ಬ್ರೇಕಿಂಗ್ ನ್ಯೂಸ್
17-06-23 03:59 pm Source: news18 ಸಿನಿಮಾ
ಆದಿಪುರುಷ್ ಸಿನಿಮಾ ನೋಡಿದ ಬಹಳಷ್ಟು ಪ್ರೇಕ್ಷಕರು ಸಿನಿಮಾ ಕುರಿತು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ರಾಮಾಯಣದ ಕಥೆಯನ್ನು ಅದರ ಕಥಾ ಪಾತ್ರಗಳನ್ನು ತೋರಿಸಿರುವ ರೀತಿಗೆ ಜನರು ಚಿತ್ರ ತಂಡದ ಮೇಲೆ ಸಿಟ್ಟಾಗಿದ್ದಾರೆ. ಸಿನಿಮಾದ ಟೀಸರ್ ರಿಲೀಸ್ ಆದಾಗಲೇ ವ್ಯಾಪಕ ಟೀಕೆ ಎದುರಾಗಿತ್ತು. ಆಮೇಲೆ ಸಿನಿಮಾದ ಗ್ರಾಫಿಕ್ಸ್ಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಯಿತು. ಸಿನಿಮಾದಲ್ಲಿ ರಾಮ ಸೇರಿದಂತೆ ಹಲವು ಪ್ರಮುಖ ಪಾತ್ರಗಳ ಚಿತ್ರಣದ ಬಗ್ಗೆ ನೆಟ್ಟಿಗರು ಸಿಟ್ಟಾಗಿದ್ದಾರೆ.
ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿನಿಮಾ ವಿರುದ್ಧ ದೂರು ದಾಖಲಿಸಲಾಗಿದೆ. ದೆಹಲಿ ಹೈಕೋರ್ಟ್ನಲ್ಲಿ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಸಿನಿಮಾ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ರಾಮಾಯಣವನ್ನು ಆಧರಿಸಿದ ಸಿನಿಮಾ ಆಗಿರುವುದರಿಂದ ಚಿತ್ರತಂಡ ಬೇಕಾಬಿಟ್ಟಿಯಾಗಿ ತಮಗೆ ಬೇಕಾದಂತೆ ಬದಲಾವಣೆ ತಂದು ರಾಮಾಯಣ ಪಾತ್ರಗಳನ್ನು ಚಿತ್ರಿಸಿದ್ದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕ ಹಿತಾಸಕ್ತಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಧಾರ್ಮಿಕ ಮುಖಂಡರು/ಪಾತ್ರಗಳು/ವ್ಯಕ್ತಿಗಳನ್ನು ಕೆಟ್ಟ ಅಭಿರುಚಿಯಲ್ಲಿ ಬಿಂಬಿಸುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಸೂಕ್ತ ನೋಟಿಸ್ ನೀಡುವಂತೆ ಈ ಅರ್ಜಿಯಲ್ಲಿ ಕೇಳಲಾಗಿದೆ. 'ಆದಿಪುರುಷ್' ಚಲನಚಿತ್ರವನ್ನು ಪ್ರಮಾಣೀಕರಿಸದಂತೆ ಆದೇಶವನ್ನು ಹೊರಡಿಸಿ ಸಿನಿಮಾ ಪ್ರದರ್ಶಿಸದಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಭಾಸ್ ಅಭಿನಯದ ಆದಿಪುರುಷ್
ಆಲ್ ಇಂಡಿಯಾ ಆದಿಪುರುಷ್ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡುವುದಾದರೆ ಎಲ್ಲಾ ಭಾಷೆಗಳಲ್ಲಿ ಸೇರಿ ಒಟ್ಟು 90 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಪಠಾಣ್ ಹಾಗೂ ಕೆಜಿಎಫ್2 ನಂತರ ಕೊರೋನಾ ನಂತರದ ಅವಧಿಯಲ್ಲಿ ಮೊದಲ ದಿನ ಅತ್ಯಧಿಕ ಗಳಿಸಿದ ಮೂರನೇ ಸಿನಿಮಾ ಇದಾಗಿದೆ. Boxofficeindia.com ಪ್ರಕಾರ ಸಿನಿಮಾದ ತೆಲುಗು ವರ್ಷನ್ ಚೆನ್ನಾಗಿ ಓಡಿದೆ ಎನ್ನಲಾಗಿದೆ. ಹಿಂದಿಯಲ್ಲಿ 90 ಕೋಟಿಯಷ್ಟು ಕಲೆಕ್ಷನ್ ಸೇರಿ ಚೆನ್ನಾಗಿ ಕಲೆಕ್ಷನ್ ಮಾಡಿದೆ. ಸಿನಿಮಾ ಒಟ್ಟಾಗಿ 110 ರಿಂದ 140 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
Hindu Sena files write petition against adipurush in delhi high court.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm