಳನ್ನೂ ದ್ವೇಷಿಸಲು ಅವರ ಕಠಿಣ ಪರಿಶ್ರಮವನ್ನೂ ವ್ಯಂಗ್ಯ ಮಾಡಲಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ನೆಕ್ಸ್ಟ್ ಟೈಮ್ ಯಾರಾದ್ರು ಲ್ಯಾಡರ್ ಉಡಾವಣೆ ಮಾಡಿದ್ರೆ ಈ ಪ್ರಣ್ಯತ್ಮನ್ನು ಅದರ ಜೊತೆ ಕಳುಹಿಸಿ ಕೊಡಿ , ಇಲ್ಲ ದೇಶದ ಪ್ರಧಾನ ಮಂತ್ರಿಗಳಿಗೆ ಹಾಗೂ ನಮ್ಮ ಹೆಮ್ಮೆಯ ಇಸ್ರೋ ಮಾಡಿದ ಅವಮಾನಕ್ಕೆ ಜೈಲ್ ಗೆ ಹಾಕಿ ಎಂದಿದ್ದಾರೆ ಇನ್ನೊಬ್ಬರು.
ನಟ ಪ್ರಕಾಶ್ ರಾಜ್ ಅವರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು ವ್ಯಂಗ್ಯ ಮಾಡುವುದಕ್ಕೂ ಲಿಮಿಟ್ ಇದೆ. ದೇಶದ ವಿರುದ್ಧವೇ ಟ್ವೀಟ್ ಮಾಡುವುದಲ್ಲ ಎಂದು ಬುದ್ದಿ ಹೇಳಿದ್ದಾರೆ. ಬಹಳಷ್ಟು ಜನರು ನಟನ ಟ್ವೀಟ್ ಖಂಡಿಸಿದ್ದಾರೆ. ಕುತಬ್ ಮಿನಾರ್‌ನ ಅರ್ಧದಷ್ಟು ಎತ್ತರವಿರುವ 43.5 ಮೀಟರ್ ಉದ್ದದ ರಾಕೆಟ್, ಸುಮಾರು 40 ದಿನಗಳ ಪಯಣದ ಬಳಿಕ ಆಗಸ್ಟ್ 23 ಅಥವಾ 24ರಂದು ಚಂದ್ರನ ಮೇಲ್ಮೈ ಅನ್ನು ಮುಟ್ಟುವ ನಿರೀಕ್ಷೆ ಇದೆ.
KGF Actor Prakash Raj Tweets Mocking Chandrayaan 3 Netizens React.
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm