ಬ್ರೇಕಿಂಗ್ ನ್ಯೂಸ್
23-05-23 12:59 pm Source: news18 ಸಿನಿಮಾ
ಜೂನಿಯರ್ ಎನ್ಟಿಆರ್ ಅವರ ಒಂಭತ್ತು ಜನ ಅಭಿಮಾನಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ ಸಂದರ್ಭವೇ ಅವರ ಅಭಿಮಾನಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಡುಗಳನ್ನು ಬಲಿಕೊಟ್ಟು ನಟನ ಬ್ಯಾನರ್ಗೆ ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪ್ರಾಣಿಗಳ ಬಲಿ ನಿಷೇಧಿಸಲಾಗಿದ್ದು ಆ ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿಮಾನಿಗಳು ಅರೆಸ್ಟ್ ಆಗಿದ್ದಾರೆ.
ವಿಜಯವಾಡದಲ್ಲಿ ಘಟನೆ ನಡೆದಿದೆ. ನಟನ ಅಭಿಮಾನಿಗಳು ನಟನ ಬರ್ತ್ಡೇ ಆಚರಣೆ ಭಾಗವಾಗಿ ಥಿಯೇಟರ್ ಮುಂದೆ ಅವರ ಫ್ಲೆಕ್ಸಿ ಬ್ಯಾನರ್ಗೆ ಆಡುಗಳನ್ನು ಬಲಿ ಕೊಟ್ಟು ರಕ್ತ ಚಿಮ್ಮುವಂತೆ ಮಾಡಿದ್ದಾರೆ. ಅಭಿಮಾನಿಗಳು ಎರಡು ಆಡುಗಳನ್ನು ಸಾಯಿಸಿ ರಕ್ತಾಭಿಷೇಕ ಮಾಡಿದ್ದಾಗಿ ಆರೋಪಿಸಲಾಗಿದೆ. ನಟನ ಬರ್ತ್ಡೇ ಪ್ರಯುಕ್ತ ಅವರ ಹಳೆಯ ಸಿನಿಮಾ ಸಿಂಹಾದ್ರಿ ರಿ ರಿಲೀಸ್ ಆಗಿದೆ. ಈ ಸಂದರ್ಭ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ.

ಪಿ. ಶಿವ ನಾಗ ರಾಜು, ಕೆ ಸಾಯಿ, ಜಿ ಸಾಯಿ, ಡಿ ನಾಗ ಭೂಷಣಂ, ವಿ ಸಾಯಿ, ಪಿ ನಾಗೇಶ್ವರ ರಾವ್, ವೈ. ಧರಣಿ, ಪಿ. ಶಿವ ಹಾಗೂ ಬಿ. ಅನಿಲ್ ಕುಮಾರ್ ಎಂಬವರನ್ನು ಈ ಘಟನೆಗೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ. ಶಿವ ನಾಗ ರಾಜು ಹಾಗೂ ಅವರ ಸ್ನೇಹಿತರು ಸಿರಿ ಕೃಷ್ಣ ಹಾಗೂ ಸಿರಿ ವೆಂಕಟ ಥಿಯೇಟರ್ನಲ್ಲಿ ಮೇ 20ರಂದು ನಟನ ಬರ್ತ್ಡೇ ಆಚರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಆಡನ್ನು ಬಲಿಕೊಟ್ಟ ಘಟನೆಯೂ ನಡೆದಿದೆ.

ನಟನ ಬರ್ತ್ಡೇ ಸಂದರ್ಭ ಇನ್ನೊಂದು ಘಟನೆಯಲ್ಲಿ ನಟ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಚಿತ್ರಮಂದಿರದೊಳಗೆ ಬೆಂಕಿ ಅವಘಡ ಸಂಭವಿಸುವಂತೆ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೀಟುಗಳಿಗೂ ಹಾನಿಯಾಗಿದೆ. ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
nine fans of jr ntr arrested for sacrificing goats.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 11:51 am
HK News Staffer
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
26-09-26 11:04 am
HK News Staffer
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ಶಶಿಕುಮಾರ್ ನೇ...
24-09-26 10:46 pm
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm