ಬ್ರೇಕಿಂಗ್ ನ್ಯೂಸ್
17-05-23 12:54 pm Source: news18 ಸಿನಿಮಾ
ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ವರುಣ್ ತೇಜ್ ಅವರ ಮದುವೆ ಬಗ್ಗೆ ಕೆಲ ದಿನಗಳಿಂದಲೂ ರೂಮರ್ಸ್ ಹರಿದಾಡುತ್ತಿದೆ. ಮೆಗಾ ಬ್ರದರ್ ನಾಗಬಾಬು ಅವರೇ ಮೆಗಾ ಹೀರೋ ವರುಣ್ ತೇಜ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವು ಭಾರೀ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗಬಾಬು ವರುಣ್ ತೇಜ್ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ವರುಣ್ ತೇಜ್ ಹೇಳಿದ್ದಾರೆ. ಅಂದಿನಿಂದ ವರುಣ್ ತೇಜ್ ಮದುವೆಯ ಬಗ್ಗೆ ವಿವಿಧ ವದಂತಿಗಳು ಹರಡುತ್ತಿವೆ.
ವರುಣ್ ತೇಜ್ ಯುವ ನಾಯಕಿ ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಿದ್ದು, ಆಕೆಯೂ ಮದುವೆಯಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಇಬ್ಬರೂ ಸಹ ಸಖತ್ ಕ್ಲೋಸ್ ಆಗಿದ್ದಾರೆ. ಈ ಸುದ್ದಿಗೆ ಮೆಗಾ ಫ್ಯಾಮಿಲಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ವರುಣ್ ತೇಜ್ ಮದುವೆ ಕುರಿತಾದ ಫೋಟೋವೊಂದು ನಗರದಲ್ಲಿ ವೈರಲ್ ಆಗುತ್ತಿದೆ. ವರುಣ್ ತೇಜ್ ಬ್ಯಾಚುಲರ್ ಲೈಫ್ ಗೆ ವಿದಾಯ ಹೇಳುವ ಸಮಯ ಬಂದಿದ್ದು, ಲಾವಣ್ಯ ತ್ರಿಪಾಠಿ ಜೊತೆ ಮದುವೆ ನಡೆಯಲಿದೆ ಎನ್ನುವ ಸುದ್ದಿ ಆಪ್ತ ಮೂಲಗಳಿಂದ ಬಂದಿದೆ.
ಜೂನ್ ತಿಂಗಳಿನಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ನಡೆಯಲಿದೆಯಂತೆ. ಸದ್ಯ ಮದುವೆ ಸಂಬಂಧಿಸಿದ ಕೆಲಸದಲ್ಲಿ ಮೆಗಾ ಫ್ಯಾಮಿಲಿ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ. ವರುಣ್ ತೇಜ್ ಅವರ ನಿಶ್ಚಿತಾರ್ಥ ಸಮಾರಂಭವು ಮೆಗಾ ಫ್ಯಾಮಿಲಿ ಜೊತೆಗೆ ಕೆಲವೇ ಜನರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗ್ತಿದೆ. ಈ ವರ್ಷಾಂತ್ಯದಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರಿಬ್ಬರ ಪ್ರೀತಿಗೆ ಎರಡೂ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರಂತೆ. ಅವರೆಲ್ಲರೂ ಕುಳಿತು ಮಾತನಾಡಿದ್ದು, ಈ ವರ್ಷದ ಕೊನೆಯಲ್ಲಿ ಮದುವೆಯಾಗಲು ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
ವರುಣ್ ತೇಜ್ , ತಂದೆ ಹಾಗೂ ನಟ ನಾಗಬಾಬು ಮತ್ತು ಬ್ರಹ್ಮಾನಂದಂ ಮುಖ್ಯ ಭೂಮಿಕೆಯಲ್ಲಿ ನಟಿಸಿದ 'ಹ್ಯಾಂಡ್ಸಪ್' ಚಿತ್ರದಲ್ಲಿ ಚಿರಂಜೀವಿ ಬಾಲ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶ್ರೀಕಾಂತ್ ಅಡ್ಡಾಳ ನಿರ್ದೇಶನದ 'ಮುಕುಂದ' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಆ ನಂತರ ಕ್ರಿಶ್ ನಿರ್ದೇಶನದ ‘ಕಂಚೆ’ ಸಿನಿಮಾದಲ್ಲಿ ನಟನಾಗಿ ಮತ್ತೊಂದು ಹೆಜ್ಜೆ ಇಟ್ಟರು. ಆ ನಂತರ ಲೋಫರ್ ಮತ್ತು ಮಿಸ್ಟರ್ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಶೇಖರ್ ಕಮ್ಮುಲ ನಿರ್ದೇಶನದ 'ಫಿದಾ' ಸಿನಿಮಾ ಬ್ಲಾಕ್ ಬಸ್ಟರ್ ಸಕ್ಸಸ್ ಆಗಿತ್ತು.
varun tej marriage with lavanya tripathi wedding date final.
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm