ಬ್ರೇಕಿಂಗ್ ನ್ಯೂಸ್
24-04-23 01:06 pm Source: news18 ಸಿನಿಮಾ
ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳ ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸಿದ್ದಾರೆ. ಡಾ. ರಾಜ್‌ಕುಮಾರ್ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ.
ವರನಟನ ನೆನಪು ಅಮರ
ಸೋಶಿಯಲ್ ಮೀಡಿಯಾ ಮೂಲಕ ಅನೇಕ ಸಿನಿಮಾ ಹಾಗೂ ಇತರೆ ಕ್ಷೇತ್ರದ ಗಣ್ಯರು ಕೂಡ ವರನಟ ಡಾ.ರಾಜ್ ಕುಮಾರ್ ಅವರ ನೆನಪನ್ನು ಮೆಲುಕು ಹಾಕಿದ್ದಾರೆ. ಕುಟುಂಬಸ್ಥರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಜ್ ತೋರಿಸಿದ ಹಾದಿಯಲ್ಲಿ ದೊಡ್ಮನೆ ಕುಡಿಗಳು
ಡಾ.ರಾಜ್ ಕುಮಾರ್ ತೋರಿಸಿದ ದಾರಿಯಲ್ಲಿ ಬದುಕುತ್ತಿರುವ ಅವರ ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯ ಫೋಟೋ ಹಂಚಿಕೊಂಡರು. ಅಷ್ಟೇ ಅಲ್ಲದೇ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಮಾವನ ಫೋಟೋ ಜೊತೆ ಉತ್ತಮ ಬಹರ ಪೋಸ್ಟ್ ಮಾಡಿದ್ದಾರೆ.

ವಿಶೇಷವಾಗಿ ಶುಭಕೋರಿದ ಅಶ್ವಿನಿ
ಡಾ.ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರೀತಿಯ ಮಾವನ ಸರಳತೆ ಹಾಗೂ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜ್‌ಕುಮಾರ್ ಸಿನಿ ಜೀವನದ ಸ್ಪೆಷಲ್ ಸಿನಿಮಾಗಳು
ಕನ್ನಡದಲ್ಲಿ ಬಂದ ಆಫ್ ಬೀಟ್ ಸಿನಿಮಾಗಳಲ್ಲಿ ನಾಂದಿ ಸಿನಿಮಾನೇ ಮೊದಲ ಸಿನಿಮಾ ಆಗಿತ್ತು. ರಾಜ್‌ಕುಮಾರ್ ಅಭಿನಯದ ಬಾಂಡ್ ಸಿನಿಮಾಗಳೂ ಏನು ಕಮ್ಮಿ ಇದ್ದವೇ? ದೊರೈ-ಭಗವಾನ್ ನಿರ್ದೇಶನದ ಈ ಬಾಂಡ್ ಸರಣಿ ಸಿನಿಮಾಗಳು ಅಣ್ಣಾವ್ರಗೆ ಭಾರೀ ದೊಡ್ಡ ಹೆಸರನ್ನ ತಂದುಕೊಟ್ಟಿವೆ. ಇಂಡಿಯನ್ ಸಿನಿಮಾರಂಗದಲ್ಲಿಯೇ ರಾಜ್ ಮೊದಲ ಬಾಂಡ್ ಸಿನಿಮಾ ಹೀರೋ ಅನ್ನೋ ಮಟ್ಟವನ್ನ ತಂದುಕೊಟ್ಟಿವೆ.

ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ ಕಸ್ತೂರಿ ನಿವಾಸ ನಿಜಕ್ಕೂ ಗ್ರೇಟ್ ಸಿನಿಮಾ ಆಗಿದೆ. ಹೊಸ ಸ್ಪರ್ಶದಿಂದ ಮತ್ತೊಮ್ಮೆ ರಿಲೀಸ್ ಆದಾಗಲೂ ಕಸ್ತೂರಿ ನಿವಾಸ ಸೂಪರ್ ಹಿಟ್ ಆಗಿತ್ತು. ಬಂಗಾರದ ಮನುಷ್ಯ ಯಾರಿಗೆ ಗೊತ್ತಿಲ್ಲ ಹೇಳಿ?
ಬಂಗಾರದ ಮನುಷ್ಯನ ಬಂಗಾರದಂತಹ ಅಭಿಮಾನಿಗಳು
ಈ ಸಿನಿಮಾ ರಾಜ್ ಜೀವನದ ವಿಶೇಷ ಸಿನಿಮಾ ಆಗಿದೆ. ಈ ಚಿತ್ರ ಬಂದಾಗ, ಅನೇಕರು ವಾಪಸ್ ತಮ್ಮ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿರೋ ಸತ್ಯ ಈಗಲೂ ಇತಿಹಾಸ ಪುಟದಲ್ಲಿ ಹೊಳೆಯುತ್ತದೆ. ಅಷ್ಟು ವಿಶೇಷವಾದ ಸಿನಿಮಾಗಳನ್ನ ಕೊಡುತ್ತಲೇ ರಾಜ್ ಕುಮಾರ್ ಅಜರಾಮರ ಆಗಿದ್ದಾರೆ.
ರಾಜ್‌ಕುಮಾರ್ ಅವರ ಜನ್ಮದಿನ ಬಂತು ಅಂದ್ರೇ ಅಂದು ಕಂಠೀರವ ಸ್ಟುಡಿಯೋ ಆವರಣದಲ್ಲಿರೋ ರಾಜ್ ಸಮಾಧಿ ಬಳಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ರಾಜ್‌ಕುಮಾರ್ ಅವರನ್ನ ದೇವರ ರೀತಿಯಲ್ಲಿ ಆರಾಧಿಸೋ ಅಭಿಮಾನಿಗಳು ತಮ್ಮ ದೇವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸುತ್ತಾರೆ.
rajkumar 94th birthday a sea of fans flocked to the memorial.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 09:32 pm
HK News Desk
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm