ಬ್ರೇಕಿಂಗ್ ನ್ಯೂಸ್
04-08-23 02:28 pm Source: News18 Kannada ಸಿನಿಮಾ
ಹೌದು, ಸಂಜು ವೆಡ್ಸ್ ಗೀತಾ-2 ಸಿನಿಮಾದ ಶೂಟಿಂಗ್ ಬೇರೆ ಬೇರೆ ಪ್ಲೇಸ್ ಅಲ್ಲಿ ಪ್ಲಾನ್ ಆಗಿದೆ. ದೊಡ್ಡ ದೊಡ್ಡ ಕಲಾವಿದರ ದಂಡು ಈ ಸಿನಿಮಾದಲ್ಲಿ ಇರಲಿದೆ. ಈ ಬಗ್ಗೆ ಯಾರೆಲ್ಲ ಇರ್ತಾರೆ ಅನ್ನುವ ಕುತೂಹಲ ಕೂಡ ಇದೆ. ಆದರೆ ಡೈರೆಕ್ಟರ್ ನಾಗಶೇಖರ್ ಇವರಲ್ಲಿ ಕೆಲವರನ್ನ ಅಪ್ರೋಚ್ ಮಾಡ್ತಿದ್ದಾರೆ. ಇನ್ನು ಕೆಲವರನ್ನ ಅಪ್ರೋಚ್ ಮಾಡೊದಿದೆ.
ಅಷ್ಟರಲ್ಲಿಯೇ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ನಾಗಶೇಖರ್ ಇನ್ನೂ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ತಮ್ಮ ಚಿತ್ರದ ಒಟ್ಟು ಶೂಟಿಂಗ್ ಅನ್ನ 60 ಕ್ಕೂ ಹೆಚ್ಚು ದಿನ ಪ್ಲಾನ್ ಮಾಡಿದ್ದೇವೆ. ಮುಂಬೈ ಮತ್ತು ಸ್ವಿಜರ್‌ಲ್ಯಾಂಡ್‌ನಲ್ಲೂ ಈ ಚಿತ್ರದ ಚಿತ್ರೀಕರಣ ಮಾಡೋ ಪ್ಲಾನ್ ಹಾಕಿಕೊಡಿದ್ದೇವೆ.

ಮುಂಬೈಯಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಶೂಟಿಂಗ್
ಇಡೀ ಸಿನಿಮಾದಲ್ಲಿ 30 ದಿನ ಮುಂಬಯಲ್ಲಿಯೇ ಚಿತ್ರೀಕರಿಸುತ್ತಿದ್ದೇವೆ. ಇನ್ನು 30 ದಿನ ಸ್ವಿಜರ್‌ಲ್ಯಾಂಡ್‌ನಲ್ಲಿಯೇ ಪ್ಲಾನ್ ಮಾಡಿದ್ದೇವೆ. ಹೀಗೆ ನಮ್ಮ ಚಿತ್ರದ ಚಿತ್ರೀಕರಣ ಪ್ಲಾನ್ ಆಗಿದೆ. ಇದೇ ತಿಂಗಳು 15 ರಂದು ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿಯೇ ನಡೆಯುತ್ತದೆ.
ಬೆಂಗಳೂರಿನ ಲಲಿತ್ ಅಶೋಕದಲ್ಲಿಯೇ ಸಂಜು ವೆಡ್ಸ್ ಗೀತಾ-2 ಸಿನಿಮಾಕ್ಕೆ ಮುಹೂರ್ತ ಇದೆ. ಈ ದಿನದಿಂದಲೇ ಸಿನಿಮಾ ಶೂಟಿಂಗ್ ಕೂಡ ಶುರು ಆಗುತ್ತಿದೆ. ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಎಲ್ಲ ತಯಾರಿನೂ ನಡೆಯುತ್ತಿದೆ. ಶೂಟಿಂಗ್ ಹೋಗಲು ಏನ್ ಬೇಕು ಆ ಎಲ್ಲ ಕೆಲಸವನೂ ನಡೆಯುತ್ತಿದೆ.

ಸಂಜು ವೆಡ್ಸ್ ಗೀತಾ-2 ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಇರೋದಿಲ್ಲ!
ಸಂಜು ವೆಡ್ಸ್ ಗೀತಾ-2 ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಏನೂ ಇರೋದಿಲ್ಲ. ಅನಂತ್ ನಾಗ್, ಪ್ರಕಾಶ್ ರೈ ಅವರು ಇರುತ್ತಾರೆ. ಇದು ಬಿಟ್ರೆ, ಸಂಜು ಪಾತ್ರಕ್ಕೆ ಶ್ರೀನಗರ ಕಿಟ್ಟಿ ಇದ್ದಾರೆ. ಗೀತಾ ಪಾತ್ರಕ್ಕೆ ರಚಿತಾ ರಾಮ್ ಒಪ್ಪಿ ಆಗಿದೆ.
ಸಂಜು ವೆಡ್ಸ್ ಗೀತಾ-2 ಚಿತ್ರವನ್ನ ನಾನೇ ನಿರ್ಮಿಸುತ್ತಿದ್ದೇನೆ. ರಮ್ಯಾ ಅವರು ಈ ಚಿತ್ರವನ್ನ ಪ್ರಸ್ತುತ ಪಡಿಸುತ್ತಿದ್ದಾರೆ. ಆದರೆ ಆ ಬಗ್ಗೆ ಅವರ ಜೊತೆಗೆ ಇನ್ನಷ್ಟು ಮಾತನಾಡಬೇಕು ಎಂದು ನಾಗಶೇಖರ್ ಹೇಳುತ್ತಾರೆ
ಸಂಜು ವೆಡ್ಸ್ ಗೀತಾ-2 ಸಿನಿಮಾಕ್ಕೆ ಕವಿರಾಜ್ ಸಾಹಿತ್ಯ
ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಶ್ರೀಧರ್ ಸಂಭ್ರಮ ಸಂಗೀತ ಮಾಡುತ್ತಿದ್ದಾರೆ. ಸಾಹಿತಿ ಕವಿ ರಾಜ್ ಈ ಸಲವೂ ತಮ್ಮ ಜೊತೆಗೆ ಇರ್ತಾರೆ. ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ.
ಆಯಾ ರಾಜ್ಯದ ಹೆಸರಾಂತ ಚಿತ್ರ ಸಾಹಿತಿಗಳಿಂದೇ ಹಾಡು ಬರೆಸೋ ಪ್ಲಾನ್ ಕೂಡ ಇದೆ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ. ಒಟ್ಟಾರೆ, ನಾಗಶೇಖರ್ ತಮ್ಮ ಚಿತ್ರ ಜೀವನದಲ್ಲಿ ಮತ್ತೊಂದು ಹಿಟ್ ಕೊಡುವ ಎಲ್ಲ ಪ್ಲಾನ್ ಮಾಡಿಕೊಳ್ತಿದ್ದಾರೆ. ದಿನೇ ದಿನೇ ಒಂದಿಲ್ಲ ಒಂದು ಸುದ್ದಿಯನ್ನು ಕೊಡ್ತಾ ಇದ್ದಾರೆ.
Sandalwood Sanju Weds Geetha 2 Movie going to Shoot in Mumbai Soon.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm