ಬ್ರೇಕಿಂಗ್ ನ್ಯೂಸ್
26-05-23 01:03 pm Source: news18 ಸಿನಿಮಾ
ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಗುರುತಿಸಿಕೊಂಡ ನಟ ಕಬೀರ್ ಬೇಡಿ ತಮ್ಮ ಮೊದಲ ದಕ್ಷಿಣ ಭಾರತದ ಚಿತ್ರೀಕರಣ ಮುಗಿಸಿ ಮುಂಬೈಗೆ ಹೋಗಿದ್ದಾರೆ. ಕರಿ ಹೈದ ಕರಿ ಅಜ್ಜ ಸಿನಿಮಾ ಮೂಲಕ ಈ ಕಡೆಗೆ ಬಂದ ಕಬೀರ್ ಬೇಡಿ ಈಗ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಕಬೀರ್ ಬೇಡಿ ಅವರ ಕಂಠಸಿರಿ ಅದ್ಭುತವಾಗಿಯೇ ಇದೆ. ಸಾಕ್ಷ್ಯ ಚಿತ್ರಗಳಿಗೂ ಧ್ವನಿ ಕೊಡ್ತಾರೆ ಕಬೀರ್ ಬೇಡಿ. ಹೀಗಿರೋವಾಗ ತಮ್ಮ ಮೊದಲ ದಕ್ಷಿಣ ಭಾರತದ ಸಿನಿಮಾಕ್ಕೆ ಡಬ್ಬಿಂಗ್ ಮಾಡದೇ ಇರ್ತಾರಾ ? ಇಲ್ಲ ಬಿಡಿ, ಕರಿ ಹೈದ ಕರಿ ಅಜ್ಜ ಸಿನಿಮಾದ ಆರಂಭದಲ್ಲಿಯೇ ಈ ಚಿತ್ರಕ್ಕೆ ನಾನೇ ಡಬ್ ಮಾಡುತ್ತೇನೆ ಅಂತೇ ಹೇಳಿದ್ದರು.
ಚಿತ್ರದ ಡೈರೆಕ್ಟರ್ ಸುಧೀರ್ ಅತ್ತಾವರ್ ಈ ಮಾತನ್ನ ಅಂದು ಕೇಳಿ ಸುಮ್ಮನಾಗಿದ್ದರು. ಆದರೆ ಕಬೀರ್ ಬೇಡಿ ಅದನ್ನ ಅಷ್ಟಕ್ಕೆ ಬಿಟ್ಟಿಲ್ಲ ನೋಡಿ. ಮುಂಬೈನ ಪ್ರತಿಷ್ಠಿತ ಸ್ಟುಡಿಯೋದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ. ಕಬೀರ್ ಬೇಡಿ ಅವರಿಗೆ ಹಿಂದಿ ಚೆನ್ನಾಗಿ ಗೊತ್ತಿದೆ. ಇಂಗ್ಲೀಷ್ ಭಾಷೆ ಮೇಲೆ ಹಿಡಿತವಿದೆ. ಯುರೋಪಿಯನ್ ಭಾಷೆಯನ್ನ ಕೂಡ ಕಬೀರ್ ಬೇಡಿ ತಿಳಿದುಕೊಂಡಿದ್ದಾರೆ.



ಕಬೀರ್ ಬೇಡಿ ಇದೀಗ ಕರಿ ಹೈದ ಕರಿ ಅಜ್ಜ ಸಿನಿಮಾದ ಮೂಲಕ ಕನ್ನಡ, ಮಲೆಯಾಳಂ ಹಾಗೂ ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಲಿಕೆ ಮೂಲಕ ಕರಿ ಹೈದ ಕರಿ ಅಜ್ಜ ಚಿತ್ರಕ್ಕೆ ಡಬ್ಬಿಂಗ್ ಕೂಡ ಮಾಡಿದ್ದಾರೆ. ಕಬೀರ್ ಬೇಡಿ ಈ ಸಿನಿಮಾದಲ್ಲಿ ಉದ್ಯಾವರ ಅರಸರ ಪಾತ್ರವನ್ನ ನಿರ್ವಹಿಸಿದ್ದಾರೆ. ಆ ಪಾತ್ರಕ್ಕೇನೆ ಕಬೀರ್ ಬೇಡಿ ಈಗ ಡಬ್ಬಿಂಗ್ ಈಗ ಮಾಡುತ್ತಿದ್ದಾರೆ. ಪ್ರತಿ ದಿನ ಎರಡೋ ಇಲ್ಲವೇ ಮೂರೋ ಡೈಲಾಗ್‌ಗಳನ್ನ ಡಬ್ಬಿಂಗ್ ಮಾಡುತ್ತಲೇ, ಕಬೀರ್ ಬೇಡಿ ತಮ್ಮ ಈ ಪಾತ್ರದ ಡಬ್ಬಿಂಗ್ ಕೆಲಸವನ್ನ ಮುಗಿಸಿಕೊಡ್ತಿದ್ದಾರೆ. ಈ ಮೂಲಕ ಕಬೀರ್ ಬೇಡಿ ತಮ್ಮ ಧ್ವನಿಯಲ್ಲಿಯೇ ಉದ್ಯಾವರ ಅರಸರ ಪಾತ್ರಕ್ಕೆ ನೈಜತೆ ತಂದುಕೊಡುತ್ತಿದ್ದಾರೆ.
bollywood actor kabir bedi dubbed for kannada movie at mumbai.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am